ದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ( Nitish Kumar), ಆರ್‌ಜೆಡಿಯ ತೇಜಸ್ವಿ ಯಾದವ್ (Tejashwi Yadav), ಎಚ್‌ಎಎಮ್‌ನ ಜಿತನ್ ರಾಮ್ ಮಾಂಝಿ ಮತ್ತು ವಿಐಪಿಯ ಮುಖೇಶ್ ಸಹಾನಿ ಸೇರಿದಂತೆ ಬಿಹಾರದ 10 ರಾಜಕೀಯ ಪಕ್ಷಗಳ ನಾಯಕರ ನಿಯೋಗವು ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಾತಿ ಆಧಾರಿತ ಜನಗಣತಿ (caste census) ನಡೆಸುವ ಕುರಿತು ಚರ್ಚಿಸಿದೆ.
” ನಿಯೋಗದ ಎಲ್ಲ ಸದಸ್ಯರ ಮಾತನ್ನು ಪ್ರಧಾನಿ ಆಲಿಸಿದರು. ನಾವು ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದ್ದೇವೆ ಮತ್ತು ಜಾತಿ ಗಣತಿ ಕುರಿತು ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಹೇಗೆ ಅಂಗೀಕರಿಸಲಾಗಿದೆ ಎಂಬುದರ ಕುರಿತು ನಾವು ಅವರಿಗೆ ತಿಳಿಸಿದ್ದೇವೆ ಎಂದು ನಿತೀಶ್ ಕುಮಾರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Delhi | People in Bihar and the entire country are of the same opinion on this issue. We are grateful to the PM for listening to us. Now, he has to take a decision on it: Bihar CM Nitish Kumar on meeting with PM Narendra Modi over caste census pic.twitter.com/8e2F0LYoNo
— ANI (@ANI) August 23, 2021
ಸಭೆಯ ನಂತರ ಮಾತನಾಡಿದ ತೇಜಸ್ವಿ “ನಮ್ಮ ನಿಯೋಗವು ಇಂದು (ಬಿಹಾರ) ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಜಾತಿ ಗಣತಿಗಾಗಿ ಪ್ರಧಾನಿಯನ್ನು ಭೇಟಿ ಮಾಡಿದೆ. ನಾವು ಈಗ ಈ ಕುರಿತು ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
Delhi | Our delegation met the PM today not only for caste census in the state (Bihar) but in the entire country. We are awaiting a decision on this now: Tejashwi Yadav, RJD after meeting with PM Modi over caste census pic.twitter.com/HRyg77P3D5
— ANI (@ANI) August 23, 2021
ಬಿಜೆಪಿ ಹೊರತುಪಡಿಸಿ ಬಿಹಾರದ ಎಲ್ಲಾ ಪಕ್ಷಗಳು 2021 ರ ಜನಗಣತಿಯಲ್ಲಿ ಜಾತಿ ಸಂಖ್ಯೆಗಳ ಎಣಿಕೆಗೆ ಬೇಡಿಕೆ ಇಟ್ಟಿವೆ. ಈ ಬೇಡಿಕೆಯನ್ನು ಪಾಲಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ನಿರಾಕರಿಸಿದ್ದರೆ, ಬಿಹಾರ ಉಪ ಸಿಎಂ ರೇಣು ದೇವಿ ಸೇರಿದಂತೆ ಕೆಲವು ಬಿಜೆಪಿ ಸದಸ್ಯರು ಜಾತಿ ಜನಗಣತಿಗೆ ಬೆಂಬಲ ನೀಡಿದ್ದಾರೆ.
ಈ ವಿಷಯವನ್ನು ಮತ್ತಷ್ಟು ಚರ್ಚಿಸಲು ನಿತೀಶ್ ಕುಮಾರ್ ಬಿಹಾರದಿಂದ 11 ಸದಸ್ಯರ ನಿಯೋಗದ ನೇತೃತ್ವ ವಹಿಸಿಕೊಂಡಿದ್ದಾರೆ. ಅಂದಹಾಗೆ ನಿತೀಶ್ ಮತ್ತು ತೇಜಸ್ವಿ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.
ಸಂವಿಧಾನ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಜಾತಿ ಜನಗಣತಿ ಮತ್ತು ಶೇಕಡಾ 50 ಕ್ಕಿಂತ ಹೆಚ್ಚಿನ ಮೀಸಲಾತಿಗಳನ್ನು ತೆಗೆದುಕೊಳ್ಳುವ ಶಾಸನಗಳು ಸುಪ್ರೀಂಕೋರ್ಟ್ ತೀರ್ಪನ್ನು ಅತಿಕ್ರಮಿಸಲು ಮತ್ತು ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ರಚಿಸುವ ಹಕ್ಕನ್ನು ಮರುಸ್ಥಾಪಿಸಲು ಪ್ರಯತ್ನಿಸಿದವು.
ಜಾತಿ ಗಣತಿಗಾಗಿ ತೀವ್ರಗೊಳ್ಳುತ್ತಿರುವ ಬೇಡಿಕೆಯ ಬಗ್ಗೆ ಬಿಜೆಪಿ ಸಂದಿಗ್ಧ ಸ್ಥಿತಿಯಲ್ಲಿದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸರ್ಕಾರವು ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
“ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದು ಬಿಹಾರದ ಬಹುಕಾಲದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಾವು ಇಂದು ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದೇವೆ” ಎಂದು ಎಚ್ಎಎಂ ಅಧ್ಯಕ್ಷ ಮತ್ತು ಮಾಜಿ ಬಿಹಾರ ಸಿಎಂ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.
ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿ ಕನಿಷ್ಠ ಒಮ್ಮೆ ಮಾಡಲೇಬೇಕು: ನಿತೀಶ್ ಕುಮಾರ್
ಇದನ್ನೂ ಓದಿ: School Reopening: ನಿಮ್ಮ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಿ; ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭ ಸುದ್ದಿ
(We urged the PM to take an appropriate decision on caste census bihar CM Nitish Kumar )