ರಾಮಲಲ್ಲಾ ವಿಗ್ರಹ ನಗರ ಪ್ರದಕ್ಷಿಣೆ ರದ್ದುಪಡಿಸಿದ ಅಯೋಧ್ಯೆ ರಾಮ ಮಂದಿರ ಟ್ರಸ್ಟ್
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ರಾಮಲಲ್ಲಾ(Ram Lalla)ನ ಪ್ರಾಣಪ್ರತಿಷ್ಠೆಗೂ ಮುನ್ನ ಜನವರಿ 17ರಂದು ಆಯೋಜಿಸಲಾಗಿದ್ದ, ರಾಮಲಲ್ಲಾ ವಿಗ್ರಹ ನಗರ ಪ್ರದಕ್ಷಿಣೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರದ್ದುಗೊಳಿಸಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಮಹಾಮಸ್ತಕಾಭಿಷೇಖ ಕಾರ್ಯಕ್ರಮ ನೆರವೇರಲಿದೆ, ಆ ಸಂದರ್ಭದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವೂ ಕೂಡ ನಡೆಯಲಿದೆ.

ಬದಲಾಗಿ ಅದೇ ದಿನ (ಜನವರಿ 17) ರಾಮಜನ್ಮಭೂಮಿಯ ಆವರಣದಲ್ಲಿ ನೂತನ ಮೂರ್ತಿಯ ದರ್ಶನವನ್ನು ಟ್ರಸ್ಟ್ ಏರ್ಪಡಿಸಲಿದೆ ಎಂದು ಟ್ರಸ್ಟ್‌ನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನದಟ್ಟಣೆಯ ಬಗ್ಗೆ ಭದ್ರತಾ ಏಜೆನ್ಸಿಗಳು ಕೆಲವು ಸಲಹೆ ನೀಡಿದ್ದು, ಈ ಕಾರಣದಿಂದಾಗಿ ರಾಮಲಲ್ಲಾ ವಿಗ್ರಹ ಪ್ರದಕ್ಷಿಣೆಯನ್ನು ರದ್ದುಗೊಳಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ಕಾಶಿಯ ಆಚಾರ್ಯರು ಮತ್ತು ಹಿರಿಯ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸಭೆಯಲ್ಲಿ ಜನಸಂದಣಿ ನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು, ಮೆರವಣಿಗೆ ನಡೆದರೆ ರಾಮಲಲ್ಲಾನ ಹೊಸ ವಿಗ್ರಹದ ದರ್ಶನ ಪಡೆಯಲು ಬಯಸುವ ಭಕ್ತರು ಮತ್ತು ಯಾತ್ರಾರ್ಥಿಗಳ ನಿಯಂತ್ರಿಸುವಲ್ಲಿ ತೊಡಕುಗಳು ಉಂಟಾಗಲಿದೆ ಎಂದು ಅಯೋಧ್ಯೆ ಜಿಲ್ಲಾಡಳಿತ ತಿಳಿಸಿದೆ.
ಮತ್ತಷ್ಟು ಓದಿ: ರಾತ್ರಿ ಸಮಯದಲ್ಲಿ ಅಯೋಧ್ಯೆ ರಾಮಮಂದಿರ ಹೇಗೆ ಕಾಣುತ್ತೆ ನೋಡಿ? ಇಲ್ಲಿದೆ ಫೋಟೋ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರಕಾರ, ರಾಮ್ ಲಲ್ಲಾನ ವಿಗ್ರಹವು ಐದು ವರ್ಷದ ಮಗುವಿನ ರೂಪದಲ್ಲಿರುತ್ತದೆ, ಇದನ್ನು ಕಪ್ಪು ಕಲ್ಲಿನಿಂದ ಮಾಡಲಾಗಿದೆ, ವಿಗ್ರಹವು 51 ಇಂಚು ಎತ್ತರವಿರುತ್ತದೆ. ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 6,000 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ವಾರಾಣಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾ ಅವರ ಪ್ರತಿಷ್ಠಾಪನೆಯ ಮುಖ್ಯ ವಿಧಿವಿಧಾನಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವ ನಡೆಯಲಿದೆ.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ