ಪಟಾಕಿ ಸಿಡಿಸಿದಾಗ ಮದುವೆ ಮನೆಯ ಚಪ್ಪರಕ್ಕೆ ಹೊತ್ತಿದ ಬೆಂಕಿ, ಅಲ್ಲೇ ಇದ್ದ ಸಿಲಿಂಡರ್​ ಕೂಡ ಸ್ಫೋಟಗೊಂಡು ನವ ದಂಪತಿ ಸೇರಿ 6 ಮಂದಿ ಸಾವು

|

Updated on: Apr 26, 2024 | 2:01 PM

ಮದುವೆ(mARRIAGE)ಯ ಖುಷಿಯಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಮೂಡಿದೆ. ಮದುವೆಯೆಂಬ ಖುಷಿಯಲ್ಲಿ ಹೊಡೆಯುತ್ತಿದ್ದ ಪಟಾಕಿಯಿಂದ ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಪಟಾಕಿ ಸಿಡಿಸಿದಾಗ ಮದುವೆ ಮನೆಯ ಚಪ್ಪರಕ್ಕೆ ಹೊತ್ತಿದ ಬೆಂಕಿ, ಅಲ್ಲೇ ಇದ್ದ ಸಿಲಿಂಡರ್​ ಕೂಡ ಸ್ಫೋಟಗೊಂಡು ನವ ದಂಪತಿ ಸೇರಿ 6 ಮಂದಿ ಸಾವು
Marriage
Follow us on

ಮದುವೆ(Marriage))ಯ ಖುಷಿಯಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಮೂಡಿದೆ. ಮದುವೆಯೆಂಬ ಖುಷಿಯಲ್ಲಿ ಹೊಡೆಯುತ್ತಿದ್ದ ಪಟಾಕಿಯಿಂದ ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ನರೇಶ್​ ಪಾಸ್ವಾನ್ ಅವರ ಮಗಳ ಮದುವೆ ಇತ್ತು ಹಾಗಾಗಿ ಬೇರೆ ಊರಿನಿಂದ ಮದುವೆಗೆ ಬಂದವರನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು. ಮೃತರಲ್ಲಿ ದಂಪತಿ, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಮೃತರನ್ನು ರಾಮಚಂದ್ರ ಪಾಸ್ವಾನ್ ಪುತ್ರ ಸುನಿಲ್ ಪಾಸ್ವಾನ್, ಪತ್ನಿ ಲಾಲಿ ದೇವಿ, ಉಮೇಶ್​ ಪಾಸ್ವಾನ್ ಪತ್ನಿ ಕಾಂಚನ್​ದೇವಿ.

ದಂಪತಿ ಬಂದ ತಕ್ಷಣ ಪಟಾಕಿ ಸಿಡಿಸಿದ್ದಾರೆ, ಆಗ ಟೆಂಟ್​ಗೆ ಬೆಂಕಿ ಹೊತ್ತಿಕೊಂಡಿತ್ತು. ಜನರು ಬಂದು ಬೆಂಕಿ ನಂದಿಸಲು ಶುರುಮಾಡಿದಾಗ ಅಲ್ಲಿದ್ದ ಸಿಲಿಂಡರ್​ಗೂ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿಂದ ಡೀಸೆಲ್​ ಸ್ಟಾಕ್​ ಗೂ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎನ್ನಲಾಗಿದೆ.

ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು

ಬಹೇರಾ ಪೊಲೀಸ್​ ಠಾಣಾ ವ್ಯಾಪ್ತಿಯ ಅಂತೋರ್​ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಪಾಟ್ನಾದ ಎರಡು ಹೋಟೆಲ್​ಗಳಲ್ಲಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಮೃತಪಟ್ಟಿದ್ದರು. ಪಾಟ್ನಾ ರೈಲ್ವೆ ನಿಲ್ದಾಣ ಬಳಿಯ ಪಾಲ್ ಹೋಟೆಲ್​ನಲ್ಲಿ ಅಗ್ನಿ ಅವಘಡ ಸಂಭಿವಿಸಿದ್ದು ಆರು ಮಂದಿ ಸಾವನ್ನಪ್ಪಿದ್ದರು.

ಚಪ್ಪರದೊಳಗೆ ಇರಿಸಲಾಗಿದ್ದ ಕೆಲವು ದಹನಕಾರಿ ವಸ್ತುಗಳು ಬೆಂಕಿ ವೇಗವಾಗಿ ಹರಡಲು ಸಹಾಯ ಮಾಡಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೂರು ಹಸುಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ