ಲೋಕಸಭಾ ಚುನಾವಣೆ ಮೊದಲು ರಾಮಮಂದಿರ ಉದ್ಘಾಟನೆ ಬಿಜೆಪಿಯ ಗಿಮಿಕ್: ಮಮತಾ ಬ್ಯಾನರ್ಜಿ
ನಾನು ಅಲ್ಲಾಹನ ಮೇಲೆ ಪ್ರತಿಜ್ಞೆ ಮಾಡುತ್ತೇನೆ, ನಾನು ಇರುವವರೆಗೂ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಕಚ್ಚಾಡುವುದನ್ನು ನಾನು ಅನುಮತಿಸುವುದಿಲ್ಲ. ನಾವು ಬಿಜೆಪಿಗೆ ಶರಣಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದಕ್ಷಿಣ 24 ಪರಗಣ ಜನವರಿ 09: ಅಯೋಧ್ಯೆಯಲ್ಲಿರುವ (Ayodhya) ರಾಮ ಮಂದಿರ (Ram mandir) ಉದ್ಘಾಟನೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ (BJP) ಮಾಡುತ್ತಿರುವ ಗಿಮಿಕ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಹೇಳಿದ್ದಾರೆ. ನಾನು ಐಕ್ಯತೆಯ ಹಬ್ಬಗಳನ್ನು ನಂಬುತ್ತೇನೆ. ನ್ಯಾಯಾಲಯದ ಆದೇಶವನ್ನು ಅನುಸರಿಸಿ ಯಾರೂ ದೇವಾಲಯಕ್ಕೆ ಆಕ್ಷೇಪಿಸಿಲ್ಲ. ಆದರೆ ಬಿಜೆಪಿ ಚುನಾವಣೆಗೆ ಮುಂಚೆ ರಾಮಮಂದಿರ ಉದ್ಘಾಟನೆ ಮಾಡುತ್ತಿರುವುದು ಗಿಮಿಕ್. ನೀವು ಇತರ ಸಮುದಾಯವನ್ನು ಒಡೆಯುವ ಮತ್ತು ಕಡೆಗಣಿಸುವ ಕಾರ್ಯ ಮಾಡಬಾರದು ಎಂದಿದ್ದಾರೆ.
ನಾನು ಅಲ್ಲಾಹನ ಮೇಲೆ ಪ್ರತಿಜ್ಞೆ ಮಾಡುತ್ತೇನೆ, ನಾನು ಇರುವವರೆಗೂ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಕಚ್ಚಾಡುವುದನ್ನು ನಾನು ಅನುಮತಿಸುವುದಿಲ್ಲ. ನಾವು ಬಿಜೆಪಿಗೆ ಶರಣಾಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ.
ನಾನು ಮಾಫಿಯಾದ ನಾಯಕಿ ಎಂದು ಕೆಲವರು ಹೇಳುತ್ತಿದ್ದಾರೆ. ಜನರು ನನ್ನ ನಾಯಕ, ನಾನು ಅವರ ಆಳು ಎಂದು ಅವರು ಪಡಿತರ ವಿತರಣೆಯಲ್ಲಿ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿರುವ ಪಕ್ಷದ ನಾಯಕ ಶೇಖ್ ಶಜಹಾನ್ ಅವರ ಪ್ರಕರಣವನ್ನು ನೇರವಾಗಿ ಉಲ್ಲೇಖಿಸದೆ ಮಮತಾ ಹೇಳಿದ್ದಾರೆ. ಕಳೆದ ಶುಕ್ರವಾರ ಶಹಜಾನ್ ಅವರ ನಿವಾಸದಲ್ಲಿ ಇಡಿ ದಾಳಿ ನಡೆಸಿದಾಗ ಬೆಂಬಲಿಗರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದರು.
ಇದನ್ನೂ ಓದಿ: Ram Mandir Event Invitees:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ; ಸಮಾರಂಭಕ್ಕೆ ಯಾರಿಗೆಲ್ಲ ಆಹ್ವಾನವಿದೆ?
ರಾಮ ಮಂದಿರ ಉದ್ಘಾಟನೆ ಅಥವಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿರುತ್ತಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು 6,000 ಕ್ಕೂ ಹೆಚ್ಚು ಸಾರ್ವಜನಿಕ ವ್ಯಕ್ತಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ