ಪಶ್ಚಿಮ ಬಂಗಾಳ ಸಚಿವ ಸಾಧನ್​ ಪಾಂಡೆ ನಿಧನ; ಸಂತಾಪ ಸೂಚಿಸಿ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸಚಿವ ಸಾಧನ್​ ಪಾಂಡೆ ನಿಧನ; ಸಂತಾಪ ಸೂಚಿಸಿ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ
ಸಾಧನ್​ ಪಾಂಡೆ

ಸಾಧನ್​ ಪಾಂಡೆಯವರು ಪಶ್ಚಿಮ ಬಂಗಾಳದಲ್ಲಿ ಗ್ರಾಹಕ ವ್ಯವಹಾರಗಳು ಮತ್ತು ಸ್ವ-ಸಹಾಯ ಗುಂಪು ಮತ್ತು ಸ್ವ-ಉದ್ಯೋಗ ಇಲಾಖೆ ಸಚಿವರಾಗಿದ್ದರು. 1998ರವರೆಗೆ ಕಾಂಗ್ರೆಸ್​​ನಲ್ಲಿದ್ದ ಸಾಧನ್​ ಪಾಂಡೆ 1998ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಟಿಎಂಸಿ ಸೇರ್ಪಡೆಯಾಗಿದ್ದರು.

TV9kannada Web Team

| Edited By: Lakshmi Hegde

Feb 20, 2022 | 1:22 PM

ಪಶ್ಚಿಮ ಬಂಗಾಳ ಸಚಿವ, ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಸಾಧನ್​ ಪಾಂಡೆ (Sadhan Pande) ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು.  ಅವರಿಗೆ 71 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಸಾಧನೆ ಪಾಂಡೆ ನಿಧನಕ್ಕೆ (Sadhan Pande Died) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ನಮ್ಮ ಹಿರಿಯ ಸಹೋದ್ಯೋಗಿ, ಪಕ್ಷದ ನಾಯಕರು, ಸಚಿವರಾಗಿದ್ದ ಸಾಧನ್​ ಪಾಂಡೆ ಇಂದು ಮುಂಜಾನೆ ನಿಧನರಾದರು. ಅವರ ನಿಧನದಿಂದ ತುಂಬ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು, ಅನುಯಾಯಿಗಳಿಗೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.

ಸಾಧನ್​ ಪಾಂಡೆಯವರು ಪಶ್ಚಿಮ ಬಂಗಾಳದಲ್ಲಿ ಗ್ರಾಹಕ ವ್ಯವಹಾರಗಳು ಮತ್ತು ಸ್ವ-ಸಹಾಯ ಗುಂಪು ಮತ್ತು ಸ್ವ-ಉದ್ಯೋಗ ಇಲಾಖೆ ಸಚಿವರಾಗಿದ್ದರು. 1998ರವರೆಗೆ ಕಾಂಗ್ರೆಸ್​​ನಲ್ಲಿದ್ದ ಸಾಧನ್​ ಪಾಂಡೆ 1998ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಟಿಎಂಸಿ ಸೇರ್ಪಡೆಯಾಗಿದ್ದರು.  ಕಳೆದವರ್ಷ ಜುಲೈನಲ್ಲಿಯೇ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಮುಂಬೈಗೆ ಉತ್ತಮ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು.

ಇದನ್ನೂ ಓದಿ: ಪಂಜಾಬ್: ಸಂಯೋಜಿತ ಅವಳಿಗಳ ಮತದಾನದ ಗೌಪ್ಯತೆ ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ

Follow us on

Related Stories

Most Read Stories

Click on your DTH Provider to Add TV9 Kannada