West Bengal: ಹಿಂಸಾಚಾರ ಹಿನ್ನೆಲೆ ಪಶ್ಚಿಮ ಬಂಗಾಳದ 604 ಪಂಚಾಯತ್ ಬೂತ್‌ಗಳಲ್ಲಿ ಮರು ಮತದಾನ

ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆ 604 ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ಅಸಿಂಧು ಎಂದು ಘೋಷಿಸಿದ ರಾಜ್ಯ ಚುನಾವಣಾ ಆಯೋಗವು, ನಾಳೆ (ಜುಲೈ 10) ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮರು ಮತದಾನ ನಡೆಯಲಿದೆ ಎಂದು ಘೋಷಿಸಿದೆ.

West Bengal: ಹಿಂಸಾಚಾರ ಹಿನ್ನೆಲೆ ಪಶ್ಚಿಮ ಬಂಗಾಳದ 604 ಪಂಚಾಯತ್ ಬೂತ್‌ಗಳಲ್ಲಿ ಮರು ಮತದಾನ
ಪಶ್ಚಿಮ ಬಂಗಾಳದ ವಿವಿಧ ಪಂಚಾಯತ್ ಬೂತ್​ಗಳಿಗೆ ನಾಳೆ ಮರು ಮತದಾನImage Credit source: PTI
Follow us
Rakesh Nayak Manchi
|

Updated on: Jul 09, 2023 | 10:04 PM

ಪಶ್ಚಿಮ ಬಂಗಾಳದ ಪಂಚಾಯತ್​ ಚುನಾವಣೆ (West Bengal Panchayat Elections) ವೇಳೆ ಭಾರೀ ಹಿಂಸಾಚಾರ (Violence) ನಡೆದ ಹಿನ್ನೆಲೆ 604 ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ಅಸಿಂಧುಗೊಳಿಸಿ ಇಂದು (ಜುಲೈ 9) ರಾಜ್ಯ ಚುನಾವಣಾ ಆಯೋಗವು ಆದೇಶಿಸಿದೆ. ಅಲ್ಲದೆ, ನಾಳೆ (ಜುಲೈ 10) ಈ ಬೂತ್​ಗಳಿಗೆ ಮರುಮತದಾನ ನಡೆಯಲಿದೆ ಎಂದು ಘೋಷಿಸಿದ್ದು, ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಮುರ್ಷಿದಾಬಾದ್‌ನಲ್ಲಿ 175 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಮಾಲ್ಡಾದಲ್ಲಿ 112, ನಾಡಿಯಾದಲ್ಲಿ 89, ಉತ್ತರ 24 ಪರಗಣಗಳಲ್ಲಿ 46, ದಕ್ಷಿಣ 24 ಪರಗಣಗಳಲ್ಲಿ 36, ಪುರ್ಬಾ ಮೇದಿನಿಪುರದಲ್ಲಿ 31, ಹೂಗ್ಲಿಯಲ್ಲಿ 29, ದಕ್ಷಿಣ ದಿನಾಜ್‌ಪುರದಲ್ಲಿ 18, ಜಲ್ಪೈಗುರಿಯಲ್ಲಿ 14, ಬಿರ್ಭೂಮ್ನಲ್ಲಿ 14, ಪಶ್ಚಿಮ ಮೇದಿನಿಪುರದಲ್ಲಿ 10, ಬಂಕುರಾದಲ್ಲಿ 8, ಹೌರಾದಲ್ಲಿ 8, ಪಶ್ಚಿಮ ಬರ್ಧಮಾನ್​ನಲ್ಲಿ 6, ಪುರುಲಿಯಾದಲ್ಲಿ 4, ಅಲಿಪುರ್‌ದುವಾರ್‌ನಲ್ಲಿ 1 ಹಾಗೂ ಪುರ್ಬಾ ಬರ್ಧಮಾನ್‌ನಲ್ಲಿ 3 ಬೂತ್​ಗಳಿಗೆ ಮರು ಮತದಾನ ನಡೆಯಲಿದೆ​.

ಇದನ್ನೂ ಓದಿ: West Bengal: ಚುನಾವಣಾ ಸಂಬಂಧಿತ ಹಿಂಸಾಚಾರ, ಇಬ್ಬರು ಟಿಎಂಸಿ ಕಾರ್ಯಕರ್ತರ ಸಾವು, ಒಟ್ಟು ಮೃತರ ಸಂಖ್ಯೆ 20ಕ್ಕೆ ಏರಿಕೆ

ದಕ್ಷಿಣ 24 ಪ್ಯಾರಗನ್‌ಗಳಲ್ಲಿ, ಡೈಮಂಡ್ ಹಾರ್ಬರ್‌ನಲ್ಲಿ 10 ಸೇರಿದಂತೆ 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಗೋಸಾಬ ಮತ್ತು ಜೋಯನಗರದಲ್ಲಿ ತಲಾ 5, ಬಸಂತಿಯಲ್ಲಿ 4, ಕುಲ್ತಾಲಿ, ಜೋಯ್‌ನಗರ II ರಲ್ಲಿ ತಲಾ 3, ಮಂದಿರ ಬಜಾರಿನಲ್ಲಿ 2, ಬಿಷ್ಣುಪುರ್, ಬರುಯಿಪುರ್, ಮಥುರಾಪುರ ಮತ್ತು ಮಗ್ರಾಹತ್‌ನಲ್ಲಿ ತಲಾ ಒಂದೊಂದು ಬೂತ್​ಗಳಲ್ಲಿ ಮರು ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ಶನಿವಾರ ಪಂಚಾಯತ್ ಚುನಾವಣೆಗೆ ಮತದಾನ ನಡೆದಿತ್ತು. ಈ ವೇಳೆ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಹಿಂಸಾಚಾರಗಳು ನಡೆದಿದ್ದವು. ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿದ ಹಲವಾರು ಘಟನೆಗಳು ಕೂಡ ನಡೆದಿರುವುದಾಗಿ ವರದಿಯಾಗಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗವು ಹಿಂಸಾಚಾರದಲ್ಲಿ ಆದ ಸಾವುಗಳು ಮತ್ತು ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಕೇಳಿದೆ.

ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರೆ, ತಾತ್ಕಾಲಿಕವಾಗಿ ಶೇಕಡಾ 66.28 ರಷ್ಟು ಮತದಾನ ದಾಖಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ