3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

|

Updated on: May 09, 2020 | 10:53 AM

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿದೆ. ಈ ನಡುವೆ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ ಸಂಸ್ಥೆ ಕಳೆದ 3 ವಾರಗಳಲ್ಲಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಬಾಚಿಕೊಂಡಿದೆ. ಆದ್ರೆ ಈ ಹಣದಿಂದ ಜಿಯೋ ಏನು ಮಾಡುತ್ತೆ ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ. ಇದೀಗ ಮುಂದಿನ ಹಂತದಲ್ಲಿ ಭಾರತದಲ್ಲಿ 5ಜಿ ಅಭಿವೃದ್ಧಿಪಡಿಸಲು ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಂಸ್ಥೆ ಮುಂದಾಗಿದೆ. Broadband Connectivity, Smart Devices, Big Data Analytics, Artificial Intelligence, […]

3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?
Follow us on

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿದೆ. ಈ ನಡುವೆ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ ಸಂಸ್ಥೆ ಕಳೆದ 3 ವಾರಗಳಲ್ಲಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಬಾಚಿಕೊಂಡಿದೆ. ಆದ್ರೆ ಈ ಹಣದಿಂದ ಜಿಯೋ ಏನು ಮಾಡುತ್ತೆ ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ.

ಇದೀಗ ಮುಂದಿನ ಹಂತದಲ್ಲಿ ಭಾರತದಲ್ಲಿ 5ಜಿ ಅಭಿವೃದ್ಧಿಪಡಿಸಲು ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಂಸ್ಥೆ ಮುಂದಾಗಿದೆ. Broadband Connectivity, Smart Devices, Big Data Analytics, Artificial Intelligence, IoT, Cloud Computing, AR, Mixed Reality, Blockchain ಈ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಭಾರೀ ಮೊತ್ತದ ಹಣಕಾಸು ಅಗತ್ಯವಿರುತ್ತದೆ. ಹಾಗಾಗಿ ಜಿಯೋ ಈ ಸಾಹಸಕ್ಕೆ ಕೈಹಾಕಿದೆ.

ಜಿಯೋ ವಿಶ್ವದ ಏಕೈಕ ದೊಡ್ಡ ಜಾಲವಾಗಿದ್ದು, ಚೀನಾದ ಯಾವುದೇ ಕಂಪನಿಯ ಸಹಭಾಗಿತ್ವ ಇಲ್ಲದೆ 5 ಜಿ ಸ್ಥಾಪಿಸಲು ಸನ್ನದ್ಧವಾಗಿದೆ. ಅದೇ, ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ 5 ಜಿ ಉಪಕರಣಗಳಿಗಾಗಿ ಹುವಾವೇ ಮತ್ತು ZTE ಜೊತೆ ಒಪ್ಪಂದ ಮಾಡಿಕೊಂಡಿವೆ.

ಇನ್ಮುಂದೆ ಜಿಯೋ ಕಂಪನಿಯಿಂದ 5G ಆಟ!
ಭಾರತದಲ್ಲಿ ಟ್ರಾಯ್ ಸಂಸ್ಥೆಯು 1 MHz ಗೆ 492 ಕೋಟಿ ರೂ. ಮೂಲ ಬೆಲೆಯನ್ನು ನಿಗದಿಪಡಿಸಿದೆ. ಭಾರತದಲ್ಲಿ 5ಜಿ ನಿರ್ವಹಿಸಬೇಕಾದರೆ ಒಬ್ಬರಿಗೆ ಕನಿಷ್ಠ 100 MHz ಅವಶ್ಯಕತೆ ಇದೆ. ಹೀಗಾಗಿ ಒಬ್ಬ ಆಪರೇಟರ್​ಗೆ ಕನಿಷ್ಠ ಅಂದ್ರೂ 49,200 ಕೋಟಿ ಅಗತ್ಯವಿದೆ. ಕಳೆದ ಮೂರು ವಾರಗಳಲ್ಲಿ ಜಿಯೋ ರಿಲಯನ್ಸ್ 61 ಸಾವಿರ ಕೋಟಿ ರೂ ಬಾಚಿರುವುದನ್ನು ಗಮನಿಸಿದಾಗ ಫ್ರೀಕ್ವೆನ್ಸಿ ಖರೀದಿಗೆ ಅಗತ್ಯವಿರುವ 50 ಸಾವಿರ ಕೋಟಿ ರೂಪಾಯಿಗೂ ಮತ್ತು ಈ ಮೊತ್ತಕ್ಕೂ ತಾಳೆಯಾಗುತ್ತಿರುವುದು ಸ್ಪಷ್ಟವಾಗಿದೆ.

ಭಾರತದಲ್ಲಿ 5G ತಂತ್ರಜ್ಞಾನದಲ್ಲಿ ತನ್ನದೇ ಪ್ರಭುತ್ವ ಸ್ಥಾಪಿಸಲು ಅಗತ್ಯವಿರುವ ಮೊತ್ತ ಕ್ರೋಢೀಕರಿಸುವುದಕ್ಕಾಗಿ ಜಿಯೋ ಮಾಲೀಕ ಮುಕೇಶ್ ಅಂಬಾನಿ ತಮ್ಮ ಕಂಪನಿಯ ಕೆಲವಷ್ಟು ಪಾಲನ್ನು ಮಾರಾಟ ಮಾಡಿದ್ದಾರೆ ಅಷ್ಟೆ. ಹೀಗಾಗಿಯೇ ಭಾರತದಲ್ಲಿ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಜಿಯೋ ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Published On - 6:24 pm, Fri, 8 May 20