WCRC Leaders Global Summit: ಟಿವಿ9 ಎಂಡಿ, ಸಿಇಒ ಬರುಣ್ ದಾಸ್​ಗೆ ವಿಶ್ವ ನಾಯಕ, ನ್ಯೂಸ್ 9 ಪ್ಲಸ್​ಗೆ ಅತ್ಯುತ್ತಮ ಬ್ರ್ಯಾಂಡ್ ಪ್ರಶಸ್ತಿ

|

Updated on: Oct 06, 2023 | 11:12 PM

ಟಿವಿ9 ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರಿಗೆ 'ವಿಶ್ವದ ಅತ್ಯುತ್ತಮ ನಾಯಕ-ಹಾಲ್ ಆಫ್ ಫೇಮ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಟಿವಿ 9 ನೆಟ್ವರ್ಕ್​​ ವಿಶ್ವದ ಮೊದಲ ಮತ್ತು ಏಕೈಕ ಸುದ್ದಿ ಒಟಿಟಿ ಪ್ಲಾಟ್ಫಾರ್ಮ್ ನ್ಯೂಸ್ 9 ಪ್ಲಸ್ ಅನ್ನು 'ನ್ಯೂಸ್ ಮೀಡಿಯಾ 2023 ರಲ್ಲಿ ವಿಶ್ವದ ಅತ್ಯುತ್ತಮ ಬ್ರ್ಯಾಂಡ್' ಎಂದು ಗುರುತಿಸಲಾಗಿದೆ.

WCRC Leaders Global Summit: ಟಿವಿ9 ಎಂಡಿ, ಸಿಇಒ ಬರುಣ್ ದಾಸ್​ಗೆ ವಿಶ್ವ ನಾಯಕ, ನ್ಯೂಸ್ 9 ಪ್ಲಸ್​ಗೆ ಅತ್ಯುತ್ತಮ ಬ್ರ್ಯಾಂಡ್ ಪ್ರಶಸ್ತಿ
ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದ ಟಿವಿ9 ಎಂಡಿ, ಸಿಇಒ ಬರುಣ್ ದಾಸ್
Follow us on

ಲಂಡನ್, ಅಕ್ಟೋಬರ್ 6: ವರ್ಲ್ಡ್ ಕನ್ಸಲ್ಟಿಂಗ್ ಮತ್ತು ರಿಸರ್ಚ್ ಕಾರ್ಪೊರೇಷನ್ ಇಂಟರ್ನ್ಯಾಷನಲ್​ ಆಯೋಜಿಸಿದ್ದ ಡಬ್ಲ್ಯುಸಿಆರ್ಸಿ ಲೀಡರ್ಸ್ ಗ್ಲೋಬಲ್ ಶೃಂಗಸಭೆ (WCRC Leaders Global Summit) ಯಲ್ಲಿ ಟಿವಿ9 ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಅವರಿಗೆ ‘ವಿಶ್ವದ ಅತ್ಯುತ್ತಮ ನಾಯಕ-ಹಾಲ್ ಆಫ್ ಫೇಮ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಟಿವಿ 9 ನೆಟ್ವರ್ಕ್​​ ವಿಶ್ವದ ಮೊದಲ ಮತ್ತು ಏಕೈಕ ಸುದ್ದಿ ಒಟಿಟಿ ಪ್ಲಾಟ್ ಫಾರ್ಮ್ ನ್ಯೂಸ್ 9 ಪ್ಲಸ್ ಅನ್ನು ‘ನ್ಯೂಸ್ ಮೀಡಿಯಾ 2023 ರಲ್ಲಿ ವಿಶ್ವದ ಅತ್ಯುತ್ತಮ ಬ್ರ್ಯಾಂಡ್’ ಎಂದು ಗುರುತಿಸಲಾಗಿದೆ.

ಈ ವೇಳೆ ಮಾತನಾಡಿದ ಬರುಣ್ ದಾಸ್​, “ಸುದ್ದಿ ನೆಟ್ವರ್ಕ್ ಅನ್ನು ನಡೆಸುವುದು ಸವಾಲಿನ ಕೆಲಸವಾಗಿದೆ. ಸುದ್ದಿ ವಾಹಿನಿಯನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಬಹುಶಃ ಅತ್ಯಂತ ಸಂಕೀರ್ಣ ಅಂಶವೆಂದರೆ, ಲಾಭದಾಯಕ ವ್ಯವಹಾರದೊಂದಿಗೆ ಪ್ರಜಾಪ್ರಭುತ್ವದ ಕಾವಲುಗಾರನ ಜವಾಬ್ದಾರಿಯನ್ನು ಸಮತೋಲನಗೊಳಿಸುವುದು ಒಂದು ಅಸಾಧಾರಣ ಕಾರ್ಯವಾಗಿದೆ.

ಇದನ್ನೂ ಓದಿ: Duologue with Barun Das: ಸುತ್ತಲಿನವರ ಖುಷಿಯೇ ನಮ್ಮ ಪರಮ ಸಂತೋಷ; ಬರುಣ್ ದಾಸ್ ಜೊತೆ ಆರೋಗ್ಯ ವ್ಯವಸ್ಥೆ ಬಗ್ಗೆ ಡಾ. ದೇವಿ ಶೆಟ್ಟಿ ಮನ ಬಿಚ್ಚಿ ಮಾತು

ಪತ್ರಿಕೋದ್ಯಮದ ತತ್ವಗಳನ್ನು ಎತ್ತಿಹಿಡಿಯಲು ಅರ್ಹವಾದ ಮಾನ್ಯತೆ ಮತ್ತು ಮೌಲ್ಯಗಳನ್ನು ಒದಗಿಸಬೇಕು. ಇಂದು ಇಲ್ಲಿ ನನ್ನ ತಂಡವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಗೌರವವಿದೆ. ಒಬ್ಬ ನಾಯಕನು ಅವರ ತಂಡದಷ್ಟೇ ಉತ್ತಮವಾಗಿರುತ್ತದೆ. ಈ ಗೌರವಕ್ಕೆ ನಾನು ಡಬ್ಲ್ಯುಸಿಆರ್ಸಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

‘ವಿಶ್ವದ ಅತ್ಯುತ್ತಮ ನಾಯಕ’ 2023 ಪ್ರಶಸ್ತಿಯನ್ನು ಬರುಣ್ ದಾಸ್ ಪಡೆದುಕೊಂಡಿದ್ದು, ಅಸಾಧಾರಣ ನಾಯಕರೆನಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಗಳನ್ನು ಅಭೂತಪೂರ್ವ ಮಟ್ಟದ ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಹೊಸ ಕಾರ್ಯತಂತ್ರಗಳು ಮತ್ತು ನಾಯಕತ್ವವು ಅವರ ಸ್ವಂತ ಕಂಪನಿಯ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ಉದ್ಯಮ ಕ್ಷೇತ್ರದಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿದ್ದಾರೆ.

ಇದನ್ನೂ ಓದಿ: ಟಿವಿ9 ಎಂಡಿ, ಸಿಇಒ ಬರುಣ್ ದಾಸ್ ಜತೆ ಸಿಎಂ ಮಮತಾ ಬ್ಯಾನರ್ಜಿ ದೂರವಾಣಿ ಮಾತುಕತೆ; ನಕ್ಷತ್ರ ಸಮ್ಮಾನ್ ಪಡೆದವರಿಗೆ ಅಭಿನಂದನೆ

ಡಬ್ಲ್ಯುಸಿಆರ್ ಸಿ ಪ್ರಧಾನ ಸಂಪಾದಕ ಅಭಿಮನ್ಯು ಘೋಷ್ ಅವರೊಂದಿಗೆ ಲಾರ್ಡ್ ಸ್ವರಾಜ್ ಪಾಲ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ಪ್ರದಾನ ಮಾಡಲಾಗಿದೆ.

ನ್ಯೂಸ್ 9 ಪ್ಲಸ್ ಮಾಧ್ಯಮ ಉದ್ಯಮ ವಿಭಾಗದಲ್ಲಿ ಪ್ರತಿಷ್ಠಿತ ‘ವಿಶ್ವದ ಅತ್ಯುತ್ತಮ ಬ್ರ್ಯಾಂಡ್ 2023’ ಎಂಬ ಹೆಗಳಿಕೆ ಪಡೆದುಕೊಂಡಿದೆ. ಈ ಗೌರವವು ಪತ್ರಿಕೋದ್ಯಮದ ಸಮಗ್ರತೆ, ಗುಣಮಟ್ಟದ ವರದಿಗಾರಿಕೆಗೆ ನ್ಯೂಸ್ 9 ಪ್ಲಸ್​​ನ ಅಚಲ ಬದ್ಧತೆಯನ್ನು ಒತ್ತಿಹೇಳುವುದರೊಂದಿಗೆ ಶ್ರೇಷ್ಠತೆ, ನಾವೀನ್ಯತೆ ಜೊತೆಗೆ ಜಾಗತಿಕ ಪ್ರೇಕ್ಷಕರಿಗೆ ಮಾಹಿತಿ ಒದಗಿಸುತ್ತಿದೆ. ನಿಖರ ಮತ್ತು ಸಮಯೋಚಿತ ಸುದ್ದಿ ಪ್ರಸಾರವನ್ನು ಒದಗಿಸುವ ಧ್ಯೇಯಕ್ಕೆ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:00 pm, Fri, 6 October 23