AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Old Ram Idol: 1949ರಲ್ಲಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಿದ್ದ ಹಳೇ ರಾಮನ ವಿಗ್ರಹ ಈಗ ಎಲ್ಲಿದೆ?

ಬಾಬರಿ ಮಸೀದಿಯಲ್ಲಿ ಕಾಣಿಸಿಕೊಂಡಿದ್ದ ರಾಮನ ಹಳೆಯ ವಿಗ್ರಹವನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಅದನ್ನು ಸಿಂಹಾಸನದ ಮೇಲೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ಮತ್ತು ಅರ್ಚಕರು ಹೇಳಿದರು. ಹಳೇ ವಿಗ್ರಹವನ್ನು ಹೊಸ ರಾಮಲಲ್ಲಾ ವಿಗ್ರಹದ ಎದುರು ಸಿಂಹಾಸನದ ಮೇಲೆ ಇರಿಸಲಾಗುವುದು ಎಂದಿದ್ದಾರೆ ಅವರು.

Old Ram Idol: 1949ರಲ್ಲಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಿದ್ದ ಹಳೇ ರಾಮನ ವಿಗ್ರಹ ಈಗ ಎಲ್ಲಿದೆ?
ರಾಮಲಲ್ಲಾ
ರಶ್ಮಿ ಕಲ್ಲಕಟ್ಟ
|

Updated on: Jan 23, 2024 | 3:14 PM

Share

ಅಯೋಧ್ಯೆ ಜನವರಿ 23: ಜನವರಿ 22,ಸೋಮವಾರ  ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ(Ram mandir) ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಮ್ಮ ರಾಮಲಲ್ಲಾ ಇನ್ನು ಮುಂದೆ ಟೆಂಟ್​​ನಲ್ಲಿ ಅಲ್ಲ ಭವ್ಯ ರಾಮಮಂದಿರದಲ್ಲಿರುತ್ತಾನೆ ಎಂದು ಹೇಳಿದ್ದಾರೆ. ನೂತನ ರಾಮಮಂದಿರದಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಿದ್ದಾಯ್ತು, ಆದರೆ ಹಳೇ ವಿಗ್ರಹ? ಡಿಸೆಂಬರ್ 22, 1949 ರ ರಾತ್ರಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಾಗಿನಿಂದ ಈ ವಿಗ್ರಹ ತಾತ್ಕಾಲಿಕ ಡೇರೆಯಂತಹ ರಚನೆಯಲ್ಲಿದೆ.

ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವು ನಿಗೂಢವಾಗಿ ಕಾಣಿಸಿಕೊಂಡಿದೆ ಎಂದು ಹಲವಾರು ಜನರು ಹೇಳಿಕೊಳ್ಳುತ್ತಾರೆ. ಇದು ಸೈಟ್ ಸುತ್ತಲೂ ಧಾರ್ಮಿಕ ಭಾವನೆಗಳನ್ನು ತೀವ್ರಗೊಳಿಸಿ, ದಶಕಗಳ ಕಾಲ ಕಾನೂನು ಹೋರಾಟಕ್ಕೆ ಕಾರಣವಾಯಿತು. ನಿನ್ನೆ ಅಯೋಧ್ಯೆಯಲ್ಲಿ ನಡೆದ ಮಹಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಹೊಸ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಯಿತು. ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹವು ಚಿನ್ನದ ಕಿರೀಟ, ಹಳದಿ ಧೋತಿಯನ್ನು ಧರಿಸಿದ್ದು, ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿದೆ.

ಏತನ್ಮಧ್ಯೆ, ಹಳೆಯ ವಿಗ್ರಹವನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಅದನ್ನು ಸಿಂಹಾಸನದ ಮೇಲೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ಮತ್ತು ಅರ್ಚಕರು ಹೇಳಿದರು. ಹಳೇ ವಿಗ್ರಹವನ್ನು ಹೊಸ ರಾಮಲಲ್ಲಾ ವಿಗ್ರಹದ ಎದುರು ಸಿಂಹಾಸನದ ಮೇಲೆ ಇರಿಸಲಾಗುವುದು ಎಂದಿದ್ದಾರೆ ಅವರು.

ತಾತ್ಕಾಲಿಕ ದೇವಾಲಯದಲ್ಲಿರುವ ವಿಗ್ರಹವು ಗರ್ಭಗೃಹಕ್ಕೆ (ಗರ್ಭಗೃಹ) ಸ್ಥಳಾಂತರಗೊಳ್ಳಲಿದೆ ಎಂದು ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಎನ್​ಡಿಟಿವಿಗೆ ತಿಳಿಸಿದ್ದಾರೆ.  ನಿಮಗೆ ರಾಮ್ ಲಲ್ಲಾನ ನಿಂತಿರುವ ವಿಗ್ರಹವಿದೆ. 1949 ರಲ್ಲಿ ಕಾಣಿಸಿಕೊಂಡ ‘ಮೂರ್ತಿ’  ಇರುತ್ತದೆ. ಎರಡೂ ವಿಗ್ರಹಗಳು ಸಿಂಹಾಸನದಲ್ಲಿರುತ್ತವೆ ಎಂದಿದ್ದಾರೆ ಅವರು.

ಕೆಲವು ಧಾರ್ಮಿಕ ಕ್ರಿಯೆಗಳ ನಂತರ ಅರ್ಚಕರಿಂದ ತಾತ್ಕಾಲಿಕ ಗುಡಾರದಿಂದ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.

ದೇವಾಲಯದ ಉದ್ಘಾಟನೆಯಲ್ಲಿ ಚಲನಚಿತ್ರ ತಾರೆಯರು, ಕ್ರೀಡಾ ಪಟುಗಳು, ಸಂಗೀತಗಾರರು, ಕೈಗಾರಿಕೋದ್ಯಮಿಗಳು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳು ಭಾಗಿಯಾಗಿದ್ದರು, ‘ಪ್ರಾಣ ಪ್ರತಿಷ್ಠಾ’ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮನ ಗೃಹಪ್ರವೇಶವನ್ನು ಸೂಚಿಸುವ ಹಬ್ಬವಾದ ದೀಪಾವಳಿಯನ್ನು ದೀಪ ಬೆಳಗಿಸಿ ಈ ಸಂಭ್ರಮವನ್ನು ಆಚರಿಸಲು ಭಾರತೀಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಕರ್ನಾಟಕದ ರಾಮಮಂದಿರಗಳಲ್ಲಿರೋದು ರಾಮ, ಲಕ್ಷ್ಮಣ ಸೀತೆಯರಲ್ಲವೇ? ಸಿದ್ದರಾಮಯ್ಯ

ಈ ಘಟನೆಯು ಭಾರತದಾದ್ಯಂತ ಧಾರ್ಮಿಕ ಉತ್ಸಾಹವನ್ನು ಹುಟ್ಟುಹಾಕಿತು, ಅನೇಕ ರಾಜ್ಯಗಳು ರಜಾದಿನವನ್ನು ಘೋಷಿಸಿದವು, ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟವು.ಮನೆಗಳಲ್ಲಿ ದೀಪ ಬೆಳಗಿಸಿ ಜನರು ಸಂಭ್ರಮಿಸಿದರು. 70 ಎಕರೆ ಸಂಕೀರ್ಣದಲ್ಲಿ 2.67 ಎಕರೆ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಅದರ ಮೊದಲ ಹಂತ ಮಾತ್ರ ಸಿದ್ಧವಾಗಿದೆ. ಎರಡನೇ ಮತ್ತು ಅಂತಿಮ ಹಂತವು ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಯೋಜನೆಗೆ ₹ 1,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಸಂಪೂರ್ಣವಾಗಿ ದೇಶದೊಳಗಿನ ದೇಣಿಗೆಯಿಂದ ಹಣವನ್ನು ನೀಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ