AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಹೇಳದೆ ಕೇಳದೆ ತಮಿಳುನಾಡಿನ 3 ಶಾಲಾ ಬಾಲಕಿಯರು ಕೊರಿಯಾಗೆ ಹೊರಟು ನಿಂತರು! ಯಾಕೆ? ಆ ಮೇಲೆ ಏನಾಯಿತು?

Tamilnadu School Girls: ಮನೆಯಲ್ಲಿ ಗೊತ್ತಿಲ್ಲದೆ ಎಲ್ಲರೂ ಸೇರಿ 14 ಸಾವಿರ ನಗದು ಸಂಗ್ರಹಿಸಿದ್ದಾರೆ. ಅವರು ಆಂಧ್ರಪ್ರದೇಶದ ಚೆನ್ನೈ ಅಥವಾ ವಿಶಾಖಪಟ್ಟಣಂ ಬಂದರಿನಿಂದ ದಕ್ಷಿಣ ಕೊರಿಯಾಕ್ಕೆ ಹೋಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಕೊರಿಯಾ ಬಿಟಿಎಸ್‌ ಬಗ್ಗೆ ಮತ್ತು ಅಲ್ಲಿಗೆ ತಲುಪುವ ಬಗ್ಗೆ ಎಲ್ಲವನ್ನೂ ಅಂತರ್ಜಾಲದ ಮೂಲಕ ವಿವರ ತಿಳಿದುಕೊಂಡು ಪ್ರಯಾಣ ಆರಂಭಿಸಿದ್ದಾರೆ.

ಮನೆಯಲ್ಲಿ ಹೇಳದೆ ಕೇಳದೆ ತಮಿಳುನಾಡಿನ 3 ಶಾಲಾ ಬಾಲಕಿಯರು ಕೊರಿಯಾಗೆ ಹೊರಟು ನಿಂತರು! ಯಾಕೆ? ಆ ಮೇಲೆ ಏನಾಯಿತು?
ತಮಿಳುನಾಡಿನ 3 ಶಾಲಾ ಬಾಲಕಿಯರು ಕೊರಿಯಾಗೆ ಹೊರಟು ನಿಂತರು! ಯಾಕೆ?
ಸಾಧು ಶ್ರೀನಾಥ್​
|

Updated on: Jan 09, 2024 | 1:35 PM

Share

ದಕ್ಷಿಣ ಕೊರಿಯಾದಲ್ಲಿ ಪಾಪ್ ಬ್ಯಾಂಡ್ ತಾರೆಯರ ಬಗ್ಗೆ ಭಾರೀ ಕ್ರೇಜ್ ಇದೆ. ಬಿಟಿಎಸ್ ಎಂದು ಕರೆಯಲ್ಪಡುವ ಪಾಪ್ ಬ್ಯಾಂಡ್ ತಂಡವು ಪ್ರಪಂಚದಾದ್ಯಂತ ಉತ್ತಮ ಕ್ರೇಜ್ ಹೊಂದಿದೆ. 8ನೇ ತರಗತಿಯ ಮೂವರು ಹುಡುಗಿಯರು ಅವರನ್ನು ಭೇಟಿಯಾಗಲು ದಕ್ಷಿಣ ಕೊರಿಯಾಕ್ಕೆ ಹೋಗಲು ನಿರ್ಧರಿಸಿದರು. ಆದರೆ ಆ ಬಗ್ಗೆ ಅವರು ಹೇಳದೆಕೇಳದೆ ಮನೆ ಬಿಟ್ಟು ಹೋದರು. ತಮಿಳುನಾಡಿನ ಈರೋಡ್ ಜಿಲ್ಲೆಯ ವೆಟ್ರಿಪಾಡಿಯ ಮೂವರು ಅಪ್ರಾಪ್ತ ಬಾಲಕಿಯರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಇತ್ತೀಚಿಗೆ ಮೊಬೈಲ್ ಗೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳು ಶಾರ್ಟ್ಸ್​​​, ರೀಲ್ಸ್​​, ಮ್ಯೂಸಿಕ್ ಆಲ್ಬಂಗಳ ಚಟಕ್ಕೆ ಮಾರು ಹೋಗುತ್ತಿದ್ದಾರೆ. ಈ ಮೂವರು ಹುಡುಗಿಯರು ದಕ್ಷಿಣ ಕೊರಿಯಾದ ಪಾಪ್ ಬ್ಯಾಂಡ್ ತಂಡವಾದ ಬಿಟಿಎಸ್‌ ತಂಡದ ವೀಡಿಯೊಗಳನ್ನು ಸಹ ಆಗಾಗ್ಗೆ ವೀಕ್ಷಿಸುತ್ತಿದ್ದರು. ಈ ಮೂವರು ಹುಡುಗಿಯರು ಬಿಟಿಎಸ್‌ ಡೈಹಾರ್ಡ್ ಅಭಿಮಾನಿಗಳಾಗಿದ್ದಾರೆ. ಅವರನ್ನು ಭೇಟಿ ಮಾಡಲು ಮನೆಯಿಂದ ಓಡಿಹೋಗುವಷ್ಟು ಅವರು ಹುಚ್ಚು ಅಭಿಮಾನಿಗಳಾಗಿದ್ದಾರೆ.

ಮನೆಯಲ್ಲಿ ಗೊತ್ತಿಲ್ಲದೆ ಎಲ್ಲರೂ ಸೇರಿ 14 ಸಾವಿರ ನಗದು ಸಂಗ್ರಹಿಸಿದ್ದಾರೆ. ಅವರು ಆಂಧ್ರಪ್ರದೇಶದ ಚೆನ್ನೈ ಅಥವಾ ವಿಶಾಖಪಟ್ಟಣಂ ಬಂದರಿನಿಂದ ದಕ್ಷಿಣ ಕೊರಿಯಾಕ್ಕೆ ಹೋಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಕೊರಿಯಾ ಬಿಟಿಎಸ್‌ ಬಗ್ಗೆ ಮತ್ತು ಅಲ್ಲಿಗೆ ತಲುಪುವ ಬಗ್ಗೆ ಎಲ್ಲವನ್ನೂ ಅಂತರ್ಜಾಲದ ಮೂಲಕ ವಿವರ ತಿಳಿದುಕೊಂಡು ಪ್ರಯಾಣ ಆರಂಭಿಸಿದ್ದಾರೆ. ಮೊದಲಿಗೆ ಈ ತಿಂಗಳ 4ರಂದು ಈರೋಡ್ ನಿಂದ ರೈಲಿನಲ್ಲಿ ಹೊರಟು ಚೆನ್ನೈ ತಲುಪಿದ್ದರು. ರಾತ್ರಿ ಆಗಿದ್ದರಿಂದ ತುಂಬಾ ಕಷ್ಟಪಟ್ಟು ಹೋಟೆಲ್ ನಲ್ಲಿ ರೂಮ್ ಪಡೆದು ಉಳಿದುಕೊಂಡರು. ಆದರೆ ಈ ಕಡೆ ಮಕ್ಕಳು ಮನೆ ಬಿಟ್ಟು ಹೋಗಿರುವ ವಿಷಯ ತಿಳಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರು ಎರಡು ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ.

Also Read: ರಾಮ ಜನ್ಮ ಭೂಮಿ ವಿವಾದ: ನ್ಯಾಯಾಲಯ ಹೋರಾಟದಲ್ಲಿ ಜಯ ಗಳಿಸಿಕೊಟ್ಟ ಇಂದಿರಾಗಾಂಧಿ ಪರಮಾಪ್ತ, ಪದ್ಮವಿಭೂಷಣ, ದಿಟ್ಟ ನ್ಯಾಯವಾದಿ ಇವರೇ!

ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಬಸ್ ನಿಲ್ದಾಣ ಹಾಗೂ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ, ಹುಡುಗಿಯರು ಹೇಗೆ ಹೋಗಬೇಕೆಂದು ಯೋಜಿಸಿದ್ದಾರೆಯೇ ಹೊರತು ಎಷ್ಟು ಹಣ ಬೇಕಾಗಬಹುದು ಎಂಬುದರ ಬಗ್ಗೆ ಯೋಚಿಸಿಲ್ಲ. ಅವರ ಬಳಿ ಇದ್ದ 14,000 ರೂ.ಗಳಲ್ಲಿ 3,000 ರೂ.ಗಳನ್ನು ಒಂದೇ ದಿನದಲ್ಲಿ ಖರ್ಚು ಮಾಡಲಾಗಿದೆ. ಉಳಿದ ಹಣದಲ್ಲಿ ಕೊರಿಯಾಗೆ ಹೋಗಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಆಗ ಜ್ಞಾನೋದಯವಾದವರಂತೆ ಅವರೆಲ್ಲಾ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲು ನಿರ್ಧರಿಸಿದರು. ರೈಲಿನಲ್ಲಿ ಈರೋಡಿಗೆ ವಾಪಸು ಹೊರಟರು. ಊಟ ಮಾಡಲು ವೆಲ್ಲೂರು ನಿಲ್ದಾಣದಲ್ಲಿ ಇಳಿದಾಗ ರೈಲು ತಪ್ಪಿಸಿಕೊಂಡಿದ್ದಾರೆ. ಆದರೆ ಅಲ್ಲಿ ರೈಲ್ವೆ ಅಧಿಕಾರಿಗಳಿಗೆ ಅದಾಗಲೇ ಮಾಹಿತಿ ಇದ್ದ ಕಾರಣ ರೈಲ್ವೆ ಪೊಲೀಸರು ಅವರನ್ನು ಗುರುತಿಸಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಇತ್ತ ಪೋಷಕರೆಲ್ಲರೂ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ