ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್

ಆಗಸ್ಟ್​ 15ರಂದು ಬಿಡುಗಡೆ ಆಗಲಿರುವ ‘ಸ್ತ್ರೀ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ಗ್ಲಾಮರಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಹಾಡಿನಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಡಬಲ್​ ಆಗಿದೆ. ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಳ್ಳುತ್ತಿರುವ ಈ ಹಾಡಿಗೆ ಅಭಿಮಾನಿಗಳಿಂದ ಪಾಸಿಟಿವ್​ ಕಮೆಂಟ್​ ಬರುತ್ತಿವೆ. ಈ ಸಾಂಗ್​ನಿಂದ ‘ಸ್ತ್ರೀ 2’ ಸಿನಿಮಾಗೆ ಸಖತ್​ ಅನುಕೂಲ ಆಗಲಿದೆ.

ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್
ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on: Jul 24, 2024 | 9:34 PM

ನಟಿ ತಮನ್ನಾ ಭಾಟಿಯಾ ಅವರು ಐಟಂ ಸಾಂಗ್​ಗಳ ಮೂಲಕವೂ ಹೆಚ್ಚು ಫೇಮಸ್​ ಆಗಿದ್ದಾರೆ. ಈ ಮೊದಲು ‘ಕೆಜಿಎಫ್​’, ‘ಜೈಲರ್​’ ಮುಂತಾದ ಸಿನಿಮಾಗಳ ಸ್ಪೆಷಲ್​ ಸಾಂಗ್​ಗಳಲ್ಲಿ ಕುಣಿದ ಅವರು ಈಗ ‘ಸ್ತ್ರೀ 2’ ಸಿನಿಮಾದ ಐಟಂ ಸಾಂಗ್​ನಲ್ಲಿ ಕಣ್ಮನ ಸೆಳೆಯುವಂತೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಲು ಈ ಸಾಂಗ್ ಕಾರಣ ಆಗಿದೆ. ಐಟಂ ಸಾಂಗ್​ಗೆ ತಮನ್ನಾ ಭಾಟಿಯಾ ಅವರು ಹೊಸ ಮೆರುಗು ತುಂಬಿದ್ದಾರೆ. ಬಾಲಿವುಡ್​ ಮಂದಿ ತಮನ್ನಾ ಅವರ ಡ್ಯಾನ್ಸ್​ ನೋಡಿ ಬೆರಗಾಗಿದ್ದಾರೆ.

ಆಗಸ್ಟ್​ 15ರಂದು ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್​, ರಾಜ್​ಕುಮಾರ್​ ರಾವ್​, ಅಪಾರಶಕ್ತಿ ಖುರಾನಾ, ಅಭಿಷೇಕ್​ ಬ್ಯಾನರ್ಜಿ, ಪಂಕಜ್​ ತ್ರಿಪಾಠಿ ಮುಂತಾದವರು ನಟಿಸಿದ್ದಾರೆ. 2018ರಲ್ಲಿ ‘ಸ್ತ್ರೀ’ ಸಿನಿಮಾ ಬಂದಿತ್ತು. ಆ ಚಿತ್ರದಲ್ಲಿ ನೋರಾ ಫತೇಹಿ ಅವರು ಐಟಂ ಡ್ಯಾನ್ಸ್​ ಮಾಡಿದ್ದರು. ಈಗ ಸೀಕ್ವೆಲ್​ನಲ್ಲಿ ಆ ಅವಕಾಶ ತಮನ್ನಾ ಭಾಟಿಯಾಗೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ತಮನ್ನಾ ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ಆರತಕ್ಷತೆಗೆ ಪಳಪಳನೆ ಹೊಳೆಯುತ್ತಾ ಬಂದ ತಮನ್ನಾ ಭಾಟಿಯಾ

ಅಮರ್​ ಕೌಶಿಕ್​ ಅವರು ‘ಸ್ತ್ರೀ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದಿನೇಶ್​ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ‘ಸ್ತ್ರೀ’ ಹಿಟ್​ ಆಗಿದ್ದರಿಂದ ‘ಸ್ತ್ರೀ 2’ ಕೂಡ ಜನರನ್ನು ಸೆಳೆಯಲಿದೆ ಎಂಬ ನಂಬಿಕೆ ಇದೆ. ಅದಕ್ಕೆ ತಕ್ಕಂತೆ ತಮನ್ನಾ ಭಾಟಿಯಾ ಅವರ ಸಾಂಗ್​ ಸದ್ದು ಮಾಡುತ್ತಿದೆ. ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ.

‘ಜೈಲರ್​’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಕುಣಿದ ‘ಕಾವಾಲಯ್ಯ..’ ಹಾಡು ಜನಮೆಚ್ಚುಗೆ ಪಡೆದಿತ್ತು. ಆ ಸಿನಿಮಾದ ಗೆಲುವಿನಲ್ಲಿ ಈ ಹಾಡಿನ ಕೊಡುಗೆ ಕೂಡ ದೊಡ್ಡದು. ಅದರ ಕ್ರೆಡಿಟ್​ ತಮನ್ನಾಗೂ ಸಲ್ಲಲೇಬೇಕು. ಅಂತಹ ಮ್ಯಾಜಿಕ್​ ಈಗ ‘ಸ್ತ್ರೀ 2’ ಸಿನಿಮಾದಲ್ಲೂ ಮರುಕಳಿಸುವ ಸಾಧ್ಯತೆ ಗೋಚರಿಸಿದೆ. ಈ ಸಿನಿಮಾದ ಹಾಡಿನಲ್ಲಿ ಸಖತ್​ ಗ್ಲಾಮರಸ್​ ಆಗಿ ತಮನ್ನಾ ಅವರು ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳಿಗೆ ಈ ಹಾಡು ತುಂಬ ಇಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.