ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?

ವೈದ್ಯರು ಮಗುವನ್ನು ಸ್ಕ್ಯಾನ್ ಮಾಡಿದ್ದು, ಹೊಟ್ಟೆಯಲ್ಲಿ ಲಾಕೆಟ್ ಪತ್ತೆಯಾಗಿದೆ. ಆದರೆ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಹೇಗೆ ಎಂಬುದು ಹರಸಾಹಸವಾಗಿತ್ತು. ಹೇಳೀಕೇಳೀ ಅದು ಎಳೆಯ ಮಗು. ಅದು ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತದಾ ಎಂದೂ ವೈದ್ಯರು ಅನುಮಾನ/ ಆತಂಕ ವ್ಯಕ್ತಪಡಿಸಿದ್ದಾರೆ.

ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?
ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?
Follow us
ಸಾಧು ಶ್ರೀನಾಥ್​
|

Updated on: Jan 09, 2024 | 2:00 PM

ಸಾಮಾನ್ಯವಾಗಿ ಹೆಚ್ಚಿನ ಮಕ್ಕಳು ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಂಡು ನುಂಗುತ್ತಾರೆ. ನುಂಗಿದ್ದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಆರು ತಿಂಗಳ ಬಾಲಕಿಯೊಬ್ಬಳು ಲಾಕೆಟ್ ನುಂಗಿದ್ದಾಳೆ.. ಆದರೆ ಶಸ್ತ್ರಚಿಕಿತ್ಸೆ ಮಾಡದೆ ಮಗುವನ್ನು ಸುರಕ್ಷಿತವಾಗಿಸಿ, ಲಾಕೆಟ್ ಹೊರತೆಗೆದಿದ್ದಾರೆ. ವಿವರಗಳಿಗೆ ಹೋದರೆ..

ನಲ್ಗೊಂಡ ಜಿಲ್ಲೆ ನಕ್ರೇಕಲ್ ಮಂಡಲದ ತಾಟಿಕಲ್ ಗ್ರಾಮದ ಮೊಗಿಲಿ ಈಯಮ್ಮ ಮತ್ತು ಭಾಸ್ಕರ್ ದಂಪತಿಗೆ ಚಾರ್ವಿಕಾ ಎಂಬ ಆರು ತಿಂಗಳ ಹೆಣ್ಣು ಮಗುವಿದೆ. ಮಗುವನ್ನು ಕೆಳಗೆ ಮಲಗಿಸಿದ್ದಾಗ, ಅವಳು ಕೈಗೆ ಸಿಕ್ಕ ಲಾಕೆಟ್‌ನೊಂದಿಗೆ ಆಟವಾಡಿದ್ದಾಳೆ. ಆದರೆ ಸ್ವಲ್ಪ ಸಮಯದಲ್ಲಿ ತಾಯಿ ಅಡುಗೆ ಮನೆಗೆ ಹೋದಾಗ ಚಾರ್ವಿಕಾ ಅಳುವುದನ್ನು ಕೇಳಿಸಿದೆ. ಮಗು ಯಾಕೆ ಅಳುತ್ತಿದ್ದಾಳೆ ಎಂದು ತಾಯಿ ಪರಿಶೀಲಿಸಿದಾಗ ಮಗುವಿನ ಕೈಯಲ್ಲಿ ಇರಬೇಕಾದ ಲಾಕೆಟ್ ಕಂಡುಬಂದಿಲ್ಲ. ಅದರಿಂದ ಮಗು ಲಾಕೆಟ್ ನುಂಗಿರಬಹುದೆಂದು ಶಂಕಿಸಿ ತಕ್ಷಣವೇ ನಲ್ಗೊಂಡ ಆರ್.ಕೆ. ಆಸ್ಪತ್ರೆಗೆ ಕರೆತಂದಿದ್ದಾರೆ.

ಗ್ಯಾಸ್ಟ್ರೋಲಾಜಿಸ್ಟ್ ಡಾ. ಕೀರ್ತಿ ರೆಡ್ಡಿ ಮಗುವನ್ನು ಸ್ಕ್ಯಾನ್ ಮಾಡಿದ್ದು, ಆಕೆಯ ಹೊಟ್ಟೆಯಲ್ಲಿ ಲಾಕೆಟ್ ಪತ್ತೆಯಾಗಿದೆ. ಆದರೆ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಹೇಗೆ ಎಂಬುದು ಹರಸಾಹಸವಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ಲಾಕೆಟ್ ತೆಗೆಯಲು ಯೋಚಿಸಲಾಗಿತ್ತು. ಹೇಳೀಕೇಳೀ ಅದು ಎಳೆಯ ಮಗು. ಅದು ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತಾದಾ ಎಂದು ವೈದ್ಯರು ಅನುಮಾನ/ ಆತಂಕ ವ್ಯಕ್ತಪಡಿಸಿದ್ದಾರೆ.

Also Read: ಮನೆಯಲ್ಲಿ ಹೇಳದೆ ಕೇಳದೆ ತಮಿಳುನಾಡಿನ 3 ಶಾಲಾ ಬಾಲಕಿಯರು ಕೊರಿಯಾಗೆ ಹೊರಟು ನಿಂತರು! ಯಾಕೆ? ಆ ಮೇಲೆ ಏನಾಯಿತು?

ಡಾ. ಕೀರ್ತಿ ರೆಡ್ಡಿ ಅವರು ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ಎಂಡೋಸ್ಕೋಪ್ ಮೂಲಕ ಮಗುವಿನ ಹೊಟ್ಟೆಯಿಂದ ಲಾಕೆಟ್ ಅನ್ನು ಜಾಣ್ಮೆಯಿಂದ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಇಲ್ಲದೆ ಎಂಡೋಸ್ಕೋಪಿ ಮೂಲಕ ಆರು ತಿಂಗಳ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಅಪರೂಪ ಎನ್ನುತ್ತಾರೆ ಡಾ. ಕೀರ್ತಿ ರೆಡ್ಡಿ. ಮಗು ಈಗ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಹೊಟ್ಟೆಯಲ್ಲಿದ್ದ ಲಾಕೆಟ್ ತೆಗೆದು ತಮ್ಮ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ ವೈದ್ಯರಿಗೆ ಮಗುವಿನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ… ಮನೆಯಲ್ಲಿ ಮಗು ಇರುವಾಗ ಸದಾ ಮೈಯೆಲ್ಲಾ ಕಣ್ಣಾಗಿಸಿಕೊಂಡು ಜೋಪಾನ ಮಾಡುವ ಗುರುತರ ಜವಾಬ್ದಾರಿ ಪಾಲಕರದ್ದಾಗಿರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್