ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯದ ಕೂಗು; ಬೆಂಬಲ ವ್ಯಕ್ತಪಡಿಸಿದ ದಿಲೀಪ್​​ ಘೋಷ್

| Updated By: ರಶ್ಮಿ ಕಲ್ಲಕಟ್ಟ

Updated on: Aug 22, 2021 | 12:27 PM

Dilip Ghosh: ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಉತ್ತರ ಬಂಗಾಳದಲ್ಲಿ ಏಕೆ ಅಭಿವೃದ್ಧಿಯಾಗಿಲ್ಲ ಎಂದು ಅವರು ಉತ್ತರಿಸಬೇಕು. ವೈದ್ಯಕೀಯ ಚಿಕಿತ್ಸೆ, ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗಾಗಿ ಜನರು ಬಂಗಾಳದ ಹೊರಗೆ ಏಕೆ ಹೋಗಬೇಕು? ಸಾಕಷ್ಟು ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ಕಾರ್ಖಾನೆಗಳು ಏಕೆ ಇಲ್ಲ?

ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯದ ಕೂಗು; ಬೆಂಬಲ ವ್ಯಕ್ತಪಡಿಸಿದ ದಿಲೀಪ್​​ ಘೋಷ್
ದಿಲೀಪ್​ ಘೋಷ್​
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ (Dilip Ghosh) ಶನಿವಾರ ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯಗಳ ಬೇಡಿಕೆ ಮತ್ತು ಈ ಹಿಂದೆ ನಕ್ಸಲ್ ಪೀಡಿತವಾಗಿದ್ದ ಜಂಗಲ್ ಮಹಲ್‌ಗೆ ತಮ್ಮ ಬೆಂಬಲವನ್ನು ನೀಡಿದ್ದು ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ದುರಾಡಳಿತವೇ ಕಾರಣ ಎಂದು ದೂಷಿಸಿದ್ದಾರೆ. ಪಕ್ಷದ ಸಂಸದ ಮತ್ತು ಕೇಂದ್ರ ಸಚಿವ ಜಾನ್ ಬಾರ್ಲಾ ಅವರೊಂದಿಗೆ ಜಲ್ಪೈಗುರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಘೋಷ್, “ಇಂದು ಜಂಗಲ್​​ಮಹಲ್ ಮತ್ತು ಉತ್ತರ ಬಂಗಾಳದಲ್ಲಿ ಜನರು ಪ್ರತ್ಯೇಕ ರಾಜ್ಯಗಳನ್ನು ಬಯಸಿದರೆ ಅದರ ಜವಾಬ್ದಾರಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಉತ್ತರ ಬಂಗಾಳದಲ್ಲಿ ಏಕೆ ಅಭಿವೃದ್ಧಿಯಾಗಿಲ್ಲ ಎಂದು ಅವರು ಉತ್ತರಿಸಬೇಕು. ವೈದ್ಯಕೀಯ ಚಿಕಿತ್ಸೆ, ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗಾಗಿ ಜನರು ಬಂಗಾಳದ ಹೊರಗೆ ಏಕೆ ಹೋಗಬೇಕು? ಸಾಕಷ್ಟು ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ಕಾರ್ಖಾನೆಗಳು ಏಕೆ ಇಲ್ಲ? ಜಂಗಲ್ ಮಹಲ್‌ನಲ್ಲೂ ಅದೇ ಪರಿಸ್ಥಿತಿ. ಅಲ್ಲಿನ ಮಹಿಳೆಯರು ದಿನಕ್ಕೆ ಎರಡು ಹೊತ್ತಿನ ಊಟಕ್ಕಾಗಿ ಸಾಲ್ ಎಲೆಗಳನ್ನು ಏಕೆ ಮಾರಾಟ ಮಾಡಬೇಕು? ಅಲ್ಲಿಂದ ಜನರು ಕೆಲಸಕ್ಕಾಗಿ ಜಾರ್ಖಂಡ್, ಒಡಿಶಾ ಮತ್ತು ಗುಜರಾತ್‌ಗೆ ಏಕೆ ಹೋಗುತ್ತಾರೆ? ಈಗ ಜನರು ಇಂತಹ ಬೇಡಿಕೆಗಳನ್ನು ಮಾಡಿದ್ದರೆ (ಜಂಗಲ್ ಮಹಲ್ ಮತ್ತು ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯಗಳು) ಅದು ಅನ್ಯಾಯವಲ್ಲ ಎಂದಿದ್ದಾರೆ.

ಜೂನ್ 13 ರಂದು ಬಾರ್ಲಾ ಉತ್ತರ ಬಂಗಾಳದಲ್ಲಿ ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಬೇಡಿಕೆ ಇಟ್ಟಿದ್ದು, ಈ ಪ್ರದೇಶದಲ್ಲಿ ಅಭಿವೃದ್ಧಿಯ ಕೊರತೆ ಇದೆ ಎಂದಿದ್ದರು. ಜೂನ್ 21 ರಂದು, ಬಿಷ್ಣುಪುರದ ಬಿಜೆಪಿ ಸಂಸದೆ ಸೌಮಿತ್ರ ಖಾನ್ ಅವರು ಜಂಗಲ್​ಮಹಲ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಟಿಎಂಸಿ ಮತ್ತು ಅವರ ಪಕ್ಷದ ನಾಯಕರ ವಿಭಾಗದಿಂದ ಟೀಕೆಗಳನ್ನು ಎದುರಿಸಿದ ನಂತರ ಇಬ್ಬರೂ ನಾಯಕರು ಈ ವಿಷಯದಲ್ಲಿ ತಮ್ಮ ನಿಲುವುಗಳನ್ನು ಮೃದುಗೊಳಿಸಿದ್ದರು.

ಘೋಷ್ ಅವರ ಟೀಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಟಿಎಂಸಿಯ ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಬಿಜೆಪಿ ವಿಭಜಿಸಿ ಆಳುವ ನೀತಿಯಲ್ಲಿ ನಂಬಿಕೆ ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: ವಾಯುಸೇನೆ ವಿಮಾನದಲ್ಲಿ ಆಫ್ಘನ್‌ನಿಂದ ಭಾರತಕ್ಕೆ ವಾಪಸಾದ 107 ಭಾರತೀಯರು

ಇದನ್ನೂ ಓದಿ:  ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ ನೀವು ಇಲ್ಲದಂತಾಗುತ್ತೀರಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ

(West Bengal BJP president Dilip Ghosh extends support to the demand for separate states in north Benga1 and Junglemahal)

Published On - 12:24 pm, Sun, 22 August 21