Ram Mandir Event Invitees:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ; ಸಮಾರಂಭಕ್ಕೆ ಯಾರಿಗೆಲ್ಲ ಆಹ್ವಾನವಿದೆ?
ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಂದರ್ಭದಲ್ಲಿ ಅಯೋಧ್ಯೆಗೆ ಲಕ್ಷೋಪಲಕ್ಷ ಜನರು ಬರುವ ನಿರೀಕ್ಷೆಯಿದೆ. ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 7,000 ಅತಿಥಿಗಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ರಾಮ ಲಲ್ಲಾ' ನ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕಾಗಿ 6,000 ಆಮಂತ್ರಣ ಕಾರ್ಡ್‌ಗಳನ್ನು ರಾಷ್ಟ್ರದಾದ್ಯಂತದ ಆಹ್ವಾನಿತರಿಗೆ ಕಳುಹಿಸಲಾಗಿದೆ. ಈ ಆಮಂತ್ರಣ ಕಾರ್ಡ್‌ಗಳನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಳುಹಿಸಿದೆ.

ದೆಹಲಿ ಜನವರಿ 09: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರದ (Ram mandir) ಉದ್ಘಾಟನಾ ಸಮಾರಂಭಕ್ಕೆ ಹಲವಾರು ರಾಜಕೀಯ ನಾಯಕರು, ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ಈ ದೇವಸ್ಥಾನದಲ್ಲಿ ನಡೆಯುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ (Ram Mandir consecration ceremony)ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ವೈದಿಕ ಆಚರಣೆಗಳು ಮುಖ್ಯ ಸಮಾರಂಭಕ್ಕೆ ಒಂದು ವಾರದ ಮೊದಲು ಜನವರಿ 16 ರಂದು ಪ್ರಾರಂಭವಾಗಲಿವೆ. ವಾರಣಾಸಿಯ ಅರ್ಚಕ, ಲಕ್ಷ್ಮಿ ಕಾಂತ್ ದೀಕ್ಷಿತ್ ಜನವರಿ 22 ರಂದು ಮುಖ್ಯ ಆಚರಣೆಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯಾ ಅಮೃತ ಮಹೋತ್ಸವ ನಡೆಯಲಿದೆ.
ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಂದರ್ಭದಲ್ಲಿ ಅಯೋಧ್ಯೆಗೆ ಲಕ್ಷೋಪಲಕ್ಷ ಜನರು ಬರುವ ನಿರೀಕ್ಷೆಯಿದೆ. ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 7,000 ಅತಿಥಿಗಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ರಾಮ ಲಲ್ಲಾ’ ನ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕಾಗಿ 6,000 ಆಮಂತ್ರಣ ಕಾರ್ಡ್‌ಗಳನ್ನು ರಾಷ್ಟ್ರದಾದ್ಯಂತದ ಆಹ್ವಾನಿತರಿಗೆ ಕಳುಹಿಸಲಾಗಿದೆ. ಈ ಆಮಂತ್ರಣ ಕಾರ್ಡ್‌ಗಳನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಳುಹಿಸಿದೆ.
ಯಾರಿಗೆಲ್ಲ ಇದೆ ಆಹ್ವಾನ?
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಹಾರ ಸಿಎಂ ನಿತೀಶ್ ಕುಮಾರ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ಮುಖಂಡ ಮನಮೋಹನ್ ಸಿಂಗ್, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ,ಎಚ್ ಡಿ ದೇವೇಗೌಡ , ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ),ಬಿಜೆಪಿ ಅನುಭವಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಮುರಳೀ ಮನೋಹರ್ ಜೋಶಿ, ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್.
ಇದನ್ನೂ ಓದಿ:ರಾತ್ರಿ ಸಮಯದಲ್ಲಿ ಅಯೋಧ್ಯೆ ರಾಮಮಂದಿರ ಹೇಗೆ ಕಾಣುತ್ತೆ ನೋಡಿ? ಇಲ್ಲಿದೆ ಫೋಟೋ
ಕ್ರೀಡಾಪಟುಗಳ ಪೈಕಿ, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್. ಸಿನಿಮಾ ನಟರಾದ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್,ರಜನಿಕಾಂತ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ಚಿರಂಜೀವಿ, ಸಂಜಯ್ ಲೀಲಾ ಬನ್ಸಾಲಿ, ಧನುಷ್, ಮೋಹನ್ ಲಾಲ್, ರಣಬೀರ್ ಕಪೂರ್, ಆಲಿಯಾ ಭಟ್,ರಿಷಬ್ ಶೆಟ್ಟಿ,- ಕಂಗನಾ ರನೌತ್,ಮಾಧೂರ್ ಭಂಡಾರ್ಕರ್, ಟೈಗರ್ ಶ್ರಾಫ್, ಅಜಯ್ ದೇವ್‌ಗನ್,ಪ್ರಭಾಸ್,ಯಶ್, ಸನ್ನಿ ಡಿಯೋಲ್, ಆಯುಷ್ಮಾನ್ ಖುರಾನಾ, ಅರುಣ್ ಗೋವಿಲ್,ದೀಪಿಕಾ ಚಿಖಲಿಯಾ ಟೋಪಿವಾಲಾ, ಮಹಾವೀರ್ ಜೈನ್,ಜಾಕಿ ಶ್ರಾಫ್ . ಉದ್ಯಮಿಗಳಲ್ಲಿ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಅವರಿಗೆ ಆಹ್ವಾನ ನೀಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Tue, 9 January 24