ಬಂಗಾಳ: ವಂದನಾಳ ಮದುವೆಯ ಖರ್ಚು ಭರಿಸಿದ ಮುಸ್ಲಿಂ ಕುಟುಂಬ, ನವದಂಪತಿಗೆ ರಾಮಲಲ್ಲಾ ಫೋಟೊ ಉಡುಗೊರೆ

|

Updated on: Jan 23, 2024 | 2:32 PM

ಶೇಖ್ ಅಶ್ರಫ್ ಮಾತನಾಡಿ, ''ನಮ್ಮ ಭಾರತದಲ್ಲಿ ಸಾಮರಸ್ಯ, ಮಾನವೀಯತೆಯೇ ದೊಡ್ಡದು. ಇದೇ ಶ್ರೇಷ್ಠ ಧರ್ಮ. ಮನುಷ್ಯತ್ವ ಇಲ್ಲದವನಿಗೆ ಅವನ ಧರ್ಮಕ್ಕೆ ಬೆಲೆಯಿಲ್ಲ. ಸೌಹಾರ್ದತೆಯ ಬಂಗಾಳದಲ್ಲಿ ನಾವು ಒಟ್ಟಿಗೆ ಬಾಳುತ್ತೇವೆ. ಇದು ನನ್ನ ನೆರೆಹೊರೆ. ಇಲ್ಲಿನ ಜನರೊಂದಿಗೆ ನನಗೆ ಗೌರವ ಮತ್ತು ಪ್ರೀತಿಯ ಸಂಬಂಧವಿದೆ ಎಂದು ಹೇಳಿದ್ದಾರೆ.

ಬಂಗಾಳ: ವಂದನಾಳ ಮದುವೆಯ ಖರ್ಚು ಭರಿಸಿದ ಮುಸ್ಲಿಂ ಕುಟುಂಬ, ನವದಂಪತಿಗೆ ರಾಮಲಲ್ಲಾ ಫೋಟೊ ಉಡುಗೊರೆ
ನವದಂಪತಿಗೆ ರಾಮಲಲ್ಲಾ ಫೋಟೊ ಗಿಫ್ಟ್
Follow us on

ಹೂಗ್ಲಿ ಜನವರಿ 23: ನಮ್ಮದು ಒಂದೇ ದೇಶ, ಏಕತೆಯೇ ದೇಶದ ಪ್ರಮುಖ ಶಕ್ತಿ. ಧರ್ಮವು ಹುಟ್ಟಿನಿಂದ ಭಿನ್ನವಾಗಿರಬಹುದು, ಆದರೆ ಕ್ರಿಯೆಯಿಂದ ಮಾನವೀಯತೆ ಪ್ರತಿಯೊಬ್ಬ ಮನುಷ್ಯನ ಧರ್ಮವಾಗಿದೆ. ಪಶ್ಚಿಮ ಬಂಗಾಳದ (West Bengal) ಡಾನಕುನಿ(Dankuni) ಎಂಬಲ್ಲಿ ಬಬ್ಲು ಸರ್ಕಾರ್ ಎಂಬವರ ಮಗಳು ವಂದನಾಳ ಮದುವೆ ನಡೆಯಬೇಕಾಗಿತ್ತು. ಆರ್ಥಿಕ ಸಂಕಷ್ಟದಿಂದ ಮಗಳ ಮದುವೆ ಮುಂದೂಡಬೇಕಾಯಿತು. ಅಂದಹಾಗೆ ಮದುವೆ ನೆರವೇರಲು ಸಹಾಯ ಮಾಡಿದ್ದು ಶೇಖ್ ಅಶ್ರಫ್, ಶೇಖ್ ಮಾಮುದ್ರಾ ದಂಪತಿ. ವಂದನಾಳ ಮದುವೆಯ ಎಲ್ಲ ಖರ್ಚು ಅವರೇ ಭರಿಸಿದರು. ಅಷ್ಟೇ ಅಲ್ಲ ನಿನ್ನೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆದಿದ್ದರಿಂದ ನವದಂಪತಿಗಳಿಗೆ ರಾಮಲಲ್ಲಾ ಫೋಟೊವನ್ನೇ ಉಡುಗೊರೆಯಾಗಿ ನೀಡಲಾಗಿದೆ.

ಡಾನಕುನಿ ಪುರಸಭೆಯ ವಾರ್ಡ್ ನಂ.2ರ ಸಂತ್ರಪಾರದವ ವಂದನಾ ಸರ್ಕಾರ್. ವಂದನಾಳ ತಂದೆಗೆ ಕೆಲಸವಿಲ್ಲ. ಮನೆಯಲ್ಲಿ ಇಬ್ಬರು ಹುಡುಗಿಯರು. ಮಗಳ ಮದುವೆಯ ಬಗ್ಗೆ ಅವರು ತುಂಬಾ ಚಿಂತಿತರಾಗಿದ್ದರು. ಆದರೆ, ಎಲ್ಲ ವೆಚ್ಚ ಭರಿಸುವುದಾಗಿ ಸ್ಥಳೀಯ ಪಾಲಿಕೆ ಸದಸ್ಯ ಶೇಖ್ ಅಶ್ರಫ್ ಭರವಸೆ ನೀಡಿದರು. ಅಂತೆಯೇ ಸೋಮವಾರ ಮದುವೆ ನೆರವೇರಿದೆ.

ಶೇಖ್ ಅಶ್ರಫ್ ಮಾತನಾಡಿ, ”ನಮ್ಮ ಭಾರತದಲ್ಲಿ ಸಾಮರಸ್ಯ, ಮಾನವೀಯತೆಯೇ ದೊಡ್ಡದು. ಇದೇ ಶ್ರೇಷ್ಠ ಧರ್ಮ. ಮನುಷ್ಯತ್ವ ಇಲ್ಲದವನಿಗೆ ಅವನ ಧರ್ಮಕ್ಕೆ ಬೆಲೆಯಿಲ್ಲ. ಸೌಹಾರ್ದತೆಯ ಬಂಗಾಳದಲ್ಲಿ ನಾವು ಒಟ್ಟಿಗೆ ಬಾಳುತ್ತೇವೆ. ಇದು ನನ್ನ ನೆರೆಹೊರೆ. ಇಲ್ಲಿನ ಜನರೊಂದಿಗೆ ನನಗೆ ಗೌರವ ಮತ್ತು ಪ್ರೀತಿಯ ಸಂಬಂಧವಿದೆ. ನಾನು ಅದನ್ನು ಮಾಡಬೇಕು ಎಂದಿದ್ದಾರೆ.

ಶೇಖ್ ಮಾಮೂದ್ರಾ ಕೂಡಾ ಹೇಳಿದ್ದು ಅದನ್ನೇ. ಭ್ರಾತೃತ್ವವು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿರಬೇಕು. ನಾವು ನಮ್ಮ ಮನಸ್ಸಿನ ಮಾತು ಕೇಳುತ್ತೇವೆ. ಅದು ಶಾಂತಿಯ ಮಾರ್ಗದಲ್ಲಿ ಇರುತ್ತದೆ. ಇಲ್ಲಿ ಮುಖ್ಯ ವಿಷಯವೆಂದರೆ ಇತರರ ಸಹಾಯಕ್ಕೆ ನಿಲ್ಲುವುದು ಎಂದಿದ್ದಾರೆ.
ಬಬ್ಲು ಸರ್ಕಾರ್ ಕೂಡ ತಮ್ಮ ಮಗಳ ಮದುವೆ ನೆರವೇರಿದ್ದನ್ನು ನೋಡಿ ಸಂತೋಷಪಟ್ಟಿದ್ದಾರೆ.ಅವರು ಅಶ್ರಫ್ ಗೆ ಮತ್ತೆ ಮತ್ತೆ ಧನ್ಯವಾದ ಹೇಳಿದರು ಎಂದು ಟಿವಿ9 ಬಾಂಗ್ಲಾ ವರದಿ ಮಾಡಿದೆ.

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ‘ಸಾಮರಸ್ಯ ರ‍್ಯಾಲಿ’

ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಲ್ಲಿ ಕಾಳಿ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಗುರುದ್ವಾರವನ್ನು ಸ್ಪರ್ಶಿಸಿ ‘ಸಾಮರಸ್ಯ’ ರ‍್ಯಾಲಿ ನಡೆಸಿದರು. ಮಧ್ಯ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಚುನಾವಣೆಗೆ ಮುನ್ನ ‘ಕೆಲವರು ಧರ್ಮದೊಂದಿಗೆ ರಾಜಕೀಯ ಮಾಡುತ್ತಾರೆ’ ಎಂದು ಹೇಳಿದರು.

ಬಿಜೆಪಿ ಹಿಂದೂ ಮತಗಳನ್ನು ವಿಭಜಿಸುತ್ತಿದೆ: ಮಮತಾ

ಬಿಜೆಪಿ ಹಿಂದೂ ಮತಗಳನ್ನು ವಿಭಜಿಸುತ್ತದೆ ಮತ್ತು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಕೆಲವು ಮುಸ್ಲಿಂ ನಾಯಕರನ್ನು ಸೃಷ್ಟಿಸಲಾಗಿದೆ. ಬಿಜೆಪಿ ನನ್ನನ್ನು ಮುಮ್ತಾಜ್ ಬೇಗಂ ಎಂದು ಕರೆಯುತ್ತದೆ. ಎನ್‌ಆರ್‌ಸಿ ಹೆಸರಿನಲ್ಲಿ ಜನರು ಸತ್ತರು. ನಾನು ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿ ಎನ್‌ಆರ್‌ಸಿಯನ್ನು ನಿಲ್ಲಿಸಿದೆ. ಬೇರೆ ಯಾವುದೇ ಪಕ್ಷಗಳು ಧೈರ್ಯ ಮಾಡಲಿಲ್ಲ.  ಈ ದಿನ ರ‍್ಯಾಲಿಯನ್ನು ನಡೆಸಲು ನನಗೆ ಧೈರ್ಯವಿತ್ತು” ಎಂದು ಮಮತಾ ಹೇಳಿದರು.

ಇದನ್ನೂ ಓದಿ: ಎಡಪಕ್ಷಗಳು ಇಂಡಿಯಾ ಬ್ಲಾಕ್‌ನ ಕಾರ್ಯಸೂಚಿಯನ್ನು ನಿಯಂತ್ರಿಸುತ್ತಿವೆ: ಮಮತಾ ಬ್ಯಾನರ್ಜಿ

ಬಾಬರಿ ಮಸೀದಿ ಧ್ವಂಸದ ಇತಿಹಾಸವನ್ನು ಪ್ರಸ್ತಾಪಿಸಿದ ಟಿಎಂಸಿ ನಾಯಕಿ, “ನಾನು ಜ್ಯೋತಿ ಬಸು (ಮಾಜಿ ಮುಖ್ಯಮಂತ್ರಿ) ಅವರಿಗೆ ಏನಾದರೂ ಸಹಾಯ ಬೇಕೇ ಎಂದು ನೋಡಲು ಹೋಗಿದ್ದೆ, ನಾನು ಹಿಂದೂ ಮತ್ತು ಅಲ್ಪಸಂಖ್ಯಾತ ಪ್ರದೇಶಗಳಿಗೆ ಹೋಗಿ ಎರಡೂ ಸಮುದಾಯಗಳಿಗೆ ಸೇವೆ ಸಲ್ಲಿಸಿದೆ. ಬಾಬರಿ ಧ್ವಂಸದ ದಿನದಂದು ಹಿಂಸಾಚಾರ ನಡೆದಾಗ ಬೀದಿಗಳಲ್ಲಿ ನಾನು ಒಬ್ಬಳೇ ಇದ್ದೆ, ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ನಿಜವಾದ ಇತಿಹಾಸ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ