ನವದೆಹಲಿ: ಈಗಾಗಲೇ ಭಾರತದಲ್ಲಿ ಕೊವಿಡ್ 3ನೇ ಅಲೆಯ (Covid 3rd Wave) ಭೀತಿ ಶುರುವಾಗಿದೆ. ವಿಶ್ವಾದ್ಯಂತ ಕೊರೊನಾ (Coronavirus Pandemic) ಅಟ್ಟಹಾಸ ಮುಂದುವರೆದಿದೆ. ಕೊವಿಡ್ ರೂಪಾಂತರಿ ವೈರಸ್ಗಳು ಕೂಡ ಎಲ್ಲೆಡೆ ಹರಡುತ್ತಿವೆ. ಇದೆಲ್ಲದರ ನಡುವೆ ರಷ್ಯಾದಲ್ಲಿ ವೆಸ್ಟ್ ನೈಲ್ ವೈರಸ್ (WNV) ಕಾಣಿಸಿಕೊಂಡಿದ್ದು, ಈ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ತಂಪಾದ ವಾತಾವರಣದಲ್ಲಿ ಹರಡುವ ಈ ವೆಸ್ಟ್ ನೈಲ್ ವೈರಸ್ (West Nile ಮುಖ್ಯವಾಗಿ ಸೋಂಕಿತ ಸೊಳ್ಳೆಗಳಿಂದ ಎಲ್ಲೆಡೆ ಹರಡುತ್ತದೆ. ಇದು ಕೂಡ ಕೊರೊನಾ ರೀತಿಯ ಸಾಂಕ್ರಾಮಿಕ ರೋಗವಾಗಿದೆ.
ಈ ವರ್ಷ ರಷ್ಯಾದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವೆಸ್ಟ್ ನೈಲ್ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ರಷ್ಯಾದಲ್ಲಿ ದಾಖಲಾಗಿರುವ ಡಬ್ಲುಎನ್ವಿ ಕೇಸುಗಳ ಪೈಕಿ ಶೇ. 80ರಷ್ಟು ಪ್ರಕರಣಗಳು ರಷ್ಯಾದ ಸೌತ್ವೆಸ್ಟ್ ಭಾಗದಲ್ಲಿಯೇ ದಾಖಲಾಗಿವೆ. ಸೋಂಕಿತ ಸೊಳ್ಳೆಗಳಿಂದ ಹರಡುವ ಡಬ್ಲುಎನ್ವಿ ರೋಗ ಸಾಂಕ್ರಾಮಿಕ ರೋಗವಾಗಿದೆ. ಇದು ಸೋಂಕಿತ ಸೊಳ್ಳೆಗಳಿಂದ ಹಕ್ಕಿಗಳಿಗೆ ಹರಡಿ, ಹಕ್ಕಿಗಳಿಂದ ಮನುಷ್ಯರಿಗೆ ಹರಡುತ್ತದೆ. ಝಿಕಾ, ಡೆಂಗ್ಯು, ಹಳದಿ ಜ್ವರದ ವೈರಸ್ಗಳಿಗೂ ಈ ವೆಸ್ಟ್ ನೈಲ್ ವೈರಸ್ ರೋಗಕ್ಕೂ ಸಾಮ್ಯತೆಯಿದೆ.
ಕ್ಯುಲೆಕ್ಸ್ ಎಂಬ ವಿಧದ ಜಾತಿಯ ಸೊಳ್ಳೆಗಳ ಮೂಲಕ ಈ ಹೊಸ ರೋಗ ಹರಡುತ್ತದೆ. ವೆಸ್ಟ್ ನೈಲ್ ವೈರಸ್ ರೋಗ ತಗುಲುವ ಮನುಷ್ಯರಿಗೆ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೊರೊನಾದಂತೆ ವೆಸ್ಟ್ ನೈಲ್ ವೈರಸ್ ರೋಗದಲ್ಲಿ ಕೂಡ ಕೆಲವೊಮ್ಮೆ ರೋಗ ಲಕ್ಷಣಗಳು ಕಾಣಿಸಿದರೆ ಇನ್ನು ಕೆಲವೊಮ್ಮೆ ರೋಗ ಲಕ್ಷಣಗಳು ಗೋಚರವಾಗುವುದಿಲ್ಲ. ಸಾಮಾನ್ಯವಾಗಿ ಈ ಸೋಂಕು ಕಾಣಿಸಿಕೊಳ್ಳುವ ಜನರಲ್ಲಿ ಜ್ವರ, ಮೈ ಕೈ ನೋವು, ತಲೆ ನೋವು, ಚರ್ಮದ ತುರಿಕೆಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊವಿಡ್ ನೆಗೆಟಿವ್ ನಕಲಿ ವರದಿ: ಒಟ್ಟು 7 ಜನರ ಬಂಧನ
TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?
(West Nile Virus Symptoms: Russia warns of increase in cases of West Nile Virus What is WNV)
Published On - 7:43 pm, Mon, 30 August 21