ಸದನದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಜಗದೀಪ್ ಧನಕರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2022 | 2:09 PM

ವಿಶ್ವದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂಸದರು ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಮತ್ತು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ಹೇಳಿದ್ದಾರೆ

ಸದನದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಜಗದೀಪ್ ಧನಕರ್
Jagdeep Dhankar and Modi
Image Credit source: PTI
Follow us on

ದೆಹಲಿ: ವಿಶ್ವದಲ್ಲಿ ಹೆಚ್ಚುತ್ತಿರುವ ಕೋವಿಡ್-19 (Covid-19) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂಸದರು ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಮತ್ತು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ಗುರುವಾರ ಹೇಳಿದ್ದಾರೆ, ಸದನವು ರಾಷ್ಟ್ರವನ್ನು ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದರು. ಸದನದಲ್ಲಿ ಸಭೆ ಸೇರಿದಾಗ, ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಉಲ್ಲೇಖಿಸಿದರು. ನಾವೇ ರಾಷ್ಟ್ರದ ಒಳಿತಿಗಾಗಿ ನಾವು ಮಾಸ್ಕ್ ಮತ್ತು ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಜಗತ್ತಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಜಾಗರೂಕರಾಗಿರಲು ನಾನು ಎಲ್ಲ ಸದಸ್ಯರನ್ನು ಕೋರುತ್ತೇನೆ. ನಮ್ಮ ದೇಶದ ಜನರ ಮುಂದೆ ನಾವು ಮಾದರಿಯಾಗಿರಲು ಮತ್ತು ಆಡಳಿತ, ವೈದ್ಯರು, ಆರೋಗ್ಯ ವೃತ್ತಿಪರರು ಮತ್ತು ನೈರ್ಮಲ್ಯ ಕಾರ್ಯಕರ್ತರ ಸಂಘಟಿತ ಪ್ರಯತ್ನಗಳಿಂದಾಗಿ ಭಾರತವು ಹಿಂದೆ COVID-19 ರ ಸವಾಲುಗಳನ್ನು ಜಯಿಸಿದೆ ಎಂದು ಅವರು ಹೇಳಿದರು. ಎರಡು ಶತಕೋಟಿ ಡೋಸ್‌ಗಳಷ್ಟು ಉಚಿತ ಕೋವಿಡ್ ಲಸಿಕೆ ಭಾರತ ನೀಡಿದೆ. ಇದು ವಿಶ್ವದ ಅಪ್ರತಿಮ ಸಾಧನೆ ಎಂದು ಹೇಳಿದರು. ಇದಲ್ಲದೆ, ಇವುಗಳನ್ನು ಡಿಜಿಟಲ್ ಆಗಿ ದಾಖಲಿಸಲಾಗಿದೆ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು, ಅದರ ಪ್ರಮಾಣ, ಗಾತ್ರ ಮತ್ತು ವೇಗಕ್ಕೆ ವಿಶ್ವದ ಮತ್ತೊಂದು ಅಪ್ರತಿಮ ಉದಾಹರಣೆಯಾಗಿದೆ.

ಪ್ರಸ್ತುತ, ಕೋವಿಡ್ ಪರಿಸ್ಥಿತಿಯು ಆತಂಕಕಾರಿಯಾಗಿದೆ. ನಾವು ಜಾಗರೂಕರಾಗಿರಬೇಕು ಮತ್ತು ಮಾಸ್ಕ್​ಗಳನ್ನು ಧರಿಸುವುದು, ಸ್ಯಾನಿಟೈಸರ್‌ಗಳನ್ನು ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಇದನ್ನು ಓದಿ: ಚೀನಾದಲ್ಲಿ ಮತ್ತೆ ಕೊರೊನಾ ಕಾಟ! ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ

ಸದನದೊಳಗೆ ಮಾಸ್ಕ್​ ಧರಿಸುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ ಎಂದು ಧಂಖರ್ ಹೇಳಿದರು. ಈ ಕಾರ್ಯದಲ್ಲಿ ನಾವು ಕೈಜೋಡಿಸಿ ದೇಶವನ್ನು ಮಾದರಿಯಾಗಿ ಮುನ್ನಡೆಸಬೇಕು ಎಂದು ವಿನಂತಿಸಿದರು. ಸದಸದಲ್ಲಿ ಸದಸ್ಯರು ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರು ಮಾಸ್ಕ್​ ಧರಿಸಿದ್ದಾರೆ.

ಧಂಖರ್ ಅವರು ಗುರುವಾರ ಮಾಸ್ಕ್ ಧರಿಸಿ ಸದನಕ್ಕೆ ಬಂದಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ಸಾಲಿನ ಆಸನದಲ್ಲಿ ಕುಳಿತ ಪ್ರಧಾನಿ ನರೇಂದ್ರ ಮೋದಿ ಕೂಡ ಮಾಸ್ಕ್​ ಹಾಕಿಕೊಂಡಿದ್ದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Thu, 22 December 22