Covid 22: ಕೊವಿಡ್ 19 ಹತೋಟಿಗೆ ಬರುವ ಮುನ್ನವೇ ಶುರುವಾಯ್ತು ಕೊವಿಡ್ 22 ರ ಆತಂಕ; ದಯವಿಟ್ಟು ನಿರ್ಲಕ್ಷಿಸಬೇಡಿ ಎಂದ ತಜ್ಞರು
ಕೊವಿಡ್ 22 ಎಂಬ ಹೆಸರನ್ನು ಸ್ವಿಟ್ಜರ್ಲ್ಯಾಂಡ್ನ ಸಂಸ್ಥೆಯೊಂದರಲ್ಲಿ ಪ್ರೊಫೆಸರ್ ಆಗಿರುವ ಸಾಯಿ ರೆಡ್ಡಿ ಎನ್ನುವವರು ಮೊದಲ ಬಾರಿಗೆ ಬಳಕೆ ಮಾಡಿದ್ದಾರೆ. ಅಂದರೆ 2022ರ ವೇಳೆಗೆ ಈ ರೂಪಾಂತರಿ ಬರುವ ಸಂಭವವಿದೆ. ಇದು ತುಂಬಾ ಅಪಾಯಕಾರಿಯಾಗಿ ವರ್ತಿಸುವ ಸಾಧ್ಯತೆ ಇರುವುದರಿಂದ ಅವರು ಕೊವಿಡ್ 22 ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ವಿಶ್ವವನ್ನು ಭಾದಿಸುತ್ತಿರುವ ಕೊರೊನಾ ವೈರಾಣು ಇನ್ನೂ ಹತೋಟಿಗೆ ಬಂದಿಲ್ಲ. ಒಂದು ಹಾಗೂ ಎರಡನೇ ಅಲೆಗೆ ಸಿಲುಕಿ ತತ್ತರಿಸಿರುವ ಜಗತ್ತು ಆತಂಕದ ಕಂಗಳಿಂದಲೇ ಮೂರನೇ ಅಲೆಯ (Corona 3rd Wave) ಭೀತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಬಗೆಯ ಸೂಪರ್ ಸ್ಟ್ರೈನ್ (Super Strain) ಕೊರೊನಾ ವೈರಾಣುವಿನ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು, ಕೊವಿಡ್ 19 (Covid 19) ನಂತರ ಕೊವಿಡ್ 22 (Covid 22) ಸದ್ಯದಲ್ಲೇ ನಮ್ಮನ್ನು ಕಾಡಬಹುದು ಎಂದಿದ್ದಾರೆ. ಇಷ್ಟು ದಿನ ಅಸ್ತಿತ್ವದಲ್ಲಿದ್ದ ಎಲ್ಲಾ ತಳಿಗಳನ್ನೂ ಮೀರಿ ಅಪಾಯಕಾರಿಯಾಗಲಿರುವ ಕೊವಿಡ್ 22 ಮುಂಬರುವ ದಿನಗಳಲ್ಲಿ ಮಾರಕವಾಗಬಹುದು ಎಂದು ಇಮ್ಯೂನಾಲಾಜಿಸ್ಟ್ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ (Covid 19) ಅಪಾಯ ಇನ್ನೂ ಮುಗಿದಿಲ್ಲ. ಇದರ ಮುಂದುವರೆದ ಭಾಗವೆಂಬಂತೆ ಕೊವಿಡ್ 22 ಕಾಣಿಸಿಕೊಳ್ಳಲಿದೆ. ಅದು ಡೆಲ್ಟಾ ಮಾದರಿಗಿಂತಲೂ ಹೆಚ್ಚು ಅಪಾಯಕಾರಿ ಆಗುವ ಸಾಧ್ಯತೆ ಇದ್ದು, ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದುವರೆಗೆ ಕೊರೊನಾದ ಡೆಲ್ಟಾ ತಳಿಯನ್ನೇ ಅತಿ ಅಪಾಯಕಾರಿ ಹಾಗೂ ತೀವ್ರ ಸಾಂಕ್ರಾಮಿಕ ಎಂದು ಭಾವಿಸಲಾಗಿತ್ತು. ಆದರೆ, ಕೊವಿಡ್ 22 ಮಾದರಿ ಪ್ರಸ್ತುತ ಇರುವ ಅಷ್ಟೂ ರೂಪಾಂತರಿ ತಳಿಗಳಿಗಿಂತ ಅಧಿಕ ಅಪಾಯಕಾರಿ ಆಗುವ ಲಕ್ಷಣಗಳು ತಜ್ಞರಿಗೆ ಕಾಣಿಸಿದೆ.
2022 ರಲ್ಲಿ ಕಾಣಿಸಿಕೊಳ್ಳಲಿದೆಯೇ ಕೊವಿಡ್ ಹೊಸ ರೂಪಾಂತರಿ? ಕೊವಿಡ್ 22 ಎಂಬ ಹೆಸರನ್ನು ಸ್ವಿಟ್ಜರ್ಲ್ಯಾಂಡ್ನ ಸಂಸ್ಥೆಯೊಂದರಲ್ಲಿ ಪ್ರೊಫೆಸರ್ ಆಗಿರುವ ಸಾಯಿ ರೆಡ್ಡಿ ಎನ್ನುವವರು ಮೊದಲ ಬಾರಿಗೆ ಬಳಕೆ ಮಾಡಿದ್ದಾರೆ. ಅಂದರೆ 2022ರ ವೇಳೆಗೆ ಈ ರೂಪಾಂತರಿ ಬರುವ ಸಂಭವವಿದೆ. ಇದು ತುಂಬಾ ಅಪಾಯಕಾರಿಯಾಗಿ ವರ್ತಿಸುವ ಸಾಧ್ಯತೆ ಇರುವುದರಿಂದ ಅವರು ಕೊವಿಡ್ 22 ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಗಮನಾರ್ಹ ಅಂಶವೆಂದರೆ ಆ ಬಗ್ಗೆ ಅವರು ಕೇವಲ ಶಂಕೆ ವ್ಯಕ್ತಪಡಿಸಿದ್ಧಾರೆಯೇ ಹೊರತು ದೃಢವಾಗಿ ಹೇಳಿಲ್ಲ.
ಪ್ರಭಾವ ಕಳೆದುಕೊಳ್ಳಲಿವೆಯೇ ಲಸಿಕೆಗಳು? ವೈದ್ಯರಾಗಿರುವ ಡಾ. ರೆಡ್ಡಿ ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದು ಆ ಕುರಿತು ಕೆಲ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಇತ್ತೀಚೆಗಷ್ಟೇ ಮುನ್ನೆಲೆಗೆ ಬಂದಿರುವ ಕೊರೊನಾ ರೂಪಾಂತರಿಗಳೆಲ್ಲವೂ ಒಟ್ಟಿಗೆ ಸೇರಿ ಒಂದು ಹೊಸ ರೂಪಾಂತರಿ ಹುಟ್ಟುಹಾಕುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಪ್ರಸ್ತುತ ಇರುವ ಕೊರೊನಾ ಲಸಿಕೆಗಳು ಹೊಸ ಮಾದರಿಯ ಮೇಲೆ ಯಾವುದೇ ಪ್ರಭಾವ ಬೀರದೆ ಇರಬಹುದು. ಆದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡಲಾಗದು.
ಕೊರೊನಾ ಮೂರನೇ ಅಲೆಗೆ ಜಗತ್ತು ತಯಾರಿ ನಡೆಸುತ್ತಿರುವ ನಡುವೆಯೇ ಇನ್ನೇನು ಕೆಲವೇ ತಿಂಗಳಲ್ಲಿ ಅಂದರೆ 2022 ರಲ್ಲಿ ಹೊಸ ರೂಪಾಂತರಿ ಕಾಣಿಸಿಕೊಳ್ಳಬಹುದು. ನಾವು ಈಗಿರುವ ವೈರಾಣುಗಳಿಂದ ತಪ್ಪಿಸಿಕೊಳ್ಳುತ್ತಾ ಹೊಸ ಮಾದರಿಯನ್ನು ಎದುರಿಸಲು ಹೇಗೆ ಸಿದ್ಧವಾಗುತ್ತೇವೆ ಎನ್ನುವುದು ಬಹಳ ಮುಖ್ಯ ಎಂದು ಸಾಯಿ ರೆಡ್ಡಿ ತಿಳಿಸಿದ್ದಾರೆ.
ನಾವು ಈಗ ನೋಡುತ್ತಿರುವುದಕ್ಕಿಂತ ಕೊವಿಡ್ 22 ತೀವ್ರ ಸ್ವರೂಪದಲ್ಲಿರಬಹುದು ಮತ್ತು ಮಾರಕವಾಗಬಹುದು. ಹೀಗಾಗಿ ಅದನ್ನು ಆದಷ್ಟು ಬೇಗ ಗುರುತಿಸಬೇಕು ಮತ್ತು ಲಸಿಕೆ ತಯಾರಕರು ಅದಕ್ಕೆ ಸೂಕ್ತವಾದ ಲಸಿಕೆಯನ್ನು ತ್ವರಿತವಾಗಿ ಸಿದ್ಧಪಡಿಸಿಕೊಳ್ಳಬೇಕು. ಹೊಸ ರೂಪಾಂತರಿ ನಿಶ್ಚಿತವಾಗಿ ಒಂದು ದೊಡ್ಡ ಸಮಸ್ಯೆಯಾಗಿದ್ದು ನಾವು ಅದಕ್ಕಾಗಿ ತಯಾರಾಗುವುದು ಅನಿವಾರ್ಯ ಎಂದು ಇನ್ನಿತರ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.
ವೈರಾಣುಗಳು ವಿಕಾಸವಾಗುವುದು ಸಹಜ. ಆದ್ದರಿಂದ ಭವಿಷ್ಯದಲ್ಲಿ ಕೊರೊನಾ ರೂಪಾಂತರಿ ತಳಿಗಳು ಹೆಚ್ಚುತ್ತಲೇ ಇರುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇವೇಳೆ ಕೊರೊನಾ ಒಂದು ನಗರದಲ್ಲಿ, ಒಂದು ದೇಶದ ಒಂದು ಮೂಲೆಯಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳಿಂದ ಆರಂಭವಾಯಿತು ಎಂದು ನಾವು ಮರೆಯಬಾರದು. ನಂತರ ಅದು ಇಡೀ ಜಗತ್ತನ್ನು ಹೇಗೆ ಆವರಿಸಿಕೊಂಡು ಅಪಾಯಕಾರಿ ಆಯಿತು ಎನ್ನುವುದನ್ನು ಕಡೆಗಣಿಸಬಾರದು. ಏಕೆಂದರೆ ಲಸಿಕೆಗಳ ಪ್ರಭಾವ ಕ್ರಮೇಣ ಕ್ಷೀಣಿಸುವುದರಿಂದ ನಾವು ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡರೆ, ರೂಪಾಂತರಿಯೊಂದಿಗೆ ಹೋರಾಡುವುದು ಸುಲಭದ ಮಾತಲ್ಲ. ಜತೆಗೆ, ನಾವು ನಿರ್ಲಕ್ಷ್ಯತನ ತೋರಿದ್ದೇ ಆದಲ್ಲಿ ಇಲ್ಲಿಯವರೆಗೆ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳು ನೀರಲ್ಲಿ ಹೋಮ ಮಾಡಿದಂತೆ ಎಂದು ತಜ್ಞವೈದ್ಯ ಸ್ಮಿತ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೂ ಆತಂಕ
ಭಾರತಕ್ಕೆ ಕೊರೊನಾ ಇನ್ನು ಸ್ಥಳೀಯ ಜಾಡ್ಯ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್
(Everything you need to know about Covid 22 New variant which is deadlier than Delta)