Covid-19 BF-7 Variant :ಕೋವಿಡ್ ರೂಪಾಂತರಿ ಓಮಿಕ್ರಾನ್ ಬಿಎಫ್-7 ಕುರಿತು ಇಲ್ಲಿದೆ ಮಾಹಿತಿ

ಬಿಎಫ್-7ನ ರೋಗ ಲಕ್ಷಣಗಳು ಈಗಾಗಲೇ ಅಮೇರಿಕಾ , ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ಇತರ ಭಾಗಗಳಲ್ಲಿ ಕಂಡುಬಂದಿದ್ದು, ಚೀನಾದ ಮಂಗೋಲಿಯಾದ ಪ್ರದೇಶದಿಂದ ಹೊರಹೊಮ್ಮಿದ ನಂತರ ಹೊಸ ಆತಂಕಕ್ಕೆ ಕಾರಣವಾಗಿದೆ.

Covid-19 BF-7 Variant :ಕೋವಿಡ್ ರೂಪಾಂತರಿ ಓಮಿಕ್ರಾನ್ ಬಿಎಫ್-7 ಕುರಿತು ಇಲ್ಲಿದೆ ಮಾಹಿತಿ
Covid 19
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 20, 2022 | 2:22 PM

ಕೋವಿಡ್ ಪ್ರತಿ ಬಾರಿಯೂ ಹೊಸ ರೂಪಾಂತರದೊಂದಿಗೆ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತದೆ. ಈ ರೂಪಾಂತರದ ಹೊರಹೊಮ್ಮುವಿಕೆಯ ನಂತರ, ಇನ್ನೇನು ದೀಪಾವಳಿ ಹಬ್ಬಗಳ ಸಂಭ್ರಮ, ಆಚರಣೆಗಳ ಮಧ್ಯೆ ಹೊಸ ಅಲೆ ಬಿ ಎ.5.1.7 ಮತ್ತು ಬಿ ಎಫ್.7 ರೋಗ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕಿದೆ.

ಹೆಚ್ಚು ಹರಡುವ ಬಿಎಫ್-7 ಓಮಿಕ್ರಾನ್ ಸಂಬಂಧಿಸಿದ ರೋಗಲಕ್ಷಣಗಳೆಂದರೆ ಪ್ರಮುಖವಾಗಿ ಎದೆ ನೋವು ಮತ್ತು ಶ್ರವಣ ಶಕ್ತಿಯ ಸಮಸ್ಯೆ.

ಬಿಎಫ್-7ನ ರೋಗ ಲಕ್ಷಣಗಳು ಈಗಾಗಲೇ ಅಮೆರಿಕಾ , ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ಇತರ ಭಾಗಗಳಲ್ಲಿ ಕಂಡುಬಂದಿದ್ದು, ಚೀನಾದ ಮಂಗೋಲಿಯಾದ ಪ್ರದೇಶದಿಂದ ಹೊರಹೊಮ್ಮಿದ ನಂತರ ಹೊಸ ಆತಂಕಕ್ಕೆ ಕಾರಣವಾಗಿದೆ.

ಏನಿದು ಓಮಿಕ್ರಾನ್ ಬಿಎಫ್ 7? ಇತ್ತೀಚಿಗೆ ಕಂಡುಬಂದ ಓಮಿಕ್ರಾನ್ ಬಿಎಫ್ 7 ಅನ್ನು ಮೊದಲು ವಾಯುವ್ಯ ಚೀನಾದ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿ ಪತ್ತೆ ಹಚ್ಚಲಾಯಿತು. ಇದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಜೊತೆಗೆ ಈಗಾಗಲೇ ಅಮೇರಿಕಾ, ಯುಕೆ, ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂನಲ್ಲಿ ಪತ್ತೆಯಾಗಿದೆ.

ಹೊಸ ಒಮಿಕ್ರಾನ್ ರೂಪಾಂತರದ ಕುರಿತು ಈ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಲ್ಲಿ ಓಮಿಕ್ರಾನ್ ಬಿಎಫ್.7 ಎಚ್ಚರಿಕೆಯ ಬಗ್ಗೆ ಮಾಹಿತಿ ಪ್ರಸ್ತಾಪಿಸಿದ್ದು, ಇದು ಪ್ರಸ್ತುತ ಇರುವ ಪ್ರಬಲ ರೂಪಾಂತರವನ್ನು ಬದಲಿಸುವ ನಿರೀಕ್ಷೆಯಿದೆ ಎಂದು ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಆಸ್ಪತ್ರೆಯ ಇಂಟರ್ನಲ್ ನಿರ್ದೇಶಕ ಡಾ. ಸಂಜಯ್ ಧಾಲ್ ರವರು ಲೈವ್‌ಮಿಂಟ್‌ಗೆ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಬಿಎಫ್.7 ರೂಪಾಂತರವು ಹೆಚ್ಚಿನ ಪ್ರಮಾಣದ ಸೋಂಕಿನ ಪ್ರಮಾಣವನ್ನು ಹೊಂದಿದೆ .ಅದೃಷ್ಟವಶಾತ್, ಓಮಿಕ್ರಾನ್ ಮತ್ತು ಅದರ ರೂಪಾಂತರಗಳು ತುಂಬಾ ತೀವ್ರವಾಗಿರುವುದಿಲ್ಲ ಮತ್ತು ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಇತರ ಕಾಯಿಲೆಗಳನ್ನು ಹೊಂದಿರುವ ರೋಗಿಗಳಲ್ಲಿ ಹೃದ್ರೋಗ, ಮೂತ್ರಪಿಂಡ ಕಾಯಿಲೆ , ವೃದ್ಧಾಪ್ಯದ ರೋಗಿಗಳು ತೀವ್ರತರವಾದ ರೋಗಲಕ್ಷಣಗಳನ್ನು ಸಹ ಹೊಂದಿರಬಹುದು ಎಂದು ಅವರು ಹೇಳಿದರು.

ಓಮಿಕ್ರಾನ್ ಬಿಎಫ್-7ನ ಲಕ್ಷಣಗಳ ಕುರಿತ ಮಾಹಿತಿ ಇಲ್ಲಿದೆ.

  • ನಿರಂತರ ಕೆಮ್ಮು
  • ಎದೆ ನೋವು
  • ಶ್ರವಣ ಶಕ್ತಿಯ ಸಮಸ್ಯೆ
  • ವಾಸನೆ ಗ್ರಹಿಕೆಯಲ್ಲಿ ವ್ಯತ್ಯಾಸ

ಪ್ರತಿ ಹೊಸ ರೂಪಾಂತರಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಾ ಹೋದಂತೆಲ್ಲಾ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಆದ್ದರಿಂದ, ಕೋವಿಡ್‌ನ ಹೊಸ ರೂಪಾಂತರ ಬಂದಾಗಲೆಲ್ಲಾ, ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ಅದು ಕೂಡ ಹಬ್ಬದ ಸೀಸನ್ ಸಮೀಪಿಸುತ್ತಿರುವಾಗ ಮತ್ತು ಪ್ರತಿಯೊಬ್ಬರೂ ಮತ್ತೆ ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಲು ಪ್ರಾರಂಭಿಸುತ್ತಾರೆ ಮತ್ತು ಮಾಸ್ಕ್ ಬಳಸದೇ ಪ್ರಯಾಣಿಸುತ್ತಾರೆಎಂದು ವೈದ್ಯರು ಹೇಳಿದರು.

ಆದ್ದರಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಜನಸಂದಣಿ ಇರುವ ಸ್ಥಳಗಳಿಗೆ ಹೋಗದಿರುವುದು, ಅನಗತ್ಯವಾಗಿ ಮಾರುಕಟ್ಟೆಗಳಿಗೆ ಹೋಗುವುದನ್ನು ತಪ್ಪಿಸುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಮತ್ತೆ ಹೆಚ್ಚಿಸಲು ಇದು ಸರಿಯಾದ ಸಮಯ ಎಂದು ಎಚ್ಚರಿಕೆ ನೀಡಿದ್ದರು.

Published On - 2:12 pm, Thu, 20 October 22