ಪ್ರಶಾಂತ್ ಕಿಶೋರ್ ಜೊತೆ ಎರಡನೇ ಸಭೆ ನಡೆಸಿದ ನಂತರ ವಿರೋಧ ಪಕ್ಷದ ನಾಯಕರೊಂದಿಗೆ ಮಂಗಳವಾರ ಚರ್ಚೆ; ಮಿಷನ್ 2024ರ ತಯಾರಿಯೇ?

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವನೆಯಲ್ಲಿ ತೃಣಮೂಲ್ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ದೊರಕಿಸಿದ ಕಿಶೋರ್ ಮತ್ತು ಯಶ್ವಂತ್​ ಸಿನ್ಹಾ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲದೆ ರಾಷ್ಟ್ರಮಂಚ್ ಸ್ಥಾಪನೆಯನ್ನು ಟಿಎಮ್​ಸಿ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ

ಪ್ರಶಾಂತ್ ಕಿಶೋರ್ ಜೊತೆ ಎರಡನೇ ಸಭೆ ನಡೆಸಿದ ನಂತರ ವಿರೋಧ ಪಕ್ಷದ ನಾಯಕರೊಂದಿಗೆ ಮಂಗಳವಾರ ಚರ್ಚೆ; ಮಿಷನ್ 2024ರ ತಯಾರಿಯೇ?
ಶರದ್ ಪವಾರ್ ಮತ್ತು ಪ್ರಶಾಂತ್ ಕಿಶೋರ್
Arun Belly

|

Jun 21, 2021 | 8:30 PM

ನವದೆಹಲಿ:  ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಪಿತಾಮಹ ಎನಿಸಿಕೊಂಡಿರುವ, ಶರದ್ ಪವಾರ್ ಅವರು ಕಳೆದೆರಡು ವಾರಗಳಲ್ಲಿ ಚುನಾವಗೆ ಸಮಬಂಧಿಸಿದ ರಣತಂತ್ರಗಳನ್ನು ಹೆಣೆಯುವುದರಲ್ಲಿ ನಿಸ್ಸೀಮರೆನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಅವರೊಂದಿಗೆ ಸೋಮವಾರ ಎರಡನೇ ಭಾರಿ ಸಭೆ ನಡೆಸಿದ ಒಂದು ದಿನ ತರುವಾಯ (ಮಂಗಳವಾರ) ನವದೆಹಲಿಯಲ್ಲಿ ವಿರೋಧ ಪಕ್ಷಗಳೊಂದಿಗೆ ಸಭೆ ನಡೆಸಲಿರುವುದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ‘ಮಿಷನ್ 2024’ ಅಂಗವಾಗಿ ಒಂದು ವಿರೋಧ ಪಕ್ಷಗಳ ಒಕ್ಕೂಟವನ್ನು ರಚಿಸಲು ಅವರು ಪ್ರಯತ್ನಿಸುತ್ತ್ತಿರುವ ಬಗ್ಗೆ ಉಹಾಪೋಹಗಳು ದಟ್ಟವಾಗುತ್ತಿವೆ. 2018 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೀತಿಗಳ ವಿರುದ್ಧ ಸಿಡಿದೆದ್ದು ಬಿಜೆಪಿಯನ್ನು ತ್ಯಜಿಸಿದ ಯಶ್ವಂತ್ ಸಿನ್ಹಾ ಅವರು ರಾಷ್ಟ್ರಮಂಚ್ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದು ಅದರ ಪದಾಧಿಕಾರಿಗಳೊಂದಿಗೆ ಪವಾರ್ ಮಂಗಳವಾರ ಸಾಯಂಕಾಲ 4 ಗಂಟೆಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಈ ಸಂಘಟನೆಯೊಂದಿಗೆ ಪವಾರ್ ನಡೆಸುತ್ತಿರುವ ಮೊಟ್ಟಮೊದಲ ಸಭೆ ಇದಾಗಿದೆ.

ಜೂನ್ 11 ರಂದು ತಮ್ಮ ಮುಂಬೈ ನಿವಾಸದಲ್ಲಿ ಕಿಶೋರ್​ ಅವರೊಂದಿಗೆ ಸಭೆ ನಡೆಸಿದ್ದ ಪವಾರ್ ಸೋಮವಾರ ದೆಹಲಿಯಲ್ಲಿರುವ ತಮ್ಮ ಮನೆಯಲ್ಲಿ ಇನ್ನೊಂದು ಸಭೆ ನಡೆಸಿದರು.

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವನೆಯಲ್ಲಿ ತೃಣಮೂಲ್ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ದೊರಕಿಸಿದ ಕಿಶೋರ್ ಮತ್ತು ಯಶ್ವಂತ್​ ಸಿನ್ಹಾ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲದೆ ರಾಷ್ಟ್ರಮಂಚ್ ಸ್ಥಾಪನೆಯನ್ನು ಟಿಎಮ್​ಸಿ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ, ಹಿಂದೆ ಟಿಎಮ್​ಸಿ ನಾಯಕರಾಗಿದ್ದ ದಿನೇಶ್​ ತ್ರಿವೇದಿ ಅವರು ರಾಷ್ಟ್ರಮಂಚ್ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಬಂಗಾಳಲ್ಲಿ ಮಮತಾ ಅವರು ಜಯಭೇರಿ ಬಾರಿಸದ್ದು ವಿರೋಧ ಪಕ್ಷಗಳ ಹುಮ್ಮಸ್ಸನ್ನು ಹೆಚ್ಚಿಸಿ ಬಿಜೆಪಿಯ ದೈತ್ಯಶಕ್ತಿ ಎದುರು ಹೋರಾಡಲು ಸ್ಥೈರ್ಯ ಒದಗಿಸಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿದ ಒಕ್ಕೂಟದ ಭಾಗಿಯಾಗಲು ಹಲವಾರು ವಿರೋಧ ಪಕ್ಷಗಳು ಉತ್ಸುಕತೆಯನ್ನು ತೋರಿವೆ ಎಂದು ಮೂಲಗಳಿಂದ ಗೊತ್ತಾಗಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಜಯಗಳಿಸಿದ ಕೂಡಲೇ, ತಮ್ಮನ್ನು ವಿರೋಧ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಪರಿಗಣಿಸವಿರಾ ಎಂದು ಕೇಳಿದ್ದಕ್ಕೆ ಬ್ಯಾನರ್ಜಿಯರು, ‘ಎಲ್ಲರೂ ಒಂದೂಗೂಡಿ ಯೋಚಿಸುತ್ತೇವೆ. ನಾವು 2024 ರ ಯುದ್ಧವನ್ನು ಒಟ್ಟಿಗೆ ಮಾಡಬಹುದು. ಆದರೆ ಮೊದಲು ಕೋವಿಡ್ ವಿರುದ್ಧ ಹೋರಾಡೋಣ” ಎಂದು ಹೇಳಿದ್ದರು.

ಮಮತಾ ಮತ್ತು ಪವಾರ್ ಅವರ ನಡುವೆಯೂ ಉತ್ತಮ ಬಾಂಧವ್ಯವಿದ್ದು ಹಲವಾರು ಬಾರಿ ಈ ನಾಯಕರು ಒಂದು ಸಂಯುಕ್ತ ವಿರೋಧ ಪಕ್ಷ ಸಂಘಟನೆ ಮಾಡುವ ಅವಶ್ಯಕತೆಯ ಬಗ್ಗೆ ತೀವ್ರವಾಗಿ ಪ್ರತಿಪಾದಿಸಿದ್ದಾರೆ. ಅದರೆ ಈ ಒಕ್ಕೂಟಕ್ಕೆ ರಾಜೀವ್ ಗಾಂಧಿಯನ್ನು ಮುಖ್ಯಸ್ಥನನ್ನಾಗಿ ಮಾಡುವುದು ಇಬ್ಬರಿಗೂ ಇಷ್ಟವಿಲ್ಲ. ಮಹಾರಾಷ್ಟ್ರದಲ್ಲಿ ಶಿವ ಸೇನೆಯು ಬಿಜೆಪಿ ಬಗ್ಗೆ ಮೃದು ದೋರಣೆ ಪ್ರಕಟಿಸುತ್ತಿದೆಯಾದರೂ ಸೇನೆಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಸಂಜಯ ರಾವತ್ ಅವರು, ರಾಷ್ಟ್ರಮಟ್ಟದಲ್ಲಿ ವಿರೋಧ ಪಕಕ್ಷಗಳ ಮೈತ್ರಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ತಾನು ಪವಾರ್ ಅವವರೊಂದಿಗೆ ಚರ್ಚಿಸಿರುವುದಾಗಿ ರಾವತ್ ಹೇಳಿದ್ದಾರೆ.

ಕಾಕತಾಳೀಯವೆಂದರೆ, ಶಿವ ಸೇನೆಯ ನಾಯಕರು, ಪ್ರಸ್ತುತವಾಗಿ ಬಿಜೆಪಿ ಜೊತೆ ರಾಜಕೀಯವಾಗಿ ಬೇರೆಯಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂಬಂಧ ಮುರಿದುಕೊಂಡಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತವಾಗಿ, ಮಹಾರಾಷ್ಟ್ರದ ರಾಜಕೀಯ ವಾತಾವರಣವು ನೀರಿನ ಮೇಲಿನ ಗುಳ್ಳೆಯಂತಿದೆ. ಶಿವಸೇನೆಯು ತನಗೆ ಬಿಜೆಪಿಯ ಬಾಗಿಲುಗಳನ್ನು ಮುಚ್ಚಿಲ್ಲ ಎಂದು ತೋರಿಸಲು ಉತ್ಸುಕವಾಗಿದೆ. ಶರದ್ ಪವಾರ್ ಅವರು ಅಪರೂಪಕ್ಕೆ ಮಾಡಿದ ಸಾರ್ವಜನಿಕ ಭಾಷಣವೊಂದರಲ್ಲಿ ಸೇನೆಗೆ ಅದರ ವಿಶ್ವಾಸಾರ್ಹತೆ ಮತ್ತು ನಂಬಿಕಸ್ತಿಕೆಯನ್ನು ನೆನಪಿಸಿದ್ದರು. “ಶಿವ ಸೇನೆ ಒಮ್ಮೆ ಮಾತನ್ನು ಕೊಟ್ಟರೆ ಅದಕ್ಕೆ ಬದ್ಧವಾಗಿರುತ್ತದೆ. 1977 ರಲ್ಲಿ, ಬಾಳಾಸಾಹೇಬ್ ಠಾಕ್ರೆ ಅವರು ಮಾತು ಕೊಟ್ಟ ನಂತರ ಶಿವ ಸೇನೆ ಇಂದಿರಾಗಾಂಧಿಯ ಹಿಂದೆ ಬಲವಾಗಿ ನಿಂತಿತ್ತು. ಈ ಸರ್ಕಾರವು ತನ್ನ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ, ಮತ್ತು ನಂತರ ವಿಧಾನಸಭೆ ಮತ್ತು ಲೋಕಸಭೆಗೆ ನಾವೆಲ್ಲ ಜೊತೆಗೂಡಿ ಕೆಲಸ ಮಾಡುತ್ತೇವೆ,’ ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪವಾರ್ ಅವರೊಂದಿಗೆ ಗುಪ್ತವಾಗಿ ಸಭೆಯೊಂದನ್ನು ನಡೆಸಿದ್ದರು.

ಇದನ್ನೂ ಓದಿ: Prashant Kishor ಶರದ್ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್; ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹ ಸೃಷ್ಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada