ದೆಹಲಿ ಜನವರಿ 24: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರು ಬುಧವಾರ ಬರ್ಧಮಾನ್‌ನಿಂದ ಕೋಲ್ಕತ್ತಾಗೆ (Kolkata) ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ (Car Accident). ಈ ಘಟನೆಯಲ್ಲಿ ಮಮತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮೂಲಗಳ ಪ್ರಕಾರ ಮಳೆಯ ಕಾರಣ ಹೆಲಿಕಾಪ್ಟರ್ ಪ್ರಯಾಣ ಕೈ ಬಿಟ್ಟು ಮಮತಾ ಬ್ಯಾನರ್ಜಿ ಕಾರಿನಲ್ಲಿ ಹಿಂತಿರುಗುತ್ತಿದ್ದರು.
ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಮುಖ್ಯಮಂತ್ರಿ ಗಾಯಗೊಂಡರು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕೋಲ್ಕತ್ತಾಗೆ ಕರೆತರಲಾಗುತ್ತಿದೆ. ಕೋಲ್ಕತ್ತಾದಲ್ಲಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಲಿದ್ದಾರೆ.
ಚಾಲಕನ ಪಕ್ಕದಲ್ಲಿ ಮುಂಭಾಗದಲ್ಲಿ ಕುಳಿತಿದ್ದ ಮಮತಾ ಬ್ಯಾನರ್ಜಿ ತಲೆ ವಿಂಡ್‌ಸ್ಕ್ರೀನ್‌ಗೆ ಬಡಿದು ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಕೋಲ್ಕತ್ತಾದಿಂದ 100 ಕಿಮೀ ದೂರದಲ್ಲಿರುವ ಪುರ್ಬಾ ಬರ್ಧಮಾನ್‌ನಲ್ಲಿ ಆಡಳಿತಾತ್ಮಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲು ಮಮತಾ ಹೋಗಿದ್ದರು.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಇಲ್ಲ, ಟಿಎಂಸಿ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತದೆ ಎಂದು ಬುಧ ವಾರ ಬೆಳಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ಆದಾಗ್ಯೂ, ಮಮತಾ “ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಕಾಂಗ್ರೆಸ್ ಹೇಳಿದೆ.
We have just heard of the injury suffered by Mamata Banerjee-ji in a car accident. We wish her a full and speedy recovery.
The Bharat Jodo Nyay Yatra is looking forward to entering West Bengal tomorrow late morning. January 26 and 27th being break days, the Yatra will resume on…
— Jairam Ramesh (@Jairam_Ramesh) January 24, 2024
“ಮಮತಾ ಬ್ಯಾನರ್ಜಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಬಗ್ಗೆ ನಾವು ಈಗಷ್ಟೇ ಕೇಳಿದ್ದೇವೆ. ಅವರು ಪೂರ್ಣ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಳೆ ಬಂಗಾಳಕ್ಕೆ ಪ್ರವೇಶಿಸಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ನವೀಕರಣವನ್ನು ಅವರು ಪೋಸ್ಟ್ ಮಾಡಿದ್ದಾರೆ.
“ಭಾರತ್ ಜೋಡೋ ನ್ಯಾಯ್ ಯಾತ್ರೆಯು ನಾಳೆ ತಡರಾತ್ರಿ ಪಶ್ಚಿಮ ಬಂಗಾಳವನ್ನು ಪ್ರವೇಶಿಸಲು ಎದುರು ನೋಡುತ್ತಿದೆ. ಜನವರಿ 26 ಮತ್ತು 27 ರಂದು ವಿರಾಮದ ದಿನಗಳು, ಯಾತ್ರೆಯು 28 ರಂದು ಪುನರಾರಂಭವಾಗಲಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿ ಹೋರಾಟ: ಮಮತಾ ಬ್ಯಾನರ್ಜಿ
ಯಾತ್ರೆ ಬಂಗಾಳಕ್ಕೆ ಪ್ರವೇಶಿಸುವ ಬಗ್ಗೆ ತನಗೆ ತಿಳಿಸದಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದ್ದ ಮಮತಾ “ಅವರು ನನ್ನ ರಾಜ್ಯಕ್ಕೆ ಬರುತ್ತಿದ್ದಾರೆ. ಆದರೆ ನಾನು ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದರೂ ನನಗೆ ತಿಳಿಸುವ ಸೌಜನ್ಯ ತೋರಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಗುಡುಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Wed, 24 January 24