ಟಿವಿ9 ಎಂಡಿ, ಸಿಇಒ ಬರುಣ್ ದಾಸ್ ಜತೆ ಸಿಎಂ ಮಮತಾ ಬ್ಯಾನರ್ಜಿ ದೂರವಾಣಿ ಮಾತುಕತೆ; ನಕ್ಷತ್ರ ಸಮ್ಮಾನ್ ಪಡೆದವರಿಗೆ ಅಭಿನಂದನೆ

TV9 Bangla Nakshatra Samman; ಟಿವಿ9 ಬಾಂಗ್ಲಾ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇರುವುದಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಪಡೆದವರನ್ನು ಅಭಿನಂದಿಸಿದ್ದಾರೆ.

ಟಿವಿ9 ಎಂಡಿ, ಸಿಇಒ ಬರುಣ್ ದಾಸ್ ಜತೆ ಸಿಎಂ ಮಮತಾ ಬ್ಯಾನರ್ಜಿ ದೂರವಾಣಿ ಮಾತುಕತೆ; ನಕ್ಷತ್ರ ಸಮ್ಮಾನ್ ಪಡೆದವರಿಗೆ ಅಭಿನಂದನೆ
‘ಟಿವಿ9 ನೆಟ್ವರ್ಕ್​’ ಎಂಡಿ ಮತ್ತು ಸಿಇಒ ಬರುಣ್ ದಾಸ್ & ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Follow us
TV9 Web
| Updated By: Ganapathi Sharma

Updated on: Sep 28, 2023 | 10:12 PM

ಕೋಲ್ಕತ್ತ, ಸೆಪ್ಟೆಂಬರ್ 28: ಅನಾರೋಗ್ಯದ ಕಾರಣ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ‘ಟಿವಿ9 ಬಾಂಗ್ಲಾ’ದ ‘ನಕ್ಷತ್ರ ಸಮ್ಮಾನ್’ (TV9 Bangla Nakshatra Samman) ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಹೀಗಾಗಿ, ‘ಟಿವಿ9 ನೆಟ್ವರ್ಕ್​’ ಎಂಡಿ ಮತ್ತು ಸಿಇಒ ಬರುಣ್ ದಾಸ್ (TV9 MD and CEO Barun Das) ಮುಖ್ಯಮಂತ್ರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದರು. ಮಮತಾ ಬ್ಯಾನರ್ಜಿ ಅವರು ವಿದೇಶ ಪ್ರವಾಸದಿಂದ ಹಿಂತಿರುಗಿದ ನಂತರ ಅನಾರೋಗ್ಯದ ಕಾರಣ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ 34 ವರ್ಷಗಳ ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಈ ಅವಧಿಯಲ್ಲಿ ಅವರ ಮೇಲೆ ಹಲವು ಬಾರಿ ದಾಳಿಗಳೂ ನಡೆದಿವೆ. ರಾಜಕೀಯ ಪ್ರತಿಭಟನೆಗಳು ಮತ್ತು ರಾಜಕೀಯ ಪ್ರವಾಸಗಳ ಸಂದರ್ಭದಲ್ಲಿ ಆಗಿರುವ ಗಾಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಆದರೆ, ಆರೋಗ್ಯ ಸಮಸ್ಯೆಗಳನ್ನು ತಮ್ಮ ಕೆಲಸಕ್ಕೆ ಅಡ್ಡಿಯಾಗಲು ಬಿಡಲಿಲ್ಲ ಎಂದು ಮಮತಾ ದೂರವಾಣಿಯಲ್ಲಿ ಹೇಳಿದರು. ಘಟನೆಯೊಂದನ್ನು ನೆನಪಿಸಿಕೊಂಡ ಸಿಎಂ, ಒಮ್ಮೆ ಹೆಲಿಕಾಪ್ಟರ್‌ನಿಂದ ಬಿದ್ದು ಗಂಭೀರ ಗಾಯಗಳಾಗಿದ್ದವು ಎಂದು ಹೇಳಿದರು. ವಿಧಾನಸಭೆ ಚುನಾವಣೆ ವೇಳೆ ನಂದಿಗ್ರಾಮದಲ್ಲಿ ಸಿಎಂ ಮೇಲೆ ಹಲ್ಲೆ ನಡೆದಿತ್ತು. ಬಳಿಕ ಹಲವು ದಿನ ಆಸ್ಪತ್ರೆಯಲ್ಲಿಯೇ ಅವರು ಇರಬೇಕಾಗಿ ಬಂದಿತ್ತು.

ಗಾಯದ ನಡುವೆಯೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮಮತಾ

ಸ್ಪೇನ್ ಪ್ರವಾಸದ ವೇಳೆ ಬಾರ್ಸಿಲೋನಾದ ಕ್ರೀಡಾಂಗಣಕ್ಕೆ ಹೋಗುತ್ತಿದ್ದಾಗ ಜಾರಿ ಬಿದ್ದೆ ಎಂದು ‘ಟಿವಿ9’ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರಿಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದೆಲ್ಲವೂ ಅಚಾನಕ್ಕಾಗಿ ಸಂಭವಿಸಿತು ಮತ್ತು ಇದರಿಂದಾಗಿ ಮತ್ತೆ ಗಾಯವಾಯಿತು ಎಂದರು. ಇಷ್ಟಾದರೂ ನಾನು ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಸ್ಥಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಅವು ಅಂತರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ನಾನು ಸಮಯಕ್ಕೆ ಸರಿಯಾಗಿ ಭಾಗವಹಿಸಿದೆ. ನಾನು ಅದೇ ದಿನ (ನಾನು ಜಾರಿ ಬಿದ್ದ ದಿನ) ವೈದ್ಯರನ್ನು ಸಂಪರ್ಕಿಸಿದ್ದೆ. ಎಂಆರ್‌ಐ ಸ್ಕ್ಯಾನ್ ಮೂಲಕ ನಿಜವಾದ ಕಾರಣ ತಿಳಿದುಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: TV9 CEO Barun Das: ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಟಿವಿ9 ಸಿಇಒ ಬರುಣ್​ ದಾಸ್ ಮಾತು

ಸದ್ಯ ಚಿಕಿತ್ಸೆ ನಡೆಯುತ್ತಿದೆ. ವೈದ್ಯರು ನನ್ನನ್ನು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಆದರೆ ನಾನು ಮನೆಯಲ್ಲಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ವೈದ್ಯರು ಸೂಚಿಸಿದ್ದಾರೆ

ಟಿವಿ9 ಕಾರ್ಯಕ್ರಮಕ್ಕೆ ಹಾಜರಾಗದೇ ಇರವುದಕ್ಕೆ ವಿಷಾದ ವ್ಯಕ್ತಪಡಿಸಿದ ಮಮತಾ

ಟಿವಿ9 ಬಾಂಗ್ಲಾ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇರುವುದಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಪಡೆದವರನ್ನು ಅಭಿನಂದಿಸಿದ್ದಾರೆ. ಅಲ್ಲದೆ, ರಾಜ್ಯದ ಜನತೆಗೆ ದುರ್ಗಾಪೂಜೆ ಹಬ್ಬದ ಶುಭಾಶಯ ಕೋರಿದ್ದಾರೆ.

ಟಿವಿ9 ಬಾಂಗ್ಲಾದಿಂದ ಗೌರವ ಸ್ವೀಕರಿಸಿದ ಸೆಲೆಬ್ರಿಟಿಗಳು

ಟಿವಿ9 ಬಾಂಗ್ಲಾದಿಂದ ‘ನಕ್ಷತ್ರ ಸಮ್ಮಾನ್’ ಸ್ವೀಕರಿಸಿದವರಲ್ಲಿ ಚಿತ್ರಕಲಾವಿದ ಜೋಗೆನ್ ಚೌಧರಿ, ಬರಹಗಾರ ಶಿರ್ಸೇಂದು ಮುಖೋಪಾಧ್ಯಾಯ, ಕವಿ ಜಾಯ್ ಗೋಸ್ವಾಮಿ, ಶಾಸ್ತ್ರೀಯ ಗಾಯಕ ಪಂಡಿತ್ ಅಜಯ್ ಚಕ್ರವರ್ತಿ, ವಾಕ್ಚಾಲಕರಾದ ಜಗನ್ನಾಥ್ ಬಸು ಮತ್ತು ಉರ್ಮಿಮಲಾ ಬಸು, ಜಾದೂಗಾರ ಪಿಸಿ ಸರ್ಕಾರ್ ಜೂನಿಯರ್, ಅಮಿತವ್ ಘೋಷ್ ಸೇರಿದಂತೆ ಗಣ್ಯ ವ್ಯಕ್ತಿಗಳು ಸೇರಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಅವರ ಕೊಡುಗೆ, ರಾಜ್ಯ ಮತ್ತು ದೇಶವೇ ಹೆಮ್ಮೆ ಪಡುವಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ‘ಟಿವಿ9 ಬಾಂಗ್ಲಾ’ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ