ಕೇರಳದಲ್ಲಿ ಒಂದೇ ದಿನ 30 ಸಾವಿರಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ
ಕೇರಳವು ದೇಶದ ಅರ್ಧದಷ್ಟು ಕೊವಿಡ್ -19 ಪ್ರಕರಣಗಳನ್ನು ನಿರಂತರವಾಗಿ ವರದಿ ಮಾಡುತ್ತಿದ್ದು, ಬಿಜೆಪಿ ಬುಧವಾರ ಎಡಪಕ್ಷ ಸರ್ಕಾರವು ಆರೋಗ್ಯ ಬಿಕ್ಕಟ್ಟನ್ನು ತಗ್ಗಿಸಲು ಕಡಿಮೆ ಕೆಲಸ ಮಾಡುತ್ತಿದೆ ಮತ್ತು ಪ್ರೇರಿತ ಪ್ರಚಾರದ ಮೂಲಕ ಅದನ್ನು ಮುಚ್ಚಿಹಾಕುವಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.
ತಿರುವನಂತಪುರಂ: ಕೇರಳದಲ್ಲಿ ಬುಧವಾರ 31,445 ಹೊಸ ಕೊರೊನಾವೈರಸ್ ಪ್ರಕರಣಗಳು ಮತ್ತು 215 ಸಾವುಗಳು ದಾಖಲಾಗಿದೆ. ರಾಜ್ಯದಲ್ಲೀಗ ಒಟ್ಟು ಸೋಂಕಿನ ಸಂಖ್ಯೆ 38,83,429 ಕ್ಕೆ ಮತ್ತು ಸಾವುಗಳು 19,972 ಕ್ಕೆ ತಲುಪಿದೆ. ಅದೇ ವೇಳೆ ಪರೀಕ್ಷಾ ಧನಾತ್ಮಕ ದರ (ಟಿಪಿಆರ್) ಮಂಗಳವಾರ ಶೇ 18.04 ರಿಂದ ಶೇ 19.03ಕ್ಕೆ ಏರಿತು. ಕಳೆದ 24 ಗಂಟೆಗಳ ಅವಧಿಯಲ್ಲಿ 20,271 ಮಂದಿ ಕೊವಿಡ್ನಿಂದ ಚೇತರಿಸಿಕೊಂಡಿದ್ದಾರೆ. ಮೇ 20 ರಂದು 30,491 ಪ್ರಕರಣಗಳನ್ನು ದಾಖಲಿಸಿದಾಗ ಕೊನೆಯ ಬಾರಿಗೆ ರಾಜ್ಯವು 30,000 ಗಡಿ ದಾಟಿದೆ. ಕೇರಳವು ದೇಶದ ಅರ್ಧದಷ್ಟು ಕೊವಿಡ್ -19 ಪ್ರಕರಣಗಳನ್ನು ನಿರಂತರವಾಗಿ ವರದಿ ಮಾಡುತ್ತಿದ್ದು, ಬಿಜೆಪಿ ಬುಧವಾರ ಎಡಪಕ್ಷ ಸರ್ಕಾರವು ಆರೋಗ್ಯ ಬಿಕ್ಕಟ್ಟನ್ನು ತಗ್ಗಿಸಲು ಕಡಿಮೆ ಕೆಲಸ ಮಾಡುತ್ತಿದೆ ಮತ್ತು ಪ್ರೇರಿತ ಪ್ರಚಾರದ ಮೂಲಕ ಅದನ್ನು ಮುಚ್ಚಿಹಾಕುವಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.
ಬಕ್ರೀದ್ ಆಚರಣೆಗಳು ಕೊನೆಗೊಂಡ ಜುಲೈ 27 ರಿಂದ ಕೇರಳವು ಪ್ರತಿದಿನ ಸುಮಾರು 20,000 ಕೊವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದೆ.
ಏತನ್ಮಧ್ಯೆ, ಕೇರಳದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ 36,92,628 ಆಗಿದ್ದು, 1,70,292 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಗಳ ಪೈಕಿ ಎರ್ನಾಕುಲಂ 4,048 ಪ್ರಕರಣಗಳನ್ನು ದಾಖಲಿಸಿದ್ದು, ತ್ರಿಶೂರ್ (3,865), ಕೋಯಿಕ್ಕೋಡ್ (3,680), ಮಲಪ್ಪುರಂ (3,502), ಪಾಲಕ್ಕಾಡ್ (2,562), ಕೊಲ್ಲಂ (2,479), ಕೊಟ್ಟಾಯಂ (2,050), ಕಣ್ಣೂರು (1,930) ಆಲಪ್ಪುಳ ( 1,874), ತಿರುವನಂತಪುರಂ (1,700), ಇಡುಕ್ಕಿ (1,166) ಪತ್ತನಂತಿಟ್ಟ (1,008) ಮತ್ತು ವಯನಾಡ್ (962) ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Covid 22: ಕೊವಿಡ್ 19 ಹತೋಟಿಗೆ ಬರುವ ಮುನ್ನವೇ ಶುರುವಾಯ್ತು ಕೊವಿಡ್ 22 ರ ಆತಂಕ; ದಯವಿಟ್ಟು ನಿರ್ಲಕ್ಷಿಸಬೇಡಿ ಎಂದ ತಜ್ಞರು
ಇದನ್ನೂ ಓದಿ: ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್
(Kerala registers 31,445 fresh cases of coronavirus and 215 deaths on Wednesday)