ಸಿಎಂ ಮಮತಾ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ; ಸಿಟ್ಟಿಗೆದ್ದ ದೀದಿಯಿಂದ ಭಾಷಣ ಮೊಟಕು

|

Updated on: Jan 23, 2021 | 6:05 PM

ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾಷಣ ಮಾಡಲು ಆಮಂತ್ರಣ ನೀಡಲಾಯಿತು. ಸಿಎಂ ಮಮತಾ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಕೆಲವರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು.

ಸಿಎಂ ಮಮತಾ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ; ಸಿಟ್ಟಿಗೆದ್ದ ದೀದಿಯಿಂದ ಭಾಷಣ ಮೊಟಕು
ಸಿಟ್ಟಿಗೆದ್ದ ದೀದಿಯಿಂದ ಭಾಷಣ ಮೊಟಕು
Follow us on

ಕೋಲ್ಕತ್ತಾ: ಸುಭಾಷ್‌ಚಂದ್ರ ಬೋಸ್​ರವರ 125ನೇ ಜಯಂತಿ ಹಿನ್ನೆಲೆಯಲ್ಲಿ ಪರಾಕ್ರಮ ದಿವಸ್ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ವಿಕ್ಟೋರಿಯಾ ಮೆಮೋರಿಯಲ್ ಹಾಲ್​ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು.

ಈ ವೇಳೆ, ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾಷಣ ಮಾಡಲು ಆಮಂತ್ರಣ ನೀಡಲಾಯಿತು. ಸಿಎಂ ಮಮತಾ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಕೆಲವರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು.

ಇದರಿಂದ ಸಿಟ್ಟಿಗೆದ್ದ ಮಮತಾ ಬ್ಯಾನರ್ಜಿ ಇದು ಸರ್ಕಾರಿ ಕಾರ್ಯಕ್ರಮ. ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಕಾರ್ಯಕ್ರಮಕ್ಕೆ ಬಂದ ಪ್ರಧಾನಿ ಮೋದಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ಹಾಗಾಗಿ, ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ತಾವೆಲ್ಲರೂ ಅವಮಾನಿಸುವುದು ತರವಲ್ಲ. ಆಹ್ವಾನಿಸಿ ಅಪಮಾನಿಸುವುದು ನಿಮಗೆ ಸರಿಯೇ? ಎಂದು ಮಮತಾ ಘೋಷಣೆ ಕೂಗಿದವರ ವಿರುದ್ಧ ಹರಿಹಾಯ್ದರು. ಜೊತೆಗೆ, ನಿಮ್ಮ ವರ್ತನೆ ಖಂಡಿಸಿ ನಾನು ಭಾಷಣ ಮಾಡುವುದಿಲ್ಲ ಎಂದು ತಮ್ಮ ಭಾಷಣವನ್ನು ಅಲ್ಲೇ ಮೊಟಕುಗೊಳಿಸಿಬಿಟ್ಟರು.

ನೇತಾಜಿ ಸುಭಾಷ್​ ಚಂದ್ರ ಬೋಸ್ ಜನ್ಮ ದಿನ ಇನ್ಮುಂದೆ ’ಪರಾಕ್ರಮ ದಿವಸ್​‘: 23ರಂದು ಮೋದಿ-ದೀದಿ ಮುಖಾಮುಖಿ?

Published On - 5:35 pm, Sat, 23 January 21