ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವೆ ಮಹತ್ವದ ಭೇಟಿ, ಸಂಯುಕ್ತ ವಿರೋಧ ಪಕ್ಷ ರಚನೆ ಕುರಿತು ನಡೆಯಲಿದೆ ಚರ್ಚೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2021 | 4:26 PM

ಮಂಗಳವಾರ ಹೇಳಕೆಯೊಂದನ್ನು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಮಮತಾ ಅವರಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇದೆ ಅಂತ ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿ ಆನಂದ ಶರ್ಮ ಸಹ ಬಿಜೆಪಿಯ ಓಟವನ್ನು ತಡೆಯಲು, ಸಮಾನ-ಮನಸ್ಕ ಪಕ್ಷಗಳಿ ಒಂದುಗೂಡಬೇಕು ಎಂದು ಹೇಳಿದ್ದರು.

ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವೆ ಮಹತ್ವದ ಭೇಟಿ, ಸಂಯುಕ್ತ ವಿರೋಧ ಪಕ್ಷ ರಚನೆ ಕುರಿತು ನಡೆಯಲಿದೆ ಚರ್ಚೆ
ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ
Follow us on

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು ಒಂದು ವರ್ಷದ ನಂತರ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು (ಬುಧವಾರ) ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. 2020ರಲ್ಲಿ ವಿರೋಧ ಪಕ್ಷದ ನಾಯಕರು ಎನ್ಇಇಟಿ ವಿರುದ್ಧ ವರ್ಚ್ಯುಯಲ್ ಸಭೆ ನಡೆಸಿದಾ್ ಇವರಿಬ್ಬರು ಭೇಟಿಯಾಗಿದ್ದರು. ಮಮತಾ ಅವರು ಮೇ ತಿಂಗಳು ತಮ್ಮ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ನಂತರ ಅವರೊಂದಿಗೆ ಸೋನಿಯಾ ಗಾಂಧಿಯವರು ಭೇಟಿ ಮಾಡುತ್ತಿರುವುದು ಒಂದು ಮಹತ್ವಪೂರ್ಣ ಸಂಗತಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ಭೇಟಿಯಾಗುವ ಉತ್ಸುಕತೆಯನ್ನು ಇಬ್ಬರು ನಾಯಕರೂ ವ್ಯಕ್ತಪಡಿಸಿದ್ದು ಗಮನಿಸಬೇಕಿರುವ ವಿಷಯವಾಗಿದೆ. ಅವರಿಬ್ಬರ ನಡುವೆ ಆಭಿಮಾನ, ಪ್ರೀತಿ ಮತ್ತು ಗೌರವಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಮಮತಾ ಅವರು 2024 ರ ಚುನಾವಣೆಯಲ್ಲಿ ಬಿಜೆಪಿಯನ್ನು ತಡೆಯಲು ಒಂದು ಸಂಯುಕ್ತ ವಿರೋಧ ಪಕ್ಷದ ಅವಶ್ಯಕತೆಯಿರುವುದು ಬಹಿರಂಗವಾಗಿ ಹೇಳಿದ್ದರು ಮತ್ತು ಕಾಂಗ್ರೆಸ್ ಇಲ್ಲದೆ ಯಾವುದೇ ಸಂಯುಕ್ತ ವಿರೋಧ ಪಕ್ಷ ಪರಿಪೂರ್ಣವೆನಿಸದು ಅಂತ ಪ್ರತಿಪಾದಿಸಿದ್ದರು. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್​ ಸಹ ತನ್ನ ಧೋರಣೆಯಲ್ಲಿ ಬದಲಾವಣೆ ತಂದುಕೊಂಡು, ವಿರೋಧ ಪಕ್ಷಗಳ ಒಕ್ಕೂಟದ ಬಗ್ಗೆ ಒಲವು ತೋರಿದೆ.

ಮಂಗಳವಾರ ಹೇಳಕೆಯೊಂದನ್ನು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಮಮತಾ ಅವರಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇದೆ ಅಂತ ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿ ಆನಂದ ಶರ್ಮ ಸಹ ಬಿಜೆಪಿಯ ಓಟವನ್ನು ತಡೆಯಲು, ಸಮಾನ-ಮನಸ್ಕ ಪಕ್ಷಗಳಿ ಒಂದುಗೂಡಬೇಕು ಎಂದು ಹೇಳಿದ್ದರು.

ಬುಧವಾರದಂದೇ ಮಮತಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಸಹ ಭೇಟಿಯಾಗಲಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸದಂತೆ ತಡೆದಿರುವ ಕೀರ್ತಿ ಕೇಜ್ರಿವಾಲ ಹೊಂದಿದ್ದಾರೆ. ಹಾಗೆ ನೋಡಿದರೆ, ಮಮತಾ ಅವರು ದೆಹಲಿಗೆ ಬಂದಾಗಲೆಲ್ಲ ಅವರನ್ನು ಭೇಟಿಯಾಗಿ ಮಾತಾನಾಡಿಸುವ ಪರಿಪಾಠವನ್ನು ಕೇಜ್ರಿವಾಲ್ ಇಟ್ಟುಕೊಂಡಿರುವರಾದರೂ ಇವರಿಬ್ಬರ ಈ ಸಲದ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ. ಯಾಕೆಂದರೆ, ಕೇಜ್ರಿವಾಲ ಅವರು ಮಮತಾರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ ಮತ್ತು ಅಕೆಯ ಮಾತಿಗೆ ಗೌರವ ನೀಡುತ್ತಾರೆ. ವಿರೋಧ ಪಕ್ಷಗಳ ಒಕ್ಕೂಟ ರಚನೆಯಾದರೆ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಒಂದು ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ.

ಎನ್​ಸಿಪಿ ಸಂಸ್ಥಾಪಕ ಶರದ್​ ಪವಾರ ಸಹ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದು ಸಾಧ್ಯವಾದರೆ, ಈ ತ್ರಿಮೂರ್ತಿಗಳಿಂದ-ಮಮತಾ, ಸೋನಿಯಾ ಮತ್ತು ಪವಾರ್ ಅವರ ತ್ರಿಕೋನ ವಿರೋಧ ಪಕ್ಷದ ಬಲವು ದೇಶದ ಮೂರು ಭಾಗಗಳಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪಶ್ಚಿಮ ಭಾರತದಲ್ಲಿ ಪವಾರ್, ಪೂರ್ವ ಭಾಗದಲ್ಲಿ ಮಮತಾ ಮತ್ತು ಕೇಂದ್ರದಲ್ಲಿ ಸೋನಿಯಾ ತಮ್ಮ ವರ್ಚಸ್ಸು ಬೀರಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮಣಿಸಲು ದೇಶದ ಅಷ್ಟೂ ವಿಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊರಲಿದ್ದಾರಾ ದೀದಿ? ಮಮತಾ ಮಾತು ಕೇಳಲಿದೆಯಾ ಕಾಂಗ್ರೆಸ್?​