ನಾಳೆ ಅಯೋಧ್ಯೆಯಲ್ಲಿ 50 ತಂಡಗಳಿಂದ ಮೊಳಗಲಿದೆ ಮಂಗಳ ವಾದ್ಯ; ಸಂಜೆ 10 ಲಕ್ಷ ದೀಪಗಳಿಂದ ಕಂಗೊಳಿಸಲಿದೆ ರಾಮ ಮಂದಿರ

ಅಯೋಧ್ಯೆ ರಾಮ ಮಂದಿರದಲ್ಲಿ ನಾಳೆ ಬಾಲರಾಮನ (ರಾಮಲಲ್ಲಾ) ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಅಷ್ಟೇ ಅಲ್ಲದೆ, ಸುಮಾರು 50 ತಂಡಗಳಿಂದ ಮಂಗಳ ವಾದ್ಯ ಮೊಳಗಳಿದ್ದು, ಸಂಜೆ ವೇಳೆಗೆ ಲಕ್ಷ ದೀಪಗಳಿಂದ ಅಯೋಧ್ಯೆ ಕಂಗೊಳಲಿಸಲಿದೆ.

ನಾಳೆ ಅಯೋಧ್ಯೆಯಲ್ಲಿ 50 ತಂಡಗಳಿಂದ ಮೊಳಗಲಿದೆ ಮಂಗಳ ವಾದ್ಯ; ಸಂಜೆ 10 ಲಕ್ಷ ದೀಪಗಳಿಂದ ಕಂಗೊಳಿಸಲಿದೆ ರಾಮ ಮಂದಿರ
ನಾಳೆ ಅಯೋಧ್ಯೆಯಲ್ಲಿ 50 ತಂಡಗಳಿಂದ ಮೊಳಗಳಿದೆ ಮಂಗಳ ವಾದ್ಯ; ಸಂಜೆ 10 ಲಕ್ಷ ದೀಪಗಳಿಂದ ಕಂಗೊಳಿಸಲಿದೆ ರಾಮ ಮಂದಿರ Image Credit source: PTI
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Rakesh Nayak Manchi

Updated on:Jan 21, 2024 | 6:44 PM

ನವದೆಹಲಿ, ಜ.21: ಕೋಟ್ಯಂತರ ಹಿಂದೂಗಳ ಐದು ಶತಮಾನಗಳ ಕನಸು ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ನಾಳೆ ಲೋಕಾರ್ಪಣೆಗೊಳ್ಳಲಿದೆ. ಗರ್ಭಗುಡಿಯಲ್ಲಿ ಬಾಲರಾಮನ (ರಾಮಲಲ್ಲಾ) ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಈ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಅಷ್ಟೇ ಅಲ್ಲದೆ, 50 ತಂಡಗಳಿಂದ ಮಂಗಳ ವಾದ್ಯ ಮೊಳಗಲಿದೆ.

ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಬೆಳಿಗ್ಗೆ 10 ರಿಂದ ಮಂಗಳ ವಾದ್ಯ ಮೊಳಗಲಿದೆ. ಉತ್ತರ ಪ್ರದೇಶದ ಆದಿವಾಸಿ ಜನಾಂಗದವರ ಜಾನಪದ ವಾದ್ಯಮೇಳ, ಬುಡಕಟ್ಟು ಜನಾಂಗದವರು ಭಾರಿಸುವ ವಾದ್ಯ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಮನಮೋಹಕ ಸಂಗೀತ ವಾದ್ಯ ತಂಡಗಳು ಭಾಗಿಯಾಗಲಿದ್ದು, ಸುಮಾರು ಎರಡು ಗಂಟೆಗಳ ಕಾಲ ಮಂಗಳ ವಾದ್ಯ ಮೊಳಗಲಿದೆ.

ಅಯೋಧ್ಯೆಯಲ್ಲಿ ಲಕ್ಷದೀಪ ವೈಭವ

ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಬಳಿಕ ರಾಮ ​​ಜ್ಯೋತಿ ಬೆಳಗುವ ಮೂಲಕ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಸಂಜೆ 10 ಲಕ್ಷ ದೀಪಗಳಿಂದ ಅಯೋಧ್ಯೆ ಕಂಗೊಳಿಸಲಿದೆ. ಅಯೋಧ್ಯೆಯ ಮನೆಗಳು, ಅಂಗಡಿಗಳು ಮತ್ತು ಪೌರಾಣಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ ಬೆಳಗಿಸಲಾಗುತ್ತದೆ.

ಇದನ್ನೂ ಓದಿ: Ayodhya Ram Mandir: ಹೂಗಳಿಂದ ಶೃಂಗಾರಗೊಂಡ ಅಯೋಧ್ಯೆ ರಾಮಮಂದಿರ, ಫೋಟೋಗಳು ಇಲ್ಲಿವೆ

ಮಣ್ಣಿನಿಂದ ಮಾಡಿದ ದೀಪಗಳಿಂದ ಅಯೋಧ್ಯೆಯು ಬೆಳಗಲಿದ್ದು, ಸರಯೂ ನದಿಯ ದಡದ ರಾಮ್ ಕಿ ಪಾಡಿಯಲ್ಲಿ ದೀಪ ಬೆಳಗಲಾಗುತ್ತದೆ. ಕನಕ್ ಭವನ, ಹನುಮಾನ್ ಗಡಿ, ಗುಪ್ತರಘಾಟ್, ಸರಯು ಘಾಟ್, ಲತಾ ಮಂಗೇಶ್ಕರ್ ಚೌಕ್, ಮಣಿರಾಮ್ ದಾಸ್ ಕಂಟೋನ್ಮೆಂಟ್ ಸೇರಿದಂತೆ 100 ದೇವಸ್ಥಾನಗಳಲ್ಲಿ ದೀಪ ಬೆಳಗಲಾಗುತ್ತಿದೆ.

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತ, ಶುಭ ಸಮಯ

ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ 12.29 ರಿಂದ 12.30 ರ ವರೆಗೆ (32 ಸೆಕೆಂಡುಗಳು) ಇರಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನೂ ನೆರವೇರಿಸಲಿದ್ದಾರೆ. ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ.

ಇವರಿಬ್ಬರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ ನೆರವೇರಲಿದ್ದು, ಈ ವೇಳೆ 150 ಕ್ಕೂ ಹೆಚ್ಚು ಸಂಪ್ರದಾಯಗಳು, 50ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ, ಬುಡಕಟ್ಟು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿರಲಿದ್ದಾರೆ.

ರಾಮ ಮಂದಿರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Sun, 21 January 24

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ