ಅಕ್ರಮ ಹಣ ವರ್ಗಾವಣೆ: ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ರವೀಂದ್ರ ಮನೆ ಮೇಲೆ ಇಡಿ ದಾಳಿ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ರವೀಂದ್ರ ವೈಕರ್ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಇಡಿಯ ಹತ್ತರಿಂದ ಹನ್ನೆರಡು ಅಧಿಕಾರಿಗಳು ರವೀಂದ್ರ ವೈಕರ್ ಅವರ ನಿವಾಸವನ್ನು ತಲುಪಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ರವೀಂದ್ರ ವೈಕರ್(Ravindra Waiker) ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಇಡಿಯ ಹತ್ತರಿಂದ ಹನ್ನೆರಡು ಅಧಿಕಾರಿಗಳು ರವೀಂದ್ರ ವೈಕರ್ ಅವರ ನಿವಾಸವನ್ನು ತಲುಪಿದ್ದರು.
ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಜೋಗೇಶ್ವರಿ ಪ್ಲಾಟ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ರವೀಂದ್ರ ವೈಕರ್ ಅವರು ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಆಪ್ತರು ಎಂದು ತಿಳಿದುಬಂದಿದೆ.
ಈ ಹಿಂದೆ ನವೆಂಬರ್ ತಿಂಗಳಿನಲ್ಲಿ ರವೀಂದ್ರ ವೈಕರ್ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮಗ್ಗೆ ರವೀಂದ್ರ ಅವರಿಗೆ ನೋಟಿಸ್ ನೀಡಲಾಗಿದೆ. ಮುಂಬೈನಲ್ಲಿ ಶಾಸಕ ರವೀಂದ್ರ ವೈಕರ್ ವಿರುದ್ಧ ಇಡಿ ಕ್ರಮದಿಂದ ಠಾಕ್ರೆ ಗುಂಪಿಗೆ ದೊಡ್ಡ ಆಘಾತವಾಗಿದೆ.
ಮಾತೋಶ್ರೀ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಸುಪ್ರೀಮೋ ಬ್ಯಾಂಕ್ವೆಟ್ ಹೆಸರಿನಲ್ಲಿ ನೂರಾರು ಕೋಟಿ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಸಂಬಂಧ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ದೂರು ನೀಡಿದ್ದರು.
ಮುಂಬೈ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಟದ ಮೈದಾನ ಮತ್ತು ಉದ್ಯಾನವನ್ನು ನಿರ್ಮಿಸಿದ ಆರೋಪ ಅವರ ಮೇಲಿದೆ. ಮುಂಬೈ ಮಹಾನಗರ ಪಾಲಿಕೆಯ ಜಾಗದಲ್ಲಿ ರವೀಂದ್ರ ವಾಯ್ಕರ್ ನಿರ್ಮಿಸಿರುವ ಹೋಟೆಲ್‌ನ ಬೆಲೆ 500 ಕೋಟಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಮತ್ತಷ್ಟು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಚಿವ ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ
ಜೋಗೇಶ್ವರಿಯಲ್ಲಿರುವ ಈ ಪಂಚತಾರಾ ಹೋಟೆಲ್‌ಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯನ್ನು ಇಡಿ ಪುನರಾರಂಭಿಸಿದೆ. ಈ ಹಿಂದೆ ರವೀಂದ್ರ ವೈಕರ್ ಅವರನ್ನೂ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಮತ್ತೆ ತನಿಖೆ ಆರಂಭಿಸಲಾಗಿದೆ. ಈ ವೇಳೆ ವೈಕರ್ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ