ಡೆಹ್ರಾಡೂನ್, ಜ.21: ನಾಳೆ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. ಈ ನಡುವೆ ಮಾತನಾಡಿದ ಉತ್ತರಾಖಂಡದಲ್ಲಿರುವ ಜ್ಯೋತಿರ್ ಮಠದ (Jyotir Math) ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮೋದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾವು ಮೋದಿ ವಿರೋಧಿಗಳಲ್ಲ. ಮೋದಿಯ ಅಭಿಮಾನಿಗಳು ಎಂದು ಹೇಳಿದ್ದಾರೆ.
ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಜ್ಯೋತಿರ್ ಮಠ ಕೂಡ ಒಂದು. ಈ ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳು ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯಲ್ಲಿ ಜ.22ರ ಮೋದಿ ಏನೇನು ಮಾಡ್ತಾರೆ? ಇಲ್ಲಿದೆ ವಿವರ
ಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳ ಸ್ವಾಭಿಮಾನ ಹೆಚ್ಚಾಗಿದೆ. ನಾವು ಇದನ್ನು ಹಲವಾರು ಬಾರಿ ಸಾರ್ವಜನಿಕವಾಗಿ ಹೇಳಿದ್ದೇವೆ. ನಾವು ಮೋದಿ ವಿರೋಧಿಯಲ್ಲ, ನಾವು ಮೋದಿ ಅಭಿಮಾನಿಗಳು. ಪ್ರಧಾನಿ ನರೇಂದ್ರ ಮೋದಿಯನ್ನು ನಾವು ಸಾಕಷ್ಟು ಇಷ್ಟಪಡುತ್ತೇವೆ ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಹೇಳಿದರು.
370ನೇ ವಿಧಿಯನ್ನು ರದ್ದುಗೊಳಿಸಿದಾಗ ನಾವು ಅದನ್ನು ಸ್ವಾಗತಿಸಲಿಲ್ಲವೇ ಎಂದು ಪ್ರಶ್ನಿಸಿದ ಅವಿಮುಕ್ತೇಶ್ವರಾನಂದ ಸರಸ್ವತಿ, ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿಯೂ ಹಿಂದೂಗಳ ಪರವಾಗಿ ನಿಂತಿರಲಿಲ್ಲ. ಮೋದಿಯಷ್ಟು ಯಾವ ಪ್ರಧಾನಿ ಹಿಂದೂಗಳ ಪರ ಧೈರ್ಯವಾಗಿ ನಿಂತಿರಲಿಲ್ಲ. ಹಿಂದೂ ಭಾವನೆಗಳನ್ನು ಬೆಂಬಲಿಸುವ ಮೋದಿಯನ್ನು ವಿರೋಧಿಸುವುದಿಲ್ಲ. ನಾವು ಮೋದಿ ವಿರೋಧಿ ಎಂದು ಸಾಬೀತುಪಡಿಸಿ ಎಂದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Sun, 21 January 24