Ayodhya Ram Mandir: ಹೂಗಳಿಂದ ಶೃಂಗಾರಗೊಂಡ ಅಯೋಧ್ಯೆ ರಾಮಮಂದಿರ, ಫೋಟೋಗಳು ಇಲ್ಲಿವೆ

ಅಯೋಧ್ಯೆ ರಾಮಮಂದಿರದ ಫೋಟೋಗಳು: ಅಯೋಧ್ಯೆ ರಾಮ ಮಂದಿರದಲ್ಲಿ ನಾಳೆ ಬಾಲರಾಮ (ರಾಮಲಲ್ಲಾ) ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಸದ್ಯ, ಭವ್ಯ ಶ್ರೀರಾಮ ಮಂದಿರ ಲೈಟಿಂಗ್ಸ್ ಹಾಗೂ ಹೂವಿನಿಂದ ಶೃಂಗಾರಗೊಳ್ಳುತ್ತಿದೆ. ಇದರ ಫೋಟೋಗಳು ಇಲ್ಲಿವೆ ನೋಡಿ.

|

Updated on: Jan 21, 2024 | 4:28 PM

ಅಯೋಧ್ಯೆ ರಾಮ ಮಂದಿರದ ಲೋಕಾರ್ಪಣೆ ನಾಳೆ (ಜನವರಿ 22) ನಡೆಯಲಿದೆ. ಬಾಲರಾಮನ (ರಾಮಲಾಲ್ಲಾ) ಪಟ್ಟಾಭಿಷೇಕ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

1 / 15
ಗರ್ಭಗುಡಿಯಿಂದ ಹಿಡಿದು ಇಡೀ ರಾಮಮಂದಿರದವರೆಗೆ ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಕುರ್ಚಿಗಳನ್ನು ಅಳವಡಿಸುವ ಕೆಲಸ ಅಂತಿಮ ಹಂತದಲ್ಲಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

2 / 15
ದೇವಾಲಯದ ಚಿನ್ನದ ಹೊಳಪು ರಾತ್ರಿಯಲ್ಲಿ ವಿಭಿನ್ನ ಛಾಯೆಯನ್ನು ಹರಡುತ್ತಿದೆ. ಏತನ್ಮಧ್ಯೆ, ರಾಮ ಮಂದಿರದೊಳಗಿನ ವಿಶೇಷ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಯೋಧ್ಯ ರಾಮಮಂದಿರ ಹೂವಿನ ಕಂಗೊಳಿಸುತ್ತಿದ್ದು, ರಸ್ತೆ ಉದ್ದಕ್ಕೂ ಹೂಗಳಿಂದ ಅಲಂಕಾರ ಮಾಡಲಾಗಿದೆ. (PHOTO: amarujala)

3 / 15
ಅಯೋಧ್ಯೆ ದೇವಾಲಯ ಆಡಳಿತ ಮಂಡಳಿಯಿಂದ ಈ ಸಿಂಗಾರ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂಟ್ರಿಯಾಗುವ ರಸ್ತೆಯಲ್ಲಿ ಶೃಂಗಾರ ಮಾಡಲಾಗಿದೆ. ಸಿಬ್ಬಂದಿ ವರ್ಗ ವಿದೇಶಿ ಹೂಗಳಿಂದ ಸಿಂಗಾರಗೊಳಿಸಿದ್ದಾರೆ. (PHOTO: amarujala)

4 / 15
ರಾಮ ಮಂದಿರದ ಉದ್ಘಾಟನೆ ಮತ್ತು ರಾಮಲಾಲರ ನೂತನ ವಿಗ್ರಹ ಪ್ರತಿಷ್ಠಾಪನೆಗಾಗಿ ಅಯೋಧ್ಯೆಯನ್ನು 2500 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗುತ್ತಿದೆ. ಗರ್ಭಗುಡಿಯನ್ನು ಅಲಂಕರಿಸಲು ಕರ್ನಾಟಕದಿಂದ ಹೂವುಗಳನ್ನು ತರಲಾಗಿದೆ. ಇದಕ್ಕಾಗಿ ಥಾಯ್ಲೆಂಡ್, ಅರ್ಜೆಂಟೀನಾ ಜತೆಗೆ ದೆಹಲಿ ಮತ್ತು ಕೋಲ್ಕತ್ತಾದಿಂದ ಸುಂದರ ವಿದೇಶಿ ಹೂವುಗಳ ರವಾನೆ ತರಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

5 / 15
ಪ್ರಾಣ ಪ್ರತಿಷ್ಠಾಪನೆಯ ಶುಭ ದಿನ ಸಮೀಪಿಸುತ್ತಿದ್ದಂತೆ ಸಂತಸ ಹೆಚ್ಚಾಗುತ್ತಿದೆ. ಕೋಟ್ಯಂತರ ಹಿಂದೂಗಳು ಐದು ದಶಕಗಳ ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

6 / 15
ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ನಿಮಿತ್ತ ರಾಮನಗರಿಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆ ಸೇರಿದಂತೆ ಅಯೋಧ್ಯಾ ಧಾಮದ ಗಡಿಗಳನ್ನು ಶನಿವಾರ ರಾತ್ರಿಯಿಂದ ಮುಚ್ಚಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

7 / 15
ಪಾಸ್ ಇಲ್ಲದೇ ಯಾರಿಗೂ ಪ್ರವೇಶಿಸಲು ಅವಕಾಶವಿರುವುದಿಲ್ಲ. ಪ್ರಧಾನಿ ಮತ್ತು ಇತರ ಅತಿಥಿಗಳು ಹಾದುಹೋಗುವ ಮಾರ್ಗದಲ್ಲಿ ನಿರ್ಮಿಸಲಾದ ಮನೆಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸಿವೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

8 / 15
ಕಾರ್ಯಕ್ರಮದ ಸಮಯದಲ್ಲಿ ಶಸ್ತ್ರಸಜ್ಜಿತ ಸೈನಿಕರು ಹದ್ದಿನ ಕಣ್ಣಿಡಲಿದ್ದಾರೆ. ಅಯೋಧ್ಯಾ ಧಾಮ, ಉದಯ ಚೌಕ, ಸಾಕೇತ್ ಪೆಟ್ರೋಲ್ ಪಂಪ್, ರಾಣೋಪಲಿ, ತೇಧಿ ಬಜಾರ್, ಮೊಹಬ್ರಾ, ಬೂತ್ ಸಂಖ್ಯೆ 4, ಬಲುಘಾಟ್, ನಯಾಘಾಟ್, ರೈಲ್ವೆ ನಿಲ್ದಾಣ ಇತ್ಯಾದಿಗಳಿಗೆ ಹೋಗುವ ಮಾರ್ಗಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

9 / 15
ಸಿವಿಲ್ ಪೊಲೀಸರಲ್ಲದೆ ಅರೆಸೇನಾ ಪಡೆಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಯಾರಿಗೂ ವಾಹನದೊಂದಿಗೆ ಒಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

10 / 15
ಅತಿಥಿಗಳು, ವ್ಯವಸ್ಥೆಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಾತ್ರ ಸ್ಥಳದಲ್ಲಿ ಇರಲಿದ್ದಾರೆ. ಉದಯ ಸ್ಕ್ವೇರ್‌ನಿಂದ ಲತಾ ಮಂಗೇಶ್ಕರ್ ಚೌಕ್‌ವರೆಗಿನ ಎರಡೂ ಟ್ರ್ಯಾಕ್‌ಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

11 / 15
ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಯಾವುದೇ ಸೂಚನೆಗಳಿಲ್ಲ, ಆದರೆ ಅಂಗಡಿಗಳ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಇದರಿಂದ ಸಂಚಾರಕ್ಕೆ ಅಡ್ಡಿಯಾಗಲಿದೆ. ಪ್ರವೇಶ ಮಾರ್ಗಗಳನ್ನು ಸಹ ಮುಚ್ಚಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

12 / 15
ಪ್ರತಿ 100 ಮೀಟರ್ ಅಂತರದಲ್ಲಿ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಕೇತ್ ಕಾಲೇಜಿನಿಂದ ಸರಯೂ ದಂಡೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಪರಿಶೀಲಿಸಲಾಗಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

13 / 15
ಅನುಮತಿಯಿಲ್ಲದೆ ಯಾರಿಗೂ ಆಶ್ರಯ ನೀಡದಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಜನರ ಮೇಲೆ ನಿಗಾ ಇರಿಸಲು ಡ್ರೋನ್ ಕ್ಯಾಮೆರಾಗಳು ಮತ್ತು ಇತರ ತಂತ್ರಜ್ಞಾನದ ಸಹಾಯದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

14 / 15
ಶೃಂಗಾರಗೊಂಡ ಅಯೋಧ್ಯೆ ರಾಮ ಮಂದಿರ (Photo: ಕನ್ನಡವೇ ಸತ್ಯ ಕನ್ನಡವೇ ನಿತ್ಯ/FB)

15 / 15
Follow us