Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗೀಗ ತೃತೀಯ ರಂಗದ ಜೊತೆ ಸಾಮೂಹಿಕ ನಾಯಕತ್ವದ ಅವಶ್ಯಕತೆಯಿದೆ: ಶರದ್ ಪವಾರ್

ತೃತೀಯ ಅಥವಾ ಪರ್ಯಾಯ ರಂಗ ರಚಿಸುವುದು ಪರಿಗಣನೆಗೆ ಬಂದರೆ ಅದಕ್ಕೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ. ಪರ್ಯಾಯ ರಂಗದ ನಾಯಕತ್ವವನ್ನು ವಹಿಸಿಕೊಳ್ಳಲು ಅವರು ತಯಾರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ‘ಇದಕ್ಕೆ ಮೊದಲು ಶರದ್ ಪವಾರ್ ಹಲವಾರು ಸಲ ಇಂಥ ಪ್ರಯತ್ನಕ್ಕೆ ಕೈಹಾಕಿದ್ದಾನೆ,’ ಎಂದು ಚುಟುಕಾಗಿ ಉತ್ತರಿಸಿದರು.

ನಮಗೀಗ ತೃತೀಯ ರಂಗದ ಜೊತೆ ಸಾಮೂಹಿಕ ನಾಯಕತ್ವದ ಅವಶ್ಯಕತೆಯಿದೆ: ಶರದ್ ಪವಾರ್
ಶರದ್ ಪವಾರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2021 | 1:00 AM

ಮುಂಬೈ: ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್​ರಹಿತ ಯಾವುದೇ ಪರ್ಯಾಯ ರಂಗವನ್ನು (ತೃತೀಯ) ರಚಿಸುವುದು ಸಾಧ್ಯವಿಲ್ಲ ಎಂದು ಹಿರಿಯ ರಾಜಕಾರಣಿ ಮತ್ತು ಎನ್​ಸಿಪಿಯ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರದಂದು ಮುಂಬೈಯಲ್ಲಿ ಹೇಳಿದರು. 2024 ರ ಸಾರ್ವತ್ರಿಕ ಚುನಾವಣೆಗೆ ಮೊದಲು ತೃತೀಯ ರಂಗವನ್ನು ರಚಿಸಲು ನಡೆಯುತ್ತಿರುವ ಬೆವಣಿಗೆಗಳ ಹಿನ್ನೆಲೆಯಲ್ಲಿ ಪವಾರ ಹೇಳಿಕೆ ಜಾಸ್ತಿ ಮಹತ್ವ ಪಡೆದುಕೊಂಡಿದೆ. ‘ರಾಷ್ಟ್ರ ಮಂಚ್ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚೆ ನಡೆಯಲಿಲ್ಲ. ಆದರೆ, ಒಂದು ಪರ್ಯಾಯ ಶಕ್ತಿಯನ್ನು ಸ್ಥಾಪಿಸುವ ಉದ್ದೇಶ, ಕಾಂಗ್ರೆಸ್​ ಪಕ್ಷವನ್ನು ಜೊತೆಗೂಡಿಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ಅಂಥ ಶಕ್ತಿ ನಮಗೆ ಬೇಕಾಗಿದೆ ಮತ್ತು ಸಭೆಯಲ್ಲಿ ನಾನು ಇದನ್ನೇ ಹೇಳಿದ್ದೇನೆ,’ ಎಂದು ಪವಾರ್ ಹೇಳಿದರೆಂದು ಎಎನ್​ಐ ವರದಿ ಮಾಡಿದೆ.

ತೃತೀಯ ಅಥವಾ ಪರ್ಯಾಯ ರಂಗ ರಚಿಸುವುದು ಪರಿಗಣನೆಗೆ ಬಂದರೆ ಅದಕ್ಕೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ. ಪರ್ಯಾಯ ರಂಗದ ನಾಯಕತ್ವವನ್ನು ವಹಿಸಿಕೊಳ್ಳಲು ಅವರು ತಯಾರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ‘ಇದಕ್ಕೆ ಮೊದಲು ಶರದ್ ಪವಾರ್ ಹಲವಾರು ಸಲ ಇಂಥ ಪ್ರಯತ್ನಕ್ಕೆ ಕೈಹಾಕಿದ್ದಾನೆ,’ ಎಂದು ಚುಟುಕಾಗಿ ಉತ್ತರಿಸಿದರು.

ಕಳೆದ ಕೆಲ ವಾರಗಳಿಂದ ಚುನಾವಣಾ ರಣನೀತಿ ತಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಶರದ್ ಪವಾರ್ ನಡೆಸುತ್ತಿರುವ ಮೀಟಿಂಗ್​ಗಳು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಹುಟ್ಟಿಸುತ್ತಿವೆಯಾದರೂ, ಮಂಗಳವಾರದಂದು ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಮತ್ತು ಚಿಕಿತ್ಸಕ ದೃಷ್ಟಿಯಿಂದ ನೋಡಲಾಗುತ್ತಿದೆ.

ಸಭೆ ನಡೆದದ್ದು ಪವಾರ್ ಅವರ ದೆಹಲಿ ನಿವಾಸಲ್ಲಾದರೂ ಅದನ್ನು ಆಯೋಜಿಸಿದ್ದು ಮಾತ್ರ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆವರು ಹುಟ್ಟು ಹಾಕಿರುವ ರಾಷ್ಟ್ರ ಮಂಚ್ ಸಂಘಟನೆ.

ಎಂಟು ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲದೆ, ಖ್ಯಾತ ಕಾನೂನು ತಜ್ಞರು, ಪತ್ರಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು. ಅಯೋಜಕರು ಹೇಳುವ ಪ್ರಕಾರ ಈ ಸಭೆ ಮತ್ತು ರಾಜಕಾರಣದ ನಡುವೆ ಸಂಬಂಧವಿರಲಿಲ್ಲ. ಪ್ರಸಕ್ತ ವಿದ್ಯಮಾನಗಳಲ್ಲಿ ರಾಷ್ಟ್ರದ ಮುಂದಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು ಎಂದು ಆಯೋಜಕರು ಹೇಳಿದರು.

ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರಿಗೆ ಆಂಮಂತ್ರಣ ನೀಡಿದ್ದರೂ ಅದರ ಪ್ರತಿನಿಧಿಗಳ್ಯಾರೂ ಸಭೆಯಲ್ಲಿ ಹಾಜರಿರಲಿಲ್ಲ.

ಇಂಥ ಸಭೆಗಳಲ್ಲಿ ಬಿಜೆಪಿರಹಿತ, ಕಾಂಗ್ರೆಸ್​ರಹಿತ ಪರ್ಯಾಯ ರಂಗವನ್ನು ನಡೆಸುವ ಚರ್ಚೆಗಳು ನಡೆಯುತ್ತವಾದರೂ, ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಲವನ್ನು ಎದುರಿಸಲು, ದೇಶದಾದ್ಯಂತ ವರ್ಚಿಸ್ಸಿರುವ ಕಾಂಗ್ರೆಸ್​ನಂತ ಪಕ್ಷ ಅದರ ಭಾಗವಾಗಿರಬೇಕು ಎಂದು ಎಡಪಂಥೀಯ ಪಕ್ಷಗಳು ಭಾವಿಸುತ್ತವೆ.

ಮಿತ್ರಪಕ್ಷಗಳನ್ನು ರಚಿಸುವಲ್ಲಿ ಸಿದ್ಧಹಸ್ತರು, ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚಾಣಾಕ್ಷ, ಭಾರತದ ಅತ್ಯಂತ ಅನುಭವಿ ರಾಜಕಾರಣಗಳಲ್ಲಿ ಒಬ್ಬರಾಗಿರುವ ಮತ್ತು ಹಲವಾರು ಬಾರಿ ಸರ್ಕಾರದ ಭಾಗವಾಗಿರುವ ಪವಾರ್ ಅವರು, ಮಂಗಳವಾರ ನಡೆದ ಸಭೆಯಲ್ಲಿ ರಾಜಕೀಯದ ಚರ್ಚೆಯಾಗಲಿಲ್ಲ ಎಂದು ಹೇಳಿದರು.

2024 ರಲ್ಲಿ ನಡೆಯಲಿರುವ ಚುನಾವಣೆಗೆ ಮೊದಲು ತೃತೀಯ ರಂಗ ರಚನೆಯಾದರೆ ಅದರಲ್ಲಿ ಅವರು ಯಾವ ರೀತಿ ಯ ನಾಯಕತ್ವ ಅವರು ವಹಿಸಿಕೊಳ್ಳಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪವಾರ್,‘ ಆ ವಿಷಯದ ಬಗ್ಗೆ ನಾವು ಚರ್ಚಿಸಿಲ್ಲ, ಆದರೆ ನಾನು ಅಂದುಕೊಳ್ಳುವುದೇನೆಂದರೆ ಒಂದು ಸಾಮೂಹಿಕ ನಾಯಕತ್ವದ ಅವಶ್ಯಕತೆ ನಮಗಿದೆ. ನಾನಿದನ್ನು ಅನೇಕ ವರ್ಷಗಳ ಕಾಲ ಮಾಡಿದ್ದೇನೆ, ಇನ್ನು ಮೇಲೆ ಎಲ್ಲರನ್ನು ಜೊತೆಗೂಡಿಸಿ, ಅವರಿಗೆ ಮಾರ್ಗದರ್ಶನ ನೀಡುತ್ತಾ ಬಲಪಡಿಸುವ ಕೆಲಸವನ್ನು ಮಾಡುತ್ತೇನೆ,’ ಎಂದು ಪವಾರ್ ಹೇಳಿದರು.

ಪಕ್ಷಗಳನ್ನು ಸಂಘಟಿಸುವ ಕೆಲಸ ಪವಾರ್ ಅವರಿಗೆ ಹೊಸದೇನೂ ಅಲ್ಲ. ಮಹಾರಾಷ್ಟ್ರದಲ್ಲಿ ನೆನೆಸಿಕೊಳ್ಳಲೂ ಸಾಧ್ಯವಿರದ ಶಿವ ಸೇನೆ-ಎನ್​ಸಿಪಿ-ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ ಶ್ರೇಯಸ್ಸು ಪವಾರ್ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಜೊತೆ ಎರಡನೇ ಸಭೆ ನಡೆಸಿದ ನಂತರ ವಿರೋಧ ಪಕ್ಷದ ನಾಯಕರೊಂದಿಗೆ ಮಂಗಳವಾರ ಚರ್ಚೆ; ಮಿಷನ್ 2024ರ ತಯಾರಿಯೇ?

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ