ಎಡಪಕ್ಷಗಳು ಇಂಡಿಯಾ ಬ್ಲಾಕ್‌ನ ಕಾರ್ಯಸೂಚಿಯನ್ನು ನಿಯಂತ್ರಿಸುತ್ತಿವೆ: ಮಮತಾ ಬ್ಯಾನರ್ಜಿ

ನಾವು 34 ವರ್ಷ ಹೋರಾಡಿದವರು. ನಮ್ಮ ಯಾವುದೇ ಸಲಹೆಯನ್ನು ಕೇಳುವುದಿಲ್ಲ. ನಮಗೆ ತುಂಬಾ ಅಗೌರವವಿದೆ. ಆದರೆ, ಪ್ರಾದೇಶಿಕ ಪಕ್ಷ ಬಲಿಷ್ಠವಾಗಿರುವ ಜಾಗವನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ಹೇಳಿದ್ದೆವು. ಅದೇ ವೇಳೆ ಕಾಂಗ್ರೆಸ್ ಹೆಸರು ಉಲ್ಲೇಖಿಸದೆಯೇ ಮಾತನಾಡಿದ ಮಮತಾ, 'ನೀವು 300 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಎಂದಿದ್ದಾರೆ.

ಎಡಪಕ್ಷಗಳು ಇಂಡಿಯಾ ಬ್ಲಾಕ್‌ನ ಕಾರ್ಯಸೂಚಿಯನ್ನು ನಿಯಂತ್ರಿಸುತ್ತಿವೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
|

Updated on: Jan 23, 2024 | 1:45 PM

ಕೋಲ್ಕತ್ತಾ ಜನವರಿ 23: ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟಿಸುತ್ತಿದ್ದಾಗ  ಕೋಲ್ಕತ್ತಾದ ಬೀದಿಗಳಲ್ಲಿ ಸರ್ವಧರ್ಮ ಸಮನ್ವಯದ ಸಂದೇಶದೊಂದಿಗೆ ಮಮತಾ ಬ್ಯಾನರ್ಜಿ (Mamata Banerjee) ‘ಸಂಹತಿ ಯಾತ್ರೆ’ ನಡೆಸುತ್ತಿದ್ದರು. ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷವೊಂದರ ನಾಯಕಿಯಾಗಿ ರ‍್ಯಾಲಿಯ ಕೊನೆಯಲ್ಲಿ ಭಾಷಣ ಮಾಡುವಾಗ ಅವರ ಧ್ವನಿಯಲ್ಲಿ ಕೆಲವು ವಿಷಾದವೂ ಕಾಣಿಸಿಕೊಂಡಿತು. ಇಂಡಿಯಾ ಮೈತ್ರಿಕೂಟದ ಸಭೆಯನ್ನು ಸಿಪಿಎಂ ‘ನಿಯಂತ್ರಿಸಿದೆ’ ಎಂದು ಅವರು ಹೇಳಿದರು. ‘ನಾವು ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟಿದ್ದೇವೆ. ಆದರೆ ನಾವು ಸಭೆಗೆ ಹೋದಾಗ, ಸಿಪಿಎಂ ಸಭೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಲು ನಮಗೆ ತುಂಬಾ ಬೇಸರವಾಗಿದೆ ಎಂದಿದ್ದಾರೆ ಮಮತಾ.

ಬಂಗಾಳದಲ್ಲಿ 34 ವರ್ಷಗಳ ಎಡಪಂಥೀಯ ಆಡಳಿತವನ್ನು ಕೊನೆಗೊಳಿಸಿದ ನಂತರ ತೃಣಮೂಲ ಅಧಿಕಾರಕ್ಕೆ ಬಂದಿತು. ಎಡಪಕ್ಷಗಳ ಆಡಳಿತದಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಮಮತಾ ಬ್ಯಾನರ್ಜಿಯವರ ಪಾತ್ರವೂ ಅಲ್ಲಗಳೆಯುವಂತಿಲ್ಲ. ಅವರು ಗದ್ದೆ, ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಸುದೀರ್ಘ ರಾಜಕೀಯ ಹೋರಾಟದ ನಂತರ ಅಧಿಕಾರ ಬದಲಾವಣೆಯಾಯಿತು. ಆದರೆ ಸಿಪಿಎಂಇ ಈಗ ಇಂಡಿಯಾ ಅಲಯನ್ಸ್‌ನ ಸಭೆಯನ್ನು ‘ನಿಯಂತ್ರಿಸುತ್ತದೆ’ ಎಂದು ತೃಣಮೂಲ ನಾಯಕಿ ಹೇಳಿದ್ದಾರೆ.

‘ನಾವು 34 ವರ್ಷ ಹೋರಾಡಿದವರ ಯಾವುದೇ ಸಲಹೆಯನ್ನು ಕೇಳುವುದಿಲ್ಲ. ನಮಗೆ ತುಂಬಾ ಅಗೌರವವಿದೆ. ಆದರೆ, ಪ್ರಾದೇಶಿಕ ಪಕ್ಷ ಬಲಿಷ್ಠವಾಗಿರುವ ಜಾಗವನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ಹೇಳಿದ್ದೆವು. ಅದೇ ವೇಳೆ ಕಾಂಗ್ರೆಸ್ ಹೆಸರು ಉಲ್ಲೇಖಿಸದೆಯೇ ಮಾತನಾಡಿದ ಮಮತಾ, ‘ನೀವು (ಕಾಂಗ್ರೆಸ್) 300 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ, ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಯಾವುದೇ ಸ್ಥಾನಕ್ಕೆ ನಾವು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಅವರು ಹೇಳುತ್ತಿದ್ದಾರೆ. ಒಂದು ವಿಷಯ ನೆನಪಿಡಿ, ಬಿಜೆಪಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಬಿಜೆಪಿಗೆ ಯಾರಾದರೂ ಸಹಾಯ ಮಾಡಿದರೆ ನಿಮ್ಮಲ್ಲಿ ಯಾರೂ ಕ್ಷಮಿಸುವುದಿಲ್ಲ. ನಾನು ಕ್ಷಮಿಸುವುದಿಲ್ಲ. ನಮಗೆ ಹೋರಾಡುವ ಧೈರ್ಯವಿದೆ, ಆದರೆ ನಮಗೆ ಹೋರಾಡಲು ಅವಕಾಶವಿಲ್ಲ ಎಂದಿದ್ದಾರೆ.

ನಮಗೆ ಧೈರ್ಯವಿದೆ. ಇಂದು ನಾವು ಮೆರವಣಿಗೆ ಮಾಡಿದೆವು. ನಾನು ಧೈರ್ಯವನ್ನು ನೋಡಿದೆ. ಹಲವು ರಾಜಕೀಯ ಪಕ್ಷಗಳಿವೆ. ಯಾರು ಈ ರೀತಿ ಧೈರ್ಯ ತೋರಿಸಿದರು? ನಾವು ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರಗಳು… ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಹಿಂದೂ-ಮುಸ್ಲಿಂ-ಸಿಖ್-ಕ್ರೈಸ್ತರು ಸಹೋದರರಂತೆ ಬಾಳಬೇಕೆಂದು ನಾವು ಬಯಸುತ್ತೇವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ

ಎಡಪಕ್ಷಗಳು ಇಂಡಿಯಾ ಬ್ಲಾಕ್‌ನ ಕಾರ್ಯಸೂಚಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿಯನ್ನು ಟೀಕಿಸಿದ್ದು ಮಮತಾ ಅವಕಾಶವಾದಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೀಟು ಹಂಚಿಕೆ, ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡ ಮಮತಾ, ಇಂಡಿಯಾ ಮೈತ್ರಿಯಿಂದ ಬೇರ್ಪಡುವ ತಯಾರಿಯೇ?

ಮಮತಾ ಅವರ ಸಹಾಯದಿಂದ ಕಾಂಗ್ರೆಸ್ ಚುನಾವಣೆ ಎದುರಿಸುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ. “ಕಾಂಗ್ರೆಸ್‌ಗೆ ತನ್ನ ಸ್ವಂತ ಬಲದ ಮೇಲೆ ಹೇಗೆ ಹೋರಾಡಬೇಕೆಂದು ತಿಳಿದಿದೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು” ಎಂದಿದ್ದಾರೆ ಚೌಧರಿ.

ಇದಕ್ಕೂ ಮುನ್ನ, ಜನವರಿ ಮೊದಲ ವಾರದಲ್ಲಿ, ಮುಂಬರುವ ಲೋಕಸಭೆ ಚುನಾವಣೆಗೆ ಬಂಗಾಳದಲ್ಲಿ ಸೀಟು ಹಂಚಿಕೆ ಕುರಿತು ಚೌಧರಿ ಮಮತಾ ಅವರನ್ನು ಟೀಕಿಸಿದ್ದರು. ಬಂಗಾಳದಲ್ಲಿ ಟಿಎಂಸಿ ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ನೀಡಿದೆ ಎಂಬ ವರದಿಗಳಿಗೆ ಪ್ರತಿಕ್ರಿಸಿದ ಅವರು ಕಾಂಗ್ರೆಸ್ ಸೀಟಿಗಾಗಿ ಬೇಡುವುದಿಲ್ಲ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ