ಕೋಲ್ಕತ್ತಾ: ಅಭಿವೃದ್ಧಿ ಯೋಜನೆ ಜಾರಿಗೆ ಟಿಎಂಸಿ ಸರ್ಕಾರ ಅಡ್ಡಿಯಾಗಿದೆ. ಬಂಗಾಳ ಜನತೆಯ ನಂಬಿಕೆಯನ್ನು ಮಮತಾ ಬ್ಯಾನರ್ಜಿ ಹುಸಿಗೊಳಿಸಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಚುನಾವಣಾ ವೇಳೆ ರಾಜ್ಯ ಅಭಿವೃದ್ಧಿ ಮಾಡುವುದಾಗಿ ಮಮತಾ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸುವಲ್ಲಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (TMC) ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದರು.
ಕೋಲ್ಕತ್ತಾ ನಗರದ ಪರೇಡ್ ಗ್ರೌಂಡ್ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಪಶ್ಚಿಮ ಬಂಗಾಳ ಜನತೆ ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆ. ಪಶ್ಚಿಮ ಬಂಗಾಳ ಜನರು ಬದಲಾವಣೆ ಬಯಸಿದ್ದಾರೆ. ಬಿಜೆಪಿಗೆ ಆಶೀರ್ವಾದ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದು ಮೋದಿ ತಿಳಿಸಿದರು.
ಪಶ್ಚಿಮ ಬಂಗಾಳ ಪರಿವರ್ತನೆಯ ಸಂಕೇತ ಎಂದ ಮೋದಿ, ಟಿಎಂಸಿ ಹಾಗೂ ಕಾಂಗ್ರೆಸ್ ಪಶ್ಚಿಮ ಬಂಗಾಳದ ವಿರೋಧಿಗಳು ಎಂದು ಆರೋಪಿಸಿದರು. ದಿನದ 24 ಗಂಟೆಯೂ ಬಂಗಾಳದ ಅಭಿವೃದ್ಧಿಗೆ ಶ್ರಮಿಸುತ್ತೇವೆ. 75 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಬಿಜೆಪಿ ಮಾಡಲಿದೆ ಎಂದು ಮೋದಿ ಭರವಸೆ ನೀಡಿದರು.
ಬಂಗಾಳ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಪಶ್ಚಿಮ ಬಂಗಾಳ ದೇಶಕ್ಕೆ ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ನೇತಾಜಿ ಸೇರಿ ಹಲವು ದೇಶ ಭಕ್ತರನ್ನು ಕೊಡುಗೆ ನೀಡಿದೆ. ಈ ಪರೇಡ್ ಗ್ರೌಂಡ್ನಲ್ಲಿ ಹಲವು ಹೋರಾಟಗಳು ನಡೆದಿವೆ. ಇಂಥಾ ಐತಿಹಾಸಿಕ ಸಮಾವೇಶದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಎಂದು ಮೋದಿ ಹೇಳಿದರು.
ಮುಂದಿನ 25 ವರ್ಷಗಳು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅತಿಮುಖ್ಯವಾಗಿದೆ. ಹಾಗಾಗಿ, ಮುಂದಿನ 5 ವರ್ಷಗಳ ಕೆಲಸಗಳು ರಾಜ್ಯದ 25 ವರ್ಷದ ಅಭಿವೃದ್ಧಿಗೆ ಅಡಿಪಾಯ ಹಾಕುವಂತೆ ಇರಬೇಕಿದೆ. ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಲು ನಾನು ಇಲ್ಲಿ ಬಂದಿದ್ದೇನೆ. ಬಂಗಾಳದ ಸಂಸ್ಕೃತಿ ರಕ್ಷಿಸಲು ಮತ್ತು ಬದಲಾವಣೆ ತರಲು ನಾನು ಇಲ್ಲಿಗೆ ಆಗಮಿಸಿದ್ದೇನೆ ಎಂದು ಮೋದಿ ಹೇಳಿದರು.
ಪಶ್ಚಿಮ ಬಂಗಾಳಕ್ಕೆ ಶಾಂತಿ ಬೇಕು. ಪ್ರಗತಿಶೀಲತೆ ಬೇಕು. ಬಂಗಾಳದಲ್ಲಿ ಪ್ರಜಾಪ್ರಭುತ್ವವು ಯಾವ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ನಿಮಗೆ ತಿಳಿದಿದೆ. ಈ ವ್ಯವಸ್ಥೆಯನ್ನು ಬಿಜೆಪಿ ಬಲಗೊಳಿಸಲಿದೆ. ಸಾರ್ವಜನಿಕರಿಗೆ ಸರ್ಕಾರದ ಮೇಲೆ ನಂಬಿಕೆ ಬರುವಂತೆ ಕೆಲಸ ಮಾಡುತ್ತೇವೆ ಎಂದು ಮೋದಿ ಮಾತನಾಡಿದರು.
ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜ್ಯದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಿಥುನ್ ಬಿಜೆಪಿ ಬಾವುಟ ಹಾರಿಸಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಮಿಥುನ್ ಚಕ್ರವರ್ತಿಯನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ ಉಪಸ್ಥಿತರಿದ್ದರು.
#WATCH | I have come here to make you believe in ‘Asol Poribortan’. Belief in Bengal’s development, in change of Bengal’s situation, in increasing investment & industries in Bengal, & in the reconstruction of Bengal: PM Modi pic.twitter.com/BZqfkDQ7OJ
— ANI (@ANI) March 7, 2021
#WATCH Live from Kolkata: PM Modi’s public rally at Brigade Parade Ground https://t.co/xFNCdu5Q8w
— ANI (@ANI) March 7, 2021
ಇದನ್ನೂ ಓದಿ: West Bengal Assembly Elelctions 2021: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರ್ಪಡೆ
Published On - 3:15 pm, Sun, 7 March 21