ದೆಹಲಿ:ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಹಿನ್ನಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿಯ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ಕಾಂಗ್ರೆಸ್ ಪರಿಣಾಮಕಾರಿ ಪರ್ಯಾಯ ಪಕ್ಷವೇ ಆಗಿಲ್ಲ’
ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ಕಪಿಲ್ ಸಿಬಲ್ ಮೊದಲನೇಯದಾಗಿ ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನ ನಾವು ಒಪ್ಪಿಕೊಳ್ಳಬೇಕು. ದೇಶದಲ್ಲಿ ಸಂವಹನ ಕ್ರಾಂತಿಯಾದ ಮೇಲೆ ಚುನಾವಣೆಗಳು ಅಧ್ಯಕ್ಷೀಯ ಮಾದರಿಯಾಗಿ ಪರಿವರ್ತನೆಯಾಗಿವೆ. ಹೀಗಾಗಿ ಬಿಹಾರದಲ್ಲಿ ದೀರ್ಘಕಾಲದಿಂದ ಕಾಂಗ್ರೆಸ್ ಪರಿಣಾಮಕಾರಿ ಪರ್ಯಾಯ ಪಕ್ಷವೇ ಆಗಿಲ್ಲ.
‘ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿಲ್ಲ’
ಉತ್ತರ ಪ್ರದೇಶದಲ್ಲಿ 25 ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ ಪರ್ಯಾಯ ಪಕ್ಷವೇ ಆಗಿಲ್ಲ. ಅದರಿಂದ ಈ ಎರಡು ರಾಜ್ಯಗಳು ದೊಡ್ಡ ರಾಜ್ಯಗಳು. ನಾಮಕರಣಗೊಂಡ CWC ಸದಸ್ಯರಿಂದ ಪ್ರಶ್ನೆ ಮಾಡುವುದನ್ನ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. cwc ಸದಸ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿಲ್ಲ. ಹೀಗಾಗಿ ಈಗ ಆತ್ಮಾವಲೋಕನದ ಭರವಸೆ ಇಡಲು ಹೇಗೆ ಸಾಧ್ಯ?.
‘ಕಾಂಗ್ರೆಸ್ಸಿಗರಾಗಿ ನಮ್ಮ ನಿಷ್ಠೆಯನ್ನು ಅನುಮಾನಿಸಬಾರದು’
ನಾವೆಲ್ಲರೂ ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ದರಾಗಿದ್ದೇವೆ. ಬೇರೆಯವರಂತೆ ನಾವು ಕೂಡ ನಿಷ್ಠೆ ಇರುವ ಕಾಂಗ್ರೆಸ್ಸಿಗರು. ಕಾಂಗ್ರೆಸ್ಸಿಗರಾಗಿ ನಮ್ಮ ನಿಷ್ಠೆಯನ್ನು ಅನುಮಾನಿಸಬಾರದು. ನಾವು ಬೇರೆಯವರ ನಿಷ್ಠೆಯನ್ನು ಅನುಮಾನಿಸಲ್ಲ. ಕಾಂಗ್ರೆಸ್ ಪಕ್ಷದ ಇತ್ತೀಚಿನ ಸೋಲಿನ ಬಗ್ಗೆ ಹೈಕಮಾಂಡ್ ನಿಲುವುನ್ನ ನಾವು ಕೇಳಬೇಕಾಗಿದೆ. ಬಹುಶಃ ಹೈಕಮಾಂಡ್ ಎಲ್ಲವೂ ಚೆನ್ನಾಗಿಯೇ ಇದೆ ಎಂದುಕೊಂಡಿರಬಹುದು ಎಂದು ಕಪಿಲ್ ಸಿಬಲ್ ಹೇಳಿಕೆ ನೀಡಿದ್ದಾರೆ.
ಬಿಹಾರ ಮಾತ್ರವಲ್ಲದೇ , ದೇಶದ ಜನರು ಎಲ್ಲೇ ಉಪಚುನಾವಣೆ ನಡೆದರೂ ಕಾಂಗ್ರೆಸ್ ಅನ್ನು ಪರಿಣಾಮಕಾರಿ ಪರ್ಯಾಯ ಪಕ್ಷ ಎಂದು ಪರಿಗಣಿಸುತ್ತಿಲ್ಲ. ಸಹಜವಾಗಿಯೇ ಕಾಂಗ್ರೆಸ್ ಪಕ್ಷವನ್ನು ಪರಿಣಾಮಕಾರಿ ಪರ್ಯಾಯ ಪಕ್ಷ ಎಂದು ಪರಿಗಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿದ್ದಾರೆ.
Published On - 11:36 am, Mon, 16 November 20