ಕೋಲ್ಕತ್ತಾ ಜನವರಿ 11: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ವಿವಾದಾತ್ಮಕ ‘ಒಂದು ರಾಷ್ಟ್ರ, ಒಂದು ಚುನಾವಣೆ’ (one nation, one election) ಕಲ್ಪನೆ ವಿರುದ್ಧ ಗುಡುಗಿದ್ದು ಇದು “ಸಂವಿಧಾನದ ಮೂಲ ರಚನೆಯನ್ನು ಬುಡಮೇಲು ಮಾಡುವ ವಿನ್ಯಾಸ. ರಾಷ್ಟ್ರೀಯ ಸಾರ್ವಜನಿಕ ರಂಗದಲ್ಲಿ ಪ್ರವೇಶಿಸಲು ಪ್ರಜಾಪ್ರಭುತ್ವದ ಸೋಗಿನಲ್ಲಿ ನಿರಂಕುಶಪ್ರಭುತ್ವ ತರಲಾಗುತ್ತಿದೆ. ನಾನು ನಿರಂಕುಶಾಧಿಕಾರದ ವಿರುದ್ಧ. ಆದ್ದರಿಂದ ನಾನು ನಿಮ್ಮ ಕಲ್ಪನೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ (Narendra Modi) ಸರ್ಕಾರ ದೇಶದ ಫೆಡರಲ್ ರಚನೆಯನ್ನು ಬುಡಮೇಲು ಮಾಡಿದ್ದಾರೆ. ನೀವು ಕೆಲವು ರೀತಿಯ ಏಕಪಕ್ಷೀಯ ನಿರ್ಧಾರಗಳನ್ನು ತಿಳಿಸುತ್ತಿರುವಂತೆ ತೋರುತ್ತಿದೆ. ಕೇಂದ್ರ ಸರ್ಕಾರವು ಈಗಾಗಲೇ ತೆಗೆದುಕೊಂಡಿರುವ ‘ನಿರ್ಧಾರ’ – ನಿಜವಾದ ಪ್ರಜಾಸತ್ತಾತ್ಮಕ ಮತ್ತು ಫೆಡರಲ್ (ರಾಷ್ಟ್ರ) ಮನೋಭಾವಕ್ಕೆ ವಿರುದ್ಧವಾದ ರಚನೆಯನ್ನು ಹೇರಲು ಇರುವುದಾಗಿದೆ ಎಂದಿದ್ದಾರೆ ಮಮತಾ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ ಡಾ ನಿತೇನ್ ಚಂದ್ರ ಅವರಿಗೆ ವಿವರವಾಗಿ ಪತ್ರ ಬರೆದ ಮಮತಾ, ನನಗೆ ಈ ತತ್ವದ ಬಗ್ಗೆ ಹೊಂದಿಕೊಳ್ಳು ಆಗುವುದಿಲ್ಲ ಅದೇ ವೇಳೆ ನಿಮ್ಮ ಕ್ರಮಶಾಸ್ತ್ರೀಯ ವಿಧಾನ ಒಪ್ಪಿಗೆಯಲ್ಲ ಎಂದಿದ್ದಾರೆ.
ಅವರು ಎತ್ತಿದ ಎರಡು ಪರಿಕಲ್ಪನಾ ಸಮಸ್ಯೆಗಳೆಂದರೆ “ಒಂದು ರಾಷ್ಟ್ರ” ಎಂಬ ಪದದ ಸಾಂವಿಧಾನಿಕ ಮತ್ತು ರಚನಾತ್ಮಕ ಪರಿಣಾಮ” ಮತ್ತು, ವಿಶೇಷವಾಗಿ ಅಸ್ತಿತ್ವದಲ್ಲಿರುವ ಚುನಾವಣಾ ಅವಧಿಯಲ್ಲಿ ಗಮನಾರ್ಹ ಅಂತರವಿರುವಾಗ ಸಂಸತ್ತಿನ ಮತ್ತು ಅಸೆಂಬ್ಲಿ ಚುನಾವಣೆಗಳ ಸಮಯದ ಕುರಿತಾದ ಪ್ರಶ್ನೆಗಳಾಗಿವೆ.
1952 ರಲ್ಲಿ, ಮೊದಲ ಸಾರ್ವತ್ರಿಕ ಚುನಾವಣೆಯನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಏಕಕಾಲದಲ್ಲಿ ನಡೆಸಲಾಯಿತು. ಕೆಲವು ವರ್ಷಗಳಿಂದ ಏಕಕಾಲಕ್ಕೆ ನಡೆಯುತ್ತಿತ್ತು ಇತ್ತ್ತು. ಆದರೆ ಅದನ್ನು ಕೈ ಬಿಡಲಾಗಿದೆ. ವಿವಿಧ ರಾಜ್ಯಗಳು ಈಗ ವಿಭಿನ್ನ ಚುನಾವಣಾ ಕ್ಯಾಲೆಂಡರ್‌ಗಳನ್ನು ಹೊಂದಿವೆ ಮತ್ತು ಅವು ರಾಜಕೀಯ ಬೆಳವಣಿಗೆಗಳಿಂದಾಗಿ ಬದಲಾವಣೆಗಳಿಗೆ ಒಳಗಾಗುತ್ತವೆ. ಚುನಾವಣೆಗಳನ್ನು ನಿರೀಕ್ಷಿಸದ ರಾಜ್ಯಗಳು ಅವುಗಳನ್ನು ಏಕಕಾಲದಲ್ಲಿ ನಡೆಸುವಂತೆ ಒತ್ತಾಯಿಸಬಾರದು.
ಲೋಕಸಭೆ ಅಥವಾ ರಾಜ್ಯ ಅಸೆಂಬ್ಲಿ “ಅಕಾಲಿಕ ವಿಸರ್ಜನೆಗೆ ಒಳಪಟ್ಟಿದ್ದರೆ” ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯಲ್ಲಿ ಸಂಭಾವ್ಯ ಬಿರುಕುಗಳನ್ನು ಸಹ ಬ್ಯಾನರ್ಜಿ ಎತ್ತಿ ತೋರಿಸಿದರು. ಅದೇ ವೇಳೆ ಕೇಂದ್ರದಲ್ಲಿ ಸರ್ಕಾರದ ಅಸ್ಥಿರತೆಯು ರಾಜ್ಯ ಶಾಸಕಾಂಗಗಳನ್ನು ಅಸ್ಥಿರಗೊಳಿಸಬಾರದು” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಎದುರು ವಾರಾಣಸಿಯಿಂದ ಸ್ಪರ್ಧಿಸಿ: ಮಮತಾ ಬ್ಯಾನರ್ಜಿಗೆ ಬಿಜೆಪಿ ನಾಯಕಿ ಸವಾಲು
ಏಕಕಾಲದಲ್ಲಿ ಚುನಾವಣೆ ಪರಿಚಯದ ಈ ಮೂಲಭೂತ ಸಮಸ್ಯೆಯನ್ನು ನಿಮ್ಮ ಗೌರವಾನ್ವಿತ ಸಮಿತಿಯು ಹೇಗೆ ಪರಿಹರಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ” ಎಂದು ಬ್ಯಾನರ್ಜಿ ಬರೆದಿದ್ದಾರೆ. “ಸಾಮಾನ್ಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು” ಸೇರಿದಂತೆ ಹಲವಾರು “ಸಣ್ಣ” ಆಕ್ಷೇಪಣೆಗಳನ್ನು ಸಹ ಸೇರಿಸುವಲ್ಲಿ ಸಮಿತಿ ವಿಫಲವಾಗಿದೆ ಎಂದು ಮಮತಾ ಟೀಕಿಸಿದ್ದಾರೆ.
“ನಿಮ್ಮ ಪತ್ರವ್ಯವಹಾರದ ಅವಧಿ ಮತ್ತು ನೀವು ಅರೆಬೆಂದ ಊಹೆಗಳನ್ನು ಸತ್ಯವೆಂದು ಒಪ್ಪಿಕೊಳ್ಳುವ ವಿಧಾನದಿಂದ, ಪ್ರಕರಣದ ನ್ಯೂನತೆಗಳನ್ನು ವಿಶ್ಲೇಷಿಸಲು ಸಮಿತಿಯು ಗಂಭೀರವಾಗಿ ಆಸಕ್ತಿ ಹೊಂದಿದೆಯೇ ಎಂದು ನಾವು ಅನುಮಾನಿಸುತ್ತೇವೆ. ಈ ಸಂದರ್ಭದಲ್ಲಿ ನೀವು ರೂಪಿಸಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ನಾನು ಒಪ್ಪಲು ಸಾಧ್ಯವಿಲ್ಲ. ನಿಮ್ಮ ಸೂತ್ರೀಕರಣ ಮತ್ತು ಪ್ರಸ್ತಾಪವನ್ನು ನಾವು ಒಪ್ಪುವುದಿಲ್ಲ ಎಂದು ಮಮತಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Thu, 11 January 24