ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯ ನೀರಿನಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಎಷ್ಟಿರುತ್ತೆ ಗೊತ್ತಾ?
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ ಹಾಗಾದರೆ ಆರೋಗ್ಯಕ್ಕಾಗುವ ಅಪಾಯವನ್ನು ಕೂಡ ನೀವು ತಿಳಿಯಲೇಬೇಕು. ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ ಕಂಡುಬಂದ ಪ್ಲಾಸ್ಟಿಕ್ ಕಣಗಳ ಬಗ್ಗೆ ಅಧ್ಯಯನವೊಂದು ಕೆಲವು ಗಂಭೀರ ಸಂಗತಿಗಳನ್ನು ಬಯಲಿಗೆಳೆದಿವೆ.
ಪ್ಲಾಸ್ಟಿಕ್ ಬಾಟಲಿ(Plastic Bottle)ಯಲ್ಲಿ ನೀರು ಕುಡಿಯುತ್ತೀರಾ ಹಾಗಾದರೆ ಆರೋಗ್ಯಕ್ಕಾಗುವ ಅಪಾಯವನ್ನು ಕೂಡ ನೀವು ತಿಳಿಯಲೇಬೇಕು. ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ ಕಂಡುಬಂದ ಪ್ಲಾಸ್ಟಿಕ್ ಕಣಗಳ ಬಗ್ಗೆ ಅಧ್ಯಯನವೊಂದು ಕೆಲವು ಗಂಭೀರ ಸಂಗತಿಗಳನ್ನು ಬಯಲಿಗೆಳೆದಿವೆ.
ಒಂದು ಲೀಟರ್ನ ಸಾಮಾನ್ಯ ಪ್ಲಾಸ್ಟಿಕ್ ಬಾಟಲಿಯು ಸರಾಸರಿ 2,40,000 ಪ್ಲಾಸ್ಟಿಕ್ ಕಣಗಳನ್ನು ಹೊಂದಿರುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.
ಅಧ್ಯಯನವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಸೋಮವಾರ ಪ್ರಕಟಿಸಲಾಗಿದೆ. ಆ ಪ್ಲಾಸ್ಟಿಕ್ ಬಾಟಲಿಯೊಳಗೆ 1 ಮೈಕ್ರೋಮೀಟರ್ ಉದ್ದ ಮತ್ತು ಮಾನವ ಕೂದಲಿನ 70ಕ್ಕಿಂತ ಕಡಿಮೆ ಅಗಲವಿರುವ ನ್ಯಾನೊಪ್ಲಾಸ್ಟಿಕ್ ಕಣಗಳನ್ನು ಪರೀಕ್ಷೆ ನಡೆಸಿದ್ದಾರೆ.
ಹಿಂದಿನ ಅಧ್ಯಯನಗಳಲ್ಲಿ ಅಂದಾಜು ಮಾಡಿದ್ದಕ್ಕಿಂತ ನೂರಾರು ಪಟ್ಟು ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಅಧ್ಯಯನ ಮಾಡಲಾಗಿದೆ. 1ರಿಂದ 5 ಸಾವಿರ ಮೈಕ್ರೋಮೀಟರ್ಗಳ ನಡುವಿನ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಮಾತ್ರ ಅಧ್ಯಯನ ಮಾಡಲಾಗಿದೆ. ಆದರೆ ಈಗ ಮೊದಲ ಬಾರಿಗೆ ವಿವಿರವಾದ ಅಧ್ಯಯನ ನಡೆಸಲಾಗಿದೆ.
ಮತ್ತಷ್ಟು ಓದಿ:ನೀರು ಹೆಚ್ಚು ಕುಡಿಯುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು
ಸೂಕ್ಷ್ಮ ಪ್ಲಾಸ್ಟಿಕ್ ಕಣಗಳಿಗಿಂತ ನ್ಯಾನೊ ಪ್ಲಾಸ್ಟಿಕ್ ಕಣಗಳು ಮಾನವನ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ಅಧ್ಯಯನ ಹೇಳಿದೆ. ಏಕೆಂದರೆ ನ್ಯಾನೊ ಪ್ಲಾಸ್ಟಿಕ್ ಕಣಗಳು ದೇಹದಲ್ಲಿರುವ ಮಾನವ ಜೀವಕೋಶಗಳಿಗೆ ನುಗ್ಗಿ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತವೆ.
ಗರ್ಭದಲ್ಲಿರುವ ಶಿಶುವಿನ ದೇಹಕ್ಕೂ ಅಪಾಯ
ಈ ನ್ಯಾನೊಪ್ಲಾಸ್ಟಿಕ್ ಕಣಗಳು ಗರ್ಭದಲ್ಲಿರುವ ಶಿಶುಗಳ ದೇಹಕ್ಕೂ ನುಗ್ಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ ನ್ಯಾನೊ ಪ್ಲಾಸ್ಟಿಕ್ ಕಣಗಳಿರುವ ಶಂಕೆ ಬಹಳ ಹಿಂದಿನಿಂದಲೂ ಇದ್ದರೂ ಅವುಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಇಲ್ಲ.
ಈ ಹಿನ್ನಲೆಯಲ್ಲಿ ನ್ಯಾನೊ ಪ್ಲಾಸ್ಟಿಕ್ ಕಣಗಳ ಇರುವಿಕೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳು ಈ ಅಧ್ಯಯನದಲ್ಲಿ ಹೊಸ ತಂತ್ರವನ್ನು ಬಳಸಿದ್ದಾರೆ. ಅಮೆರಿಕದ 3 ಪ್ರಸಿದ್ಧ ಕಂಪನಿಗಳ 25 1 ಲೀಟರ್ ನೀರಿನ ಬಾಟಲಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಪ್ರತಿ ಬಾಟಲಿಯಲ್ಲಿ 1.1 ಲಕ್ಷದಿಂದ 3.7 ಲಕ್ಷ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು. 90 ರಷ್ಟು ನ್ಯಾನೊಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಹೊಸ ಅಧ್ಯಯನವು ನ್ಯಾನೊಪ್ಲಾಸ್ಟಿಕ್‌ಗಳನ್ನು ವಿಶ್ಲೇಷಿಸುವಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ, ಇದು ನ್ಯಾನೊಪ್ಲಾಸ್ಟಿಕ್ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪದವಿ ವಿದ್ಯಾರ್ಥಿ ಮತ್ತು ಅಧ್ಯಯನದ ಪ್ರಮುಖ ಲೇಖಕ ನಿಕ್ಸಿನ್ ಕಿಯಾನ್ ಹೇಳಿದ್ದಾರೆ.
ದರೆ ಮತ್ತೊಬ್ಬ ವಿಜ್ಞಾನಿ ಬೀಜಾನ್ ಯಾನ್ ಅವರು ಈ ಹಿಂದೆ ಅಂತಹ ಯಾವುದೇ ಅಧ್ಯಯನ ಮಾಡಿಲ್ಲ ಎಂದು ಹೇಳಿದ್ದಾರೆ.. ನ್ಯಾನೋ ಪ್ಲಾಸ್ಟಿಕ್ ಕಣಗಳು ಇರುತ್ತವೆ ಎಂದು ಮಾತ್ರ ಊಹಿಸಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನವು ನಮಗೆ ಮೊದಲು ತಿಳಿದಿರದ ವಿಷಯಗಳನ್ನು ಬಹಿರಂಗಪಡಿಸಿವೆ.
ಇವುಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ತಯಾರಿಸಲು ಬಳಸುವ ಪಾಲಿಥಿಲೀನ್ ಟೆರೆಫ್ತಾಲೇಟ್, ನೀರನ್ನು ಶುದ್ಧೀಕರಿಸಲು ಫಿಲ್ಟರ್‌ಗಳಲ್ಲಿ ಹೆಚ್ಚಾಗಿ ಬಳಸುವ ಪಾಲಿಮೈಡ್ ಮತ್ತು ಅನೇಕ ಪತ್ತೆಯಾಗದ ನ್ಯಾನೊಪರ್ಟಿಕಲ್‌ಗಳು ಸಹ ನೀರಿನಲ್ಲಿ ಕಂಡುಬಂದಿವೆ. ವಿಶ್ವಾದ್ಯಂತ ಪ್ರತಿ ವರ್ಷ 450 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಆದಾಗ್ಯೂ, ಹೆಚ್ಚಿನ ಪ್ಲಾಸ್ಟಿಕ್ ನೈಸರ್ಗಿಕವಾಗಿ ಹಾಳಾಗುವುದಿಲ್ಲ.
ವರ್ಷಗಳು ಕಳೆದಂತೆ, ಅದು ಸಣ್ಣ ತುಂಡುಗಳಾಗಿ ಒಡೆಯುತ್ತದೆ. ಈ ಭೂಮಿಯಲ್ಲಿ ಹಲವಾರು ಪ್ಲಾಸ್ಟಿಕ್ ವಸ್ತುಗಳಿಂದ ಪ್ಲಾಸ್ಟಿಕ್ ಮಾಲಿನ್ಯವಾಗುತ್ತಿದ್ದರೂ ವಿಜ್ಞಾನಿಗಳು ನೀರಿನ ಬಾಟಲಿಯಲ್ಲಿನ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರುವ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ.
2022 ರಲ್ಲಿ ಪ್ರಕಟವಾದ ಅಧ್ಯಯನವು ಬಾಟಲ್ ನೀರಿನಲ್ಲಿ ಸಾಮಾನ್ಯ ಟ್ಯಾಪ್ ನೀರಿಗಿಂತ ಹೆಚ್ಚು ಮೈಕ್ರೋಪ್ಲಾಸ್ಟಿಕ್ಗಳನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಮತ್ತು 2021 ರಲ್ಲಿ ಹೊರಬಂದ ಅಧ್ಯಯನವು ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ತೆಗೆದುಹಾಕುವುದರಿಂದ ಪ್ಲಾಸ್ಟಿಕ್ ಕಣಗಳು ನೀರಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ