AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳ: ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ, ಹಲವರಿಗೆ ಗಾಯ

ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ: ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ, ಹಲವರಿಗೆ ಗಾಯ
ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆImage Credit source: Amarujala.com
Follow us
ನಯನಾ ರಾಜೀವ್
|

Updated on: Mar 20, 2024 | 8:55 AM

ಪಶ್ಚಿಮ ಬಂಗಾಳದ ಕೂಚ್ ಬಿಹಾರ್​ ಜಿಲ್ಲೆಯಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಬಂಗಾಳದಲ್ಲಿ ಮೊದಲ ಹಿಂಸಾಚಾರದ ಘಟನೆ ಬೆಳಕಿಗೆ ಬಂದಿದೆ. ಕೂಚ್‌ ಬೆಹಾರ್‌ನ ದಿನಾಟಾದಲ್ಲಿ ಕೇಂದ್ರ ಸಚಿವ ನಿಶಿತ್‌ ಪ್ರಮಾಣಿಕ್‌ ಮತ್ತು ರಾಜ್ಯ ಸಚಿವ ಉದಯನ್‌ ಗುಹಾ ಅವರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಈ ಘರ್ಷಣೆಯಲ್ಲಿ ಎಸ್‌ಡಿಪಿಒ ಅವರ ತಲೆಗೆ ಗಾಯವಾಗಿದೆ. ಘಟನೆ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ಪ್ರಕಾರ ಉದಯನ್ ಗುಹಾ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು, ನಿಶಿತ್ ಪ್ರಮಾಣಿಕ್ ಅವರ ಕಾರವಾನ್ ಅಲ್ಲಿಯೇ ಸಾಗುತ್ತಿತ್ತು. ಈ ವೇಳೆ ಎರಡೂ ಕಡೆಯ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ನಿಶಿತ್ ಕೂಡ ಕಾರಿನಿಂದ ಇಳಿದಿದ್ದು, ಉದಯನ್ ಕೂಡ ಹೊರಗೆ ಬಂದಿದ್ದರು. ಇದೀಗ ಈ ಘಟನೆಯ ನಂತರ ಟಿಎಂಸಿ 24 ಗಂಟೆಗಳ ದಿನ್ಹತಾ ಬಂದ್ ಘೋಷಿಸಿದೆ. 2019 ರಲ್ಲಿ ಟಿಎಂಸಿ ತೊರೆದು ಕೂಚ್ ಬೆಹಾರ್ ಸ್ಥಾನವನ್ನು ಗೆದ್ದ ನಂತರ ಬಿಜೆಪಿ ಸೇರಿದ ನಿಸಿತ್ ಪ್ರಮಾಣಿಕ್ ಇದೀಗ ಪ್ರಚಾರ ನಡೆಸುತ್ತಿದ್ದರು. ಯಾವುದೇ ಪ್ರಚೋದನೆ ಇಲ್ಲದೆ ತಮ್ಮ ಬೆಂಬಲಿಗರ ಮೇಲೆ ಉದಯನ್ ಗುಹಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ಕಾಂಗ್ರೆಸ್​ ಸಮಾವೇಶದ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಆರೋಪಕ್ಕೆ ಪ್ರತ್ಯುತ್ತರ ನೀಡಿದ ಗುಹಾ, ‘ನನ್ನ ಹುಟ್ಟುಹಬ್ಬವನ್ನು ಆಚರಿಸಲು ನಮ್ಮ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಿಂದ ನಾನು ಇಂದು ಹಿಂದಿರುಗುತ್ತಿದ್ದೆ. ನಿಶಿತ್ ಬೆಂಗಾವಲು ಪಡೆ ಬಂದಾಗ ನಾನು ರಸ್ತೆಯಲ್ಲಿ ನಿಂತಿದ್ದೆ. ಅವರು ಯಾವುದೇ ಪ್ರಚೋದನೆ ಇಲ್ಲದೆ ನಮ್ಮ ಕಾರ್ಯಕರ್ತರನ್ನು ಹೊಡೆದಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ