ಸಾಮ್ರಾಜ್ಯ ವಿಸ್ತಾರ ವಾದ ಯುಗ ಅಂತ್ಯ, ವಿಕಾಸ ವಾದ ಆರಂಭ -ಪ್ರಧಾನಿ ಮೋದಿ
ಲಡಾಕ್: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮಧ್ಯೆ ಗಡಿಭಾಗದ ಲೇಹ್ಗೆ ಪ್ರಧಾನಿ ಮೋದಿ ದಿಢೀರನೆ ಭೇಟಿ ನೀಡಿದ್ದಾರೆ. ವಿಸ್ತಾರವಾದದ ಯುಗ ಅಂತ್ಯವಾಗಿದೆ. ವಿಶ್ವದಲ್ಲಿ ಈಗ ವಿಕಾಸವಾದದ ಯುಗ ಆರಂಭವಾಗಿದೆ. ವಿಸ್ತಾರವಾದದ ಯುಗ ಅಂತ್ಯವಾಗಿದೆ. ವಿಸ್ತಾರವಾದಕ್ಕಿಂತ ವಿಕಾಸವಾದದ ಯುಗ ಶಕ್ತಿಶಾಲಿ ಎಂದು ಚೀನಾ ಅಧ್ಯಕ್ಷರ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ವಿಸ್ತಾರ ವಾದದ ನೀತಿ ವಿಶ್ವಕ್ಕೆ ಅಪಾಯ ವಿಸ್ತಾರವಾದ ಮಾನವೀಯತೆಗೆ ಸಾಕಷ್ಟು ಹಾನಿಮಾಡಿದೆ. ವಿಸ್ತಾರವಾದದ ನೀತಿ ವಿಶ್ವಕ್ಕೆ ಅಪಾಯವನ್ನು ಸೃಷ್ಟಿಸಿದೆ. ವಿಕಾಸವಾದವೇ ಭವಿಷ್ಯದ […]
ಲಡಾಕ್: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮಧ್ಯೆ ಗಡಿಭಾಗದ ಲೇಹ್ಗೆ ಪ್ರಧಾನಿ ಮೋದಿ ದಿಢೀರನೆ ಭೇಟಿ ನೀಡಿದ್ದಾರೆ. ವಿಸ್ತಾರವಾದದ ಯುಗ ಅಂತ್ಯವಾಗಿದೆ. ವಿಶ್ವದಲ್ಲಿ ಈಗ ವಿಕಾಸವಾದದ ಯುಗ ಆರಂಭವಾಗಿದೆ. ವಿಸ್ತಾರವಾದದ ಯುಗ ಅಂತ್ಯವಾಗಿದೆ. ವಿಸ್ತಾರವಾದಕ್ಕಿಂತ ವಿಕಾಸವಾದದ ಯುಗ ಶಕ್ತಿಶಾಲಿ ಎಂದು ಚೀನಾ ಅಧ್ಯಕ್ಷರ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ವಿಸ್ತಾರ ವಾದದ ನೀತಿ ವಿಶ್ವಕ್ಕೆ ಅಪಾಯ ವಿಸ್ತಾರವಾದ ಮಾನವೀಯತೆಗೆ ಸಾಕಷ್ಟು ಹಾನಿಮಾಡಿದೆ. ವಿಸ್ತಾರವಾದದ ನೀತಿ ವಿಶ್ವಕ್ಕೆ ಅಪಾಯವನ್ನು ಸೃಷ್ಟಿಸಿದೆ. ವಿಕಾಸವಾದವೇ ಭವಿಷ್ಯದ ಆಧಾರವಾಗಿದೆ ಎಂದು ಯೋಧರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ನಾನು ಇಬ್ಬರು ಮಾತೆಯರನ್ನು ಸ್ಮರಿಸುತ್ತೇನೆ. ಬಳಿಕ ಯೋಧರಿಗೆ ಜನ್ಮ ನೀಡಿದ ಮಾತೆಯರನ್ನ ಸ್ಮರಿಸುವೆ.
ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸ ವೇಗವಾಗಿ ನಡೆಯುತ್ತಿದೆ. ಯೋಧರ ಕನಸಿನ ಭಾರತ ಕಟ್ಟುವಲ್ಲಿ ಹಿಂದೆ ಸರಿಯಲ್ಲ. ದೇಶಕ್ಕೆ ಯೋಧರ ಬಗ್ಗೆ ಗೌರವ, ಹೆಮ್ಮೆಯಿದೆ. ನಾವು ಎಲ್ಲಾ ಯುದ್ಧಗಳನ್ನು ಗೆಲ್ಲುತ್ತೇವೆ.
ಯೋಧರ ಶೌರ್ಯ, ತ್ಯಾಗಕ್ಕೆ ಬೆಲೆಕಟ್ಟಲಾಗದು ಗಲ್ವಾನ್ ಕಣಿವೆ ನಮ್ಮದು. ನಮ್ಮ ಯೋಧರ ಶೌರ್ಯ, ತ್ಯಾಗಗಳು ಬೆಲೆಕಟ್ಟಲಾಗದ್ದು. ಅತಿ ಎತ್ತರದ ಸ್ಥಳದಲ್ಲೂ ದೇಶದ ಹಿತ ಕಾಪಾಡುತ್ತಿದ್ದೀರಿ. ಕಠಿಣ ಪರಿಸ್ಥಿತಿಯಲ್ಲೂ ದೇಶದ ರಕ್ಷಣೆ ಮಾಡುತ್ತಿದ್ದೀರಿ. ಯೋಧರ ಇಚ್ಛಾಶಕ್ತಿ ಪರ್ವತಗಳ ಎತ್ತರಕ್ಕಿಂತ ದೊಡ್ಡದು. ನಿಮ್ಮ ಶೌರ್ಯದಿಂದ ವಿಶ್ವಕ್ಕೆ ಸಂದೇಶ ರವಾನಿಸಿದ್ದೀರಿ ಎಂದು ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದವರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
ಲಡಾಖ್‌ನ ಭಾಗ ಗೌರವದ ಪ್ರತೀಕ ಗಾಲ್ವಾನ್ ಕಣಿವೆಯಲ್ಲಿ ಯೋಧರು ತೋರಿಸಿದ ಶೌರ್ಯ, ಭಾರತದ ಜನರು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಇಡೀ ದೇಶಕ್ಕೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ. ಯೋಧರಿಗೆ ಜೈಕಾರ, ಅಭಿನಂದನೆ ಸಲ್ಲಿಸುತ್ತೇನೆ. ಇದು ದೇಶಕ್ಕೆ ತ್ಯಾಗ ಮಾಡಲು ಸದಾ ಸಿದ್ಧರಿರುವವರ ಭೂಮಿ. ಲಡಾಖ್‌ನ ಪೂರ್ಣ ಭಾಗ ಭಾರತದ ಗೌರವದ ಪ್ರತೀಕ. ಈ ಭೂಮಿ ವೀರರಿಗೆ ಸೇರಿದ್ದು. ಲಡಾಖ್‌ನ ಜನರು ಪ್ರತಿ ಹಂತದಲ್ಲಿ ದೇಶಕ್ಕೆ ಸಹಾಯ ಮಾಡುತ್ತಾರೆ. ನಮ್ಮ ಸಂಕಲ್ಪ ಹಿಮಾಲಯದಷ್ಟೇ ಎತ್ತರವಾಗಿದೆ. ಮಾನವ ಜೀವನಕ್ಕೆ ಶಾಂತಿ, ಸ್ನೇಹ ಅಗತ್ಯವಾಗಿದೆ.
ನಿರ್ಬಲರು ಎಂದೂ ಶಾಂತಿಯನ್ನು ತರಲು ಸಾಧ್ಯವಿಲ್ಲ. ಭಾರತ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೇನೆಯನ್ನು ಆಧುನೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಇಡೀ ವಿಶ್ವವೇ ನಮ್ಮ ಯೋಧರ ಶೌರ್ಯವನ್ನು ನೋಡಿದೆ ಎಂದರು.
Published On - 2:55 pm, Fri, 3 July 20