ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊವಿಡ್ ನೆಗೆಟಿವ್ ನಕಲಿ ವರದಿ: ಒಟ್ಟು 7 ಜನರ ಬಂಧನ

ಆರೋಪಿಗಳು ಬಳಸಿದ್ದ ಬೈಕ್ ಹಾಗು ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊವಿಡ್ ನೆಗೆಟಿವ್ ನಕಲಿ ವರದಿ: ಒಟ್ಟು 7 ಜನರ ಬಂಧನ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Aug 26, 2021 | 4:30 PM

ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ನಕಲಿ ಕೊವಿಡ್ ನೆಗೆಟಿವ್ ವರದಿ ತಂದ ಇನ್ನೂ ಇಬ್ಬರು ವ್ಯಕ್ತಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್ ಮತ್ತು ಕಡಪುರ ನಿವಾಸಿ ಇಸ್ಮಾಯಿಲ್‌ ಬಂಧಿತ ವ್ಯಕ್ತಿಗಳು. ಈಮೂಲಕ ಕೇರಳದಿಂದ ಕರ್ನಾಟಕಕ್ಕೆ ಆಗಮಿಸಲು ನಕಲಿ ಕೊವಿಡ್ ನೆಗೆಟಿವ್ ವರದಿ ತಂದ ಒಟ್ಟು 7 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ. ಸದ್ಯ ಕೇರಳ ಮತ್ತು ತಮಿಳುನಾಡಿನಿಂದ ಕರ್ನಾಟಕವನ್ನು ಪ್ರವೇಶಿಸುವವರಿಗೆ ಕೊವಿಡ್ ನೆಗೆಟಿವ್ ಆರ್​ಟಿಪಿಸಿಆರ್ ವರದಿ ಕಡ್ಡಾಯವಾಗಿದೆ. ನಕಲಿ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತಯಾರಿಸಿ ಕೊಡುತ್ತಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಕಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಲಪಾಡಿ ಗಡಿಯಲ್ಲಿ ವರದಿಯನ್ನು ಪರಿಶೀಲನೆ ನಡೆಸಿದಾಗ ಪತ್ತೆಯಾದ ನಕಲಿ ಆರ್ಟಿಪಿಸಿಆರ್ ಎಂಬುವುದು ತಿಳಿದುಬಂದಿದೆ. ಆರೋಪಿಗಳು ಬಳಸಿದ್ದ ಬೈಕ್ ಹಾಗು ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೈಕ್ನಲ್ಲಿ ಬಂಧಿದ್ದ ಚೆರ್ವತ್ತೂರು ನಿವಾಸಿ ಹನೀನ್, ಬಸ್​ನಲ್ಲಿ ಬಂಧಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್, ಮಂಗಳೂರಿನ ಪಡೀಲ್ ನಿವಾಸಿ ಮೊಹಮ್ಮದ್ ಶರೀಫ್, ಕೇರಳ ಮಂಜೇಶ್ವರ ನಿವಾಸಿ ಅಬುಬಕ್ಕರ್ ಈವರೆಗೆ ಕೊವಿಡ್ ನೆಗೆಟಿವ್ ನಕಲಿ ವರದಿ ತಂದ ಆರೋಪದಡಿ ಬಂಧಿತರು.

ಕೇರಳದಲ್ಲಿ ಒಂದೇ ದಿನ 30 ಸಾವಿರಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ ಕೇರಳದಲ್ಲಿ ಬುಧವಾರ 31,445 ಹೊಸ ಕೊರೊನಾವೈರಸ್ ಪ್ರಕರಣಗಳು ಮತ್ತು 215 ಸಾವುಗಳು ದಾಖಲಾಗಿದೆ. ರಾಜ್ಯದಲ್ಲೀಗ ಒಟ್ಟು ಸೋಂಕಿನ ಸಂಖ್ಯೆ 38,83,429 ಕ್ಕೆ ಮತ್ತು ಸಾವುಗಳು 19,972 ಕ್ಕೆ ತಲುಪಿದೆ. ಅದೇ ವೇಳೆ ಪರೀಕ್ಷಾ ಧನಾತ್ಮಕ ದರ (ಟಿಪಿಆರ್) ಮಂಗಳವಾರ ಶೇ 18.04 ರಿಂದ ಶೇ 19.03ಕ್ಕೆ ಏರಿತು. ಕಳೆದ 24 ಗಂಟೆಗಳ ಅವಧಿಯಲ್ಲಿ 20,271 ಮಂದಿ ಕೊವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಮೇ 20 ರಂದು 30,491 ಪ್ರಕರಣಗಳನ್ನು ದಾಖಲಿಸಿದಾಗ ಕೊನೆಯ ಬಾರಿಗೆ ರಾಜ್ಯವು 30,000 ಗಡಿ ದಾಟಿದೆ. ಕೇರಳವು ದೇಶದ ಅರ್ಧದಷ್ಟು ಕೊವಿಡ್ -19 ಪ್ರಕರಣಗಳನ್ನು ನಿರಂತರವಾಗಿ ವರದಿ ಮಾಡುತ್ತಿದ್ದು, ಬಿಜೆಪಿ ಬುಧವಾರ ಎಡಪಕ್ಷ ಸರ್ಕಾರವು ಆರೋಗ್ಯ ಬಿಕ್ಕಟ್ಟನ್ನು ತಗ್ಗಿಸಲು ಕಡಿಮೆ ಕೆಲಸ ಮಾಡುತ್ತಿದೆ ಮತ್ತು ಪ್ರೇರಿತ ಪ್ರಚಾರದ ಮೂಲಕ ಅದನ್ನು ಮುಚ್ಚಿಹಾಕುವಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ. ಬಕ್ರೀದ್ ಆಚರಣೆಗಳು ಕೊನೆಗೊಂಡ ಜುಲೈ 27 ರಿಂದ ಕೇರಳವು ಪ್ರತಿದಿನ ಸುಮಾರು 20,000 ಕೊವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದೆ.

ಏತನ್ಮಧ್ಯೆ, ಕೇರಳದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ 36,92,628 ಆಗಿದ್ದು, 1,70,292 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಗಳ ಪೈಕಿ ಎರ್ನಾಕುಲಂ 4,048 ಪ್ರಕರಣಗಳನ್ನು ದಾಖಲಿಸಿದ್ದು, ತ್ರಿಶೂರ್ (3,865), ಕೋಯಿಕ್ಕೋಡ್ (3,680), ಮಲಪ್ಪುರಂ (3,502), ಪಾಲಕ್ಕಾಡ್ (2,562), ಕೊಲ್ಲಂ (2,479), ಕೊಟ್ಟಾಯಂ (2,050), ಕಣ್ಣೂರು (1,930) ಆಲಪ್ಪುಳ ( 1,874), ತಿರುವನಂತಪುರಂ (1,700), ಇಡುಕ್ಕಿ (1,166) ಪತ್ತನಂತಿಟ್ಟ (1,008) ಮತ್ತು ವಯನಾಡ್ (962) ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: 

ಕರ್ನಾಟಕಕ್ಕೆ ಹೆಚ್ಚು ಕೊವಿಡ್ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಮನವಿ

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

(Kerala to Karnataka entrance police arrest 7 people for carrying Covid Negative fake certificate)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ