ಬಂಗಾಳ ಪಂಚಾಯತ್ ಚುನಾವಣೆ: 696 ಬೂತ್​ಗಳಲ್ಲಿ ಮರು ಮತದಾನ, ಕಲ್ಲು ತೂರಾಟ, ಟಿಎಂಸಿ ಕಾರ್ಯಕರ್ತನಿಗೆ ಥಳಿತ

|

Updated on: Jul 10, 2023 | 11:33 AM

ಪಶ್ಚಿಮ ಬಂಗಾಳ(West Bengal) ದ ಮುರ್ಷಿದಾಬಾದ್ ಸೇರಿದಂತೆ ಹಲವು ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಪಂಚಾಯತ್​ ಚುನಾವಣೆ(Panchayat Election)ಗೆ ಮರು ಮತದಾನ ನಡೆಯುತ್ತಿದೆ.

ಬಂಗಾಳ ಪಂಚಾಯತ್ ಚುನಾವಣೆ: 696 ಬೂತ್​ಗಳಲ್ಲಿ ಮರು ಮತದಾನ, ಕಲ್ಲು ತೂರಾಟ, ಟಿಎಂಸಿ ಕಾರ್ಯಕರ್ತನಿಗೆ ಥಳಿತ
ಪಂಚಾಯತ್ ಚುನಾವಣೆ ಭದ್ರತೆ
Image Credit source: Indian Express
Follow us on

ಪಶ್ಚಿಮ ಬಂಗಾಳ(West Bengal) ದ ಮುರ್ಷಿದಾಬಾದ್ ಸೇರಿದಂತೆ ಹಲವು ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಪಂಚಾಯತ್​ ಚುನಾವಣೆ(Panchayat Election)ಗೆ ಮರು ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗಲಭೆಗಳು ಹೆಚ್ಚಿವೆ, ಕಲ್ಲು ತೂರಾಟ ನಡೆದಿದೆ, ಟಿಎಂಸಿ ಕಾರ್ಯಕರ್ತನನ್ನು ಥಳಿಸಲಾಗಿದೆ. ಜುಲೈ 8 ರಂದು ಪಂಚಾಯತ್ ಚುನಾವಣೆ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಹಿಂಸಾಚಾರ ಹೆಚ್ಚಾದ ಕಾರಣ 696 ಮತಗಟ್ಟೆಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.

ಮತದಾನದ ದಿನದಂದು ಹಲವು ಬೂತ್​ಗಳಲ್ಲಿ ಮತಪೆಟ್ಟಿಗೆಗಳಿಗೆ ಹಾನಿ ಮಾಡಲಾಗಿತ್ತು, ಅಧಿಕಾರಿಗಳ ಮೇಲೆ ಹಲ್ಲೆ ನಡೆದಿತ್ತು, ನಕಲಿ ಮತದಾನದ ದೂರುಗಳು ಚುನಾವಣಾ ಆಯೋಗಕ್ಕೆ ಬಂದ ಕಾರಣ ಮತದಾನವನ್ನು ರದ್ದುಗೊಳಿಸಲಾಗಿತ್ತು.

ಮತ್ತಷ್ಟು ಓದಿ: West Bengal: ಚುನಾವಣಾ ಸಂಬಂಧಿತ ಹಿಂಸಾಚಾರ, ಇಬ್ಬರು ಟಿಎಂಸಿ ಕಾರ್ಯಕರ್ತರ ಸಾವು, ಒಟ್ಟು ಮೃತರ ಸಂಖ್ಯೆ 20ಕ್ಕೆ ಏರಿಕೆ

ಬಳಿಕ ರಾಜ್ಯ ಚುನಾವಣಾ ಆಯೋಗ ಸಭೆ ನಡೆಸಿ, ಮರು ಮತದಾನಕ್ಕೆ ನಿರ್ಧರಿಸಲಾಯಿತು. ಈ ಪೈಕಿ ಮುರ್ಷಿದಾಬಾದ್ ಜಿಲ್ಲೆಯ ಗರಿಷ್ಠ 175 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ. ಅದರ ನಂತರ ಮಾಲ್ಡಾದಲ್ಲಿ 112, ನಾಡಿಯಾದಲ್ಲಿ 89, ಕೂಚ್ ಬೆಹಾರ್‌ನಲ್ಲಿ 54, ಉತ್ತರ 24 ಪರಗಣಗಳಲ್ಲಿ 46, ಉತ್ತರ ದಿನಾಜ್‌ಪುರದಲ್ಲಿ 42, ದಕ್ಷಿಣ 24 ಪರಗಣಗಳಲ್ಲಿ 36, ಪೂರ್ವ ಮಿಡ್ನಾಪುರದಲ್ಲಿ 31, ಹೂಗ್ಲಿಯಲ್ಲಿ 29 ಮತ್ತು ಬಿರ್ಭುಮ್ ಜಿಲ್ಲೆಯಲ್ಲಿ 14 ಬೂತ್‌ಗಳಿವೆ.

ಭಾನುವಾರ ತಡರಾತ್ರಿ ಮುರ್ಷಿದಾಬಾದ್‌ನ ಖಾರ್‌ಗ್ರಾಮ್‌ನಲ್ಲಿ ಹಿಂಸಾಚಾರದ ಸುದ್ದಿ ಬೆಳಕಿಗೆ ಬಂದಿದೆ. ಪೊಲೀಸ್ ವಾಹನವನ್ನೂ ಧ್ವಂಸಗೊಳಿಸಲಾಗಿದೆ. ಖಾರ್ಗ್ರಾಮ್ ಪ್ರದೇಶದಲ್ಲಿ ಕಲ್ಲು ತೂರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಪೂರ್ವ ಕಮಾಂಡ್) ಎಸ್‌ಸಿ ಬುಡಕೋಟಿ ಅವರಿಗೆ ಪತ್ರ ಬರೆದಿದ್ದು, ಮರು ಮತದಾನದ ಸಂದರ್ಭದಲ್ಲಿ ಹಿಂಸಾಚಾರದ ಘಟನೆಗಳು ಮರುಕಳಿಸುವುದನ್ನು ತಡೆಯಲು ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಕೋರಿದ್ದಾರೆ.

ಪಂಚಾಯತ್‌ಗಳಿಗೆ ಮತದಾನದ ವೇಳೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಚೌಧರಿ ಹೇಳಿದರು. ಮತಗಟ್ಟೆ ಕೇಂದ್ರಗಳಲ್ಲಿ ಹಾಗೂ ಸುತ್ತಮುತ್ತ ಕೇಂದ್ರ ಭದ್ರತಾ ಪಡೆಗಳ ಉಪಸ್ಥಿತಿಯಿಂದ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವಂತಾಗಿದೆ ಎಂದರು.

ಸುಮಾರು 10,000 ಬೂತ್‌ಗಳಲ್ಲಿ ಮರು ಮತದಾನ ಮಾಡುವಂತೆ ಬಿಜೆಪಿ ಒತ್ತಾಯಿಸಿತ್ತು, ಈಗ 696 ಬೂತ್​ಗಳಲ್ಲಿ ಮರು ಮತದಾನ ನಡೆಯುತ್ತಿದೆ.

ಶನಿವಾರ ನಡೆದ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರದಲ್ಲಿ ಹಾಜಿ ಲಿಯಾಕತ್ ಅಲಿ (62) ಮೃತಪಟ್ಟಿದ್ದಾರೆ ಅವರ ಕುಟುಂಬಕ್ಕೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ