Plane Crash: ಮಿಜೋರಾಂನ ಲೆಂಗ್‌ಪುಯಿ ಏರ್ಪೋರ್ಟ್ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ
ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ(Plane Crash)ಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಜೋರಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಕಾರ, ಬರ್ಮಾ ಸೇನೆಯ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಪೈಲಟ್‌ನೊಂದಿಗೆ ಒಟ್ಟು 14 ಮಂದಿ ವಿಮಾನದಲ್ಲಿದ್ದರು, ಆರು ಮಂದಿ ಗಾಯಗೊಂಡಿದ್ದಾರೆ, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸೇನಾ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.
ಕಳೆದ ವಾರ ಬಂಡುಕೋರರೊಂದಿಗೆ ಗುಂಡಿನ ಚಕಮಕಿಯ ನಡುವೆ ಮಿಜೋರಾಂಗೆ ಪಲಾಯನ ಮಾಡಿದ್ದ 184 ಮ್ಯಾನ್ಮಾರ್ ಸೈನಿಕರನ್ನು ಭಾರತ ಸೋಮವಾರ ವಾಪಸ್ ಕಳುಹಿಸಿದೆ. ಇದನ್ನು ದೃಢಪಡಿಸಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಪಲಾಯನಗೈದಿದ್ದ ಮ್ಯಾನ್ಮಾರ್ ಸೈನಿಕರನ್ನು ಕರೆದುಕೊಂಡು ಹೋಗಲು ವಿಮಾನ ಬಂದಿತ್ತು ಎನ್ನಲಾಗಿದೆ. ಮಿಜೋರಾಂನ ಲೆಂಗ್‌ಪುಯಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನವು ರನ್‌ವೇಯಿಂದ ಜಾರಿದೆ.
Mizoram | Six people were injured after a plane from the Burmese Army crashed at Lengpui airport. 14 people were on board with the pilot. The injured were admitted to Lengpui Hospital: Mizoram DGP pic.twitter.com/AUXmOmCR2x
— ANI (@ANI) January 23, 2024
ಅಸ್ಸಾಂ ರೈಫಲ್ಸ್ ಪ್ರಕಾರ, ಕಳೆದ ವಾರ 276 ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪ್ರವೇಶಿಸಿದ್ದರು. ಸೋಮವಾರ, ಅವರಲ್ಲಿ 184 ಜನರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಲಾಗಿತ್ತು.
ಈ ಸೈನಿಕರು ಜನವರಿ 17 ರಂದು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಗಡಿಯಿಂದ ಭಾರತವನ್ನು ಪ್ರವೇಶಿಸಿದ್ದರು ಮತ್ತು ಅಸ್ಸಾಂ ರೈಫಲ್ಸ್‌ನಿಂದ ಆಶ್ರಯ ಪಡೆದಿದ್ದರು.
ಮ್ಯಾನ್ಮಾರ್ ತನ್ನ ಗಡಿಯನ್ನು ಭಾರತದ 4 ರಾಜ್ಯಗಳೊಂದಿಗೆ ಹಂಚಿಕೊಂಡಿದೆ. ಎರಡು ದೇಶಗಳ ನಡುವೆ 1600 ಕಿಲೋಮೀಟರ್ ಗಡಿ ಇದೆ. ಭಾರತ ಮತ್ತು ಮ್ಯಾನ್ಮಾರ್ ನಡುವೆ ಮುಕ್ತ ಸಂಚಾರದ ಒಪ್ಪಂದಕ್ಕೆ 1970 ರಲ್ಲಿ ಸಹಿ ಹಾಕಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Tue, 23 January 24