ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕಗೊಳಿಸುವ ಪ್ರಯತ್ನವಾಗಿ ಪಶ್ಚಿಮ ವಲಯ ರೈಲ್ವೆ (Western Railway) ಹೊಸದಾಗಿ ನವೀಕರಿಸಿದ ತೇಜಸ್ ಮಾದರಿಯ ಸ್ಲೀಪರ್ ಕೋಚ್ ರೇಕ್ಸ್ನ್ನು ಪರಿಚಯಿಸಿದೆ. ಈ ತೇಜಸ್ ಮಾದರಿಯ ಸ್ಮಾರ್ಟ್ ಸ್ಲೀಪರ್ ಕೋಚ್ನ್ನು ಸದ್ಯ ಮುಂಬೈ-ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಪರಿಚಯಿಸಲಾಗಿದ್ದು, ಸೋಮವಾರ (ಜು.19) ಇದು ತನ್ನ ಮೊದಲ ಸಂಚಾರ ಮಾಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.
ಈ ಬಗ್ಗೆ ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್ ಠಾಕೂರ್ ಮಾಹಿತಿ ನೀಡಿದ್ದು, ತೇಜಸ್ ಸ್ಮಾರ್ಟ್ ಕೋಚ್ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಆಧುನಿಕ ತೇಜಸ್ ಮಾದರಿ ಸ್ಲೀಪರ್ ಕೋಚ್ಗಳು ದೂರದ ಪ್ರಯಾಣಕ್ಕೆ ತುಂಬ ಅನುಕೂಲ ಆಗಲಿವೆ. ಪ್ರಯಾಣಿಕರು ಇನ್ನಷ್ಟು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಹಾಗೇ ಈ ತೇಜಸ್ ಮಾದರಿ ಸ್ಲೀಪರ್ ಬೋಗಿಗಳನ್ನು ಆಧುನಿಕ ಕೋಚ್ ಫ್ಯಾಕ್ಟರಿ (MCF)ಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಇನ್ನು ರಾಜಧಾನಿ ಎಕ್ಸ್ಪ್ರೆಸ್ನ ಎರಡು ರೇಕ್ಸ್ಗಳಲ್ಲಿ ತೇಜಸ್ ಮಾದರಿ ಸ್ಲೀಪರ್ ಬೋಗಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಇಂಟಲಿಜೆಂಟ್ ಸೆನ್ಸಾರ್ ಆಧರಿತ, ವಿಶ್ವ ದರ್ಜೆಯ ವ್ಯವಸ್ಥೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆ, ಆರಾಮವನ್ನೂ ಗಮನದಲ್ಲಿಟ್ಟುಕೊಂಡು ತೇಜಸ್ ಮಾದರಿ ಸ್ಲೀಪರ್ ಬೋಗಿಗಳನ್ನು ಪರಿಚಯಿಸಿದ್ದಾರೆ ರೈಲ್ವೆ ಇಲಾಖೆ ತಿಳಿಸಿದೆ.
Published On - 5:03 pm, Tue, 20 July 21