ಚುನಾವಣಾ ಬಾಂಡ್ ಬಳಸುವ ಮುಖ್ಯ ಉದ್ದೇಶವೇನು? ಅರುಣ್ ಜೇಟ್ಲಿ ಮಾತನ್ನು ನೆನಪಿಸಿದ ಕೇಂದ್ರ ಸಚಿವ ಗಡ್ಕರಿ
Electoral Bonds: ಚುನಾವಣಾ ಬಾಂಡ್‌ಗಳನ್ನು ಯಾಕಾಗಿ ಬಳಸುತ್ತಾರೆ. ಅದರ ಮುಖ್ಯ ಉದ್ದೇಶವೇನು? ಎಂಬ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿವರಿಸಿದ್ದಾರೆ. ಈ ಸಮಯದಲ್ಲಿ ಮಾಜಿ ಸಚಿವ ಅರುಣ್ ಜೇಟ್ಲಿ ಮಾತನ್ನು ಕೂಡ ನೆನಪಿಸಿದ್ದಾರೆ. ಹಣವಿಲ್ಲದೆ ರಾಜಕೀಯ ಪಕ್ಷವನ್ನು ನಡೆಸುವುದು ಸಾಧ್ಯವಿಲ್ಲ. ಅದಕ್ಕಾಗಿ ಕೇಂದ್ರವು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸಿದೆ, ಈಗ ಸುಪ್ರೀಂ ಕೋರ್ಟ್ ಅದನ್ನು ಅಸಂವಿಧಾನಿಕ ಎಂದು ರದ್ದುಪಡಿಸಿದೆ ಎಂದು ಹೇಳಿದರು.
ಅಹಮದಾಬಾದ್, ಮಾ.23: ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಚುನಾವಣಾ ಬಾಂಡ್ (Electoral Bonds) ಬಳಸುವ ಉದ್ದೇಶವೇನು? ರಾಜಕೀಯ ಪಕ್ಷಗಳಿಗೆ ಅದು ಎಷ್ಟು ಮುಖ್ಯ ಎಂಬ ಬಗ್ಗೆ ಹೇಳಿದ್ದಾರೆ. ಇದರ ಜತೆಗೆ ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮಾತನ್ನು ಕೂಡ ನೆನಪಿಸಿಕೊಂಡಿದ್ದಾರೆ. ಹಣವಿಲ್ಲದೆ ರಾಜಕೀಯ ಪಕ್ಷವನ್ನು ನಡೆಸುವುದು ಸಾಧ್ಯವಿಲ್ಲ. ಅದಕ್ಕಾಗಿ ಕೇಂದ್ರವು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪರಿಚಯಿಸಿದೆ, ಈಗ ಸುಪ್ರೀಂ ಕೋರ್ಟ್ ಅದನ್ನು ಅಸಂವಿಧಾನಿಕ ಎಂದು ರದ್ದುಪಡಿಸಿದೆ ಎಂದು ಹೇಳಿದರು.
ಶುಕ್ರವಾರ (ಮಾ.22) ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದರು. ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಹೆಚ್ಚಿನ ನಿರ್ದೇಶನ ನೀಡಿದರೆ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮಾತನ್ನು ಕೂಡ ನೆನಪಿಸಿಕೊಂಡರು. ಅರುಣ್ ಜೇಟ್ಲಿ ಸಚಿವರಾಗಿದ್ದಾಗ, ನಾನು ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದೇವು ಎಂದರು.
ಸಂಪನ್ಮೂಲವಿಲ್ಲದೆ ಯಾವುದೇ ಪಕ್ಷವು ಬದುಕಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರ್ಕಾರಗಳು ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತವೆ. ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಹೀಗಾಗಿ, ನಾವು ರಾಜಕೀಯ ಪಕ್ಷಗಳಿಗೆ ಹಣಕಾಸು ಒದಗಿಸುವ ಈ ವ್ಯವಸ್ಥೆಯನ್ನು ಆಯ್ಕೆ ಮಾಡಿದೆ. ಚುನಾವಣಾ ಬಾಂಡ್‌ಗಳನ್ನು ಪರಿಚಯಿಸುವುದರ ಹಿಂದಿನ ಮುಖ್ಯ ಉದ್ದೇಶವೆಂದರೆ ರಾಜಕೀಯ ಪಕ್ಷಗಳು ನೇರವಾಗಿ ಹಣವನ್ನು ಪಡೆಯುವುದು, ಆದರೆ “ಅಧಿಕಾರದಲ್ಲಿರುವ ಪಕ್ಷವು ಬದಲಾದರೆ ಸಮಸ್ಯೆಗಳು ಉದ್ಭವಿಸುತ್ತವೆ ಎಂಬ ಕಾರಣದಿಂದ ದಾನಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದರು.
ಹಣಕಾಸು ಒದಗಿಸಲು ಮಾಧ್ಯಮ ಸಂಸ್ಥೆಗೆ ಪ್ರಾಯೋಜಕರ ಅಗತ್ಯವಿರುವಂತೆ, ರಾಜಕೀಯ ಪಕ್ಷಗಳಿಗೂ ತಮ್ಮ ವ್ಯವಹಾರಗಳನ್ನು ನಡೆಸಲು ಹಣದ ಅಗತ್ಯವಿದೆ. ಈ ಬಗ್ಗೆ ನೀವು ಇದರ ವಾಸ್ತವವನ್ನು ನೋಡಬೇಕು. ಪಕ್ಷಗಳು ಹೇಗೆ ಚುನಾವಣೆಯಲ್ಲಿ ಹೋರಾಡಬೇಕು? ನಾವು ಪಾರದರ್ಶಕತೆ ತರಲು ಈ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯನ್ನು ತಂದಿದ್ದೇವೆ. ಹಾಗಾಗಿ ನಾವು ಚುನಾವಣಾ ಬಾಂಡ್‌ಗಳನ್ನು ತರುವಾಗ ನಮ್ಮ ಉದ್ದೇಶ ಉತ್ತಮವಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಯಾವುದೇ ಲೋಪದೋಷಗಳು ಕಂಡುಬಂದರೆ ಅದನ್ನು ಸರಿಪಡಿಸಲು ಒಂದು ಅವಕಾಶವನ್ನು ನೀಡಬೇಕು. ಎಲ್ಲಾ ಪಕ್ಷಗಳು ಒಟ್ಟಾಗಿ ಕುಳಿತು ಸರ್ವಾನುಮತದಿಂದ ಅದರ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: 35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ನೌಕಾಪಡೆ
ನಮ್ಮ ದೇಶ ಮತ್ತು ಮೌಲ್ಯಾಧಾರಿತ ಪ್ರಜಾಪ್ರಭುತ್ವದ ಹಿತಾಸಕ್ತಿಯಲ್ಲಿ ಪ್ರತಿಯೊಬ್ಬರೂ ಪಾರದರ್ಶಕವಾಗಿರಬೇಕು ಏಕೆಂದರೆ ಹಣವಿಲ್ಲದೆ, ಪಕ್ಷಗಳು ಯಾವುದೇ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ