Cyclones: ಚಂದದ ಹೆಸರಿಟ್ಟುಕೊಂಡು ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರಾರು? ಆ ಚಂದದ ಹೆಸರುಗಳಾವವು?

| Updated By: Digi Tech Desk

Updated on: Jan 20, 2023 | 12:49 PM

Cyclone Name and Origin: ಭಾರತೀಯ ಮೆಟ್ರೊಲಾಜಿಕಲ್​ ಡಿಪಾರ್ಟ್​ಮೆಂಟ್​ (IMD) 169 ಸೈಕ್ಲೋನ್​ಗಳಿಗೆ ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್​ಗಳ ಹೆಸರೂ ಕೂಡಾ ಇದೆ.

Cyclones: ಚಂದದ ಹೆಸರಿಟ್ಟುಕೊಂಡು ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರಾರು? ಆ ಚಂದದ ಹೆಸರುಗಳಾವವು?
ಚಂಡಮಾರುತ (ಸಂಗ್ರಹ ಚಿತ್ರ)
Follow us on

ಪ್ರತೀ ವರ್ಷ ಒಂದಲ್ಲಾ ಒಂದು ಚಂಡಮಾರುತದ ಅಬ್ಬರದ ಸುದ್ದಿಯನ್ನು ಕೆಳುತ್ತೇವೆ. ಕೆಲವೊಂದು ಅತಿ ಭೀಕರತೆ ಸೃಷ್ಟಿಸಿದ್ದರೂ ಇನ್ನು ಕೆಲವು ಚಿಕ್ಕ-ಪುಟ್ಟ ಚಂಡ ಮಾರುತಗಳು. ವಿವಿಧ ಹೆಸರುಗಳಿಂದ ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರು ಯಾರು? ಎಂಬ ಕುತೂಹಲ ಇದ್ದೇ ಇದೆ ಅಲ್ವೇ?. ಭಾರತೀಯ ಹವಾಮಾನ ಇಲಾಖೆ (IMD) 169 ಸೈಕ್ಲೋನ್​ಗಳಿಗೆ (ಚಂಡಮಾರುತ) ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್​ಗಳ ಹೆಸರೂ ಕೂಡಾ ಇದೆ.

ಪ್ರತಿ ಸೈಕ್ಲೋನ್​ಗಳೂ ಕೂಡಾ ಸಮುದ್ರವನ್ನು ದಾಟಿಯೇ ಬರುತ್ತದೆ. ಹೀಗಾಗಿ ಪ್ರಾದೇಶಿಕ ಹವಾಮಾನ ಇಲಾಖೆ (RSMCs), ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೆಂದ್ರಗಳು​ (TCWCs), ಭಾರತೀಯ ಹವಾಮಾನ ಇಲಾಖೆ (IMP) ಹಾಗೂ 5 TCWCs ಸೇರಿ ಸೈಕ್ಲೋನ್​ಗಳಿಗೆ ಹೆಸರನ್ನು ಸೂಚಿಸುತ್ತವೆ.

ಹೊರಡಿಸಲಾದ ಸೈಕ್ಲೋನ್​ಗಳ ವಿವಿಧ ಹೆಸರಿನ ಪಟ್ಟಿಯಲ್ಲಿ 13 ದೇಶಗಳಿಂದ ಸಲಹೆಗಳನ್ನು ಪಡೆದುಕೊಂಡಿದ್ದು, ‘ಅಂಫಾನ್​’ ಎಂಬ ಹೊಸ ಸೈಕ್ಲೋನ್​ ಹೆಸರೂ ಕೂಡಾ ಸೇರಿಕೊಂಡಿದೆ. ಈ ಸೈಕ್ಲೋನ್​ ಬಂಗಾಳಕೊಲ್ಲಿಯಿಂದ ಬಂದು ಅಂಡಮಾನ್​ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.

ನೆನಪಿಟ್ಟಿಕೊಳ್ಳಲು ಸುಲಭವಾಗುವಂತೆ ಸೈಕ್ಲೋನ್​ಗಳಿಗೆ ಹೆಸರನ್ನು ಇಡಲಾಗಿದೆ. ಹಾಗೆಯೇ ಮಾಧ್ಯಮ, ವಿಜ್ಞಾನ- ಸಂಸ್ಥೆಗಳಿಗೂ ವಿವಿಧ ಹೆಸರಿನ ಸೈಕ್ಲೋನ್​ಗಳ ಪಟ್ಟಿ ಸಹಾಕಯವಾಗುತ್ತದೆ. ಒಂದು ಸೈಕ್ಲೋನ್​ ಇದ್ದರೆ ಅದಕ್ಕೆ ಹೆಸರು ನೀಡುವುದು ಸುಲಭ. ಆದರೆ ಅದರ ಜೊತೆಗೆ ಇನ್ನೊಂದು ಸೈಕ್ಲೋನ್​ ಸೇರಿಕೊಂಡರೆ ಅದಕ್ಕೆ ಹೆಸರು ನೀಡಲು ಗೊಂದಲ ಉಂಟಾಗುತ್ತದೆ.

ಹೆಸರಿಡುವುದು ಏಕೆ?
ಅಷ್ಟಕ್ಕೂ ಚಂಡಮಾರುತಗಳಿಗೆ ಹೆಸರುಗಳನ್ನು ಏಕೆ ನೀಡಬೆಕು ಎಂಬುದಕ್ಕೆ ಕೆವೊಂದಿಷ್ಟು ಕಾರಣಗಳು ಇವೆ. ಆಯಾ ಪ್ರದೇಶದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಅಪ್ಪಳಿಸುವ ಚಂಡಮಾರುತಗಳನ್ನು ಗುರುತಿಸಲು ಸುಭವಾಗಬೇಕು. ಆ ನಿರ್ದಿಷ್ಟ ಹೆಸರಿನಿಂದ ಸೂಚಿಸಲಾದ ಚಂಡಮಾರುತದ ಹಾನಿಯ ಕುರಿತಾಗಿ ಜನರಿಗೆ ಸುಲಭದಲ್ಲಿ ಅರ್ಥೈಸಬಹುದು. ಜನರಿಗೆ ವಿವಿಧ ಸೈಕ್ಲೋನ್​ಗಳ ಕುರಿತಾದ ಸಂಪೂರ್ಣ ತಿಳುವಳಿಕೆ ಮತ್ತು ಅರಿವು ಮೂಡಿಸಲು ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗುತ್ತದೆ. ಸೈಕ್ಲೋನ್​ ಹೆಸರಿಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳ ಆಧಾರದ ಮೇಲೆ ಸೈಕ್ಲೋನ್​ಗಳಿಗೆ ನಿರ್ದಿಷ್ಟ ಹೆಸರನ್ನು ಸೂಚಿಸಲಾಗುತ್ತದೆ.

ಸೈಕ್ಲೋನ್​ಗಳಿಗೆ ಸೂಚಿಸುವ ಹೆಸರು ರಾಜಕೀಯಕ್ಕೆ ಸಂಬಂಧಿಸಿರಬಾರದು
ಯಾವುದೇ ಮತ ಹಾಗೂ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು
ಹೆಸರು ಹೇಳಲು ಸುಲಭವಾಗಿರಬೇಕು ಮತ್ತು ಚಿಕ್ಕದಾಗಿರಬೇಕು
ಹೆಸರು ಕ್ರೂರತೆಯನ್ನು ಸೂಚಿಸಬಾರದು
ಗರಿಷ್ಠ 8 ಅಕ್ಷರಗಳ ಒಳಗಿರಬೇಕು
ಒಂದು ಸೈಕ್ಲೋನ್​ಗೆ ಇಟ್ಟ ಹೆಸರು ಪುನರಾವರ್ತನೆಯಾಗಬಾರದು

ಈ ಕುರಿತಂತೆ ಭಾರತವು ಕೆಲವು ಹೆಸರುಗಳನ್ನು ಸೂಚಿಸಿದ್ದು, ವಿವಿಧ ದೇಶಗಳು ವಿವಿಧ ಹೆಸರುಗಳನ್ನು ಸೂಚಿಸಿದೆ.  ಹೆಸರುಗಳನ್ನು ಅಂತಿಮಗೊಳಿಸಲು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಮಿತಿಯನ್ನು ರಚಿಸಲಾಗುತ್ತದೆ.

Published On - 1:34 pm, Fri, 14 May 21