ಗೋಧಿ ರಫ್ತು: ಲೋಪದೋಷಗಳನ್ನು ಸರಿಪಡಿಸಲು ಕಟ್ಟು ನಿಟ್ಟಾದ ಹೊಸ ನಿಯಮ ಹೊರಡಿಸಿದ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: May 31, 2022 | 2:44 PM

ಅರ್ಹ ರಫ್ತುದಾರರ ಸಂದರ್ಭದಲ್ಲಿ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಲು ಪ್ರಾದೇಶಿಕ ಅಧಿಕಾರಿಗಳು ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಗೋಧಿ ರಫ್ತು: ಲೋಪದೋಷಗಳನ್ನು ಸರಿಪಡಿಸಲು ಕಟ್ಟು ನಿಟ್ಟಾದ ಹೊಸ ನಿಯಮ ಹೊರಡಿಸಿದ ಸರ್ಕಾರ
ಗೋಧಿ
Follow us on

ಉಕ್ರೇನ್- ರಷ್ಯಾದ ಯುದ್ಧದ ನಡುವೆ ದೇಶೀಯ ಧಾನ್ಯದ ಬೆಲೆಗಳನ್ನು ನಿಯಂತ್ರಿಸಲು ಮತ್ತು ರಾಷ್ಟ್ರೀಯ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತದ ಪ್ರಯತ್ನಗಳ ಭಾಗವಾಗಿ ನಿಯಂತ್ರಿಸಲಾದ ಗೋಧಿಯ ರಫ್ತು (Wheat Export) ಬಗ್ಗೆ ಮೇ 13 ರ ಆದೇಶದ ಕುರಿತು ಖಾಸಗಿ ರಫ್ತುದಾರರ ಅನುಸರಣೆ ಖಚಿತಪಡಿಸಿಕೊಳ್ಳಲು ಸರ್ಕಾರವು ಸೋಮವಾರ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಹೊರಡಿಸಿದೆ. ಅರ್ಹ ರಫ್ತುದಾರರ ಸಂದರ್ಭದಲ್ಲಿ ನೋಂದಣಿ ಪ್ರಮಾಣಪತ್ರಗಳನ್ನು (registration certificates) ವಿತರಿಸಲು ಪ್ರಾದೇಶಿಕ ಅಧಿಕಾರಿಗಳು (Regional authorities) ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಆದಾಗ್ಯೂ, ಕೆಲವರು ನಿಷೇಧವನ್ನು ತಪ್ಪಿಸಲು ಮೇ 13 ರ ಮೊದಲು ಸಾಲದ ಪತ್ರವನ್ನು (letter of credit) ಬ್ಯಾಕ್‌ಡೇಟ್ ಮಾಡುತ್ತಿದ್ದಾರೆ. ‘ಆದ್ದರಿಂದ ವ್ಯವಸ್ಥೆಯಲ್ಲಿ ಹೆಚ್ಚಿನ ತಪಾಸಣೆಗಳನ್ನು ಮಾಡಬೇಕಾಗಿದೆ’ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಹೇಳಿದೆ. “ಲೋಪದೋಷಗಳನ್ನು ಸರಿ ಮಾಡಲು, , ಈಗಾಗಲೇ ಅನುಮೋದಿಸಲಾದ ಅಥವಾ ಪ್ರಕ್ರಿಯೆಯಲ್ಲಿರುವ ಎಲ್ಲಾ ಲೆಟರ್ ಆಫ್ ಕ್ರೆಡಿಟ್​​ಗಳ ಭೌತಿಕ ಪರಿಶೀಲನೆಯನ್ನು ಪ್ರಾದೇಶಿಕ ಅಧಿಕಾರಿಗಳು ಮಾಡಲಿದ್ದಾರೆ ಎಂದು ಅಧಿಸೂಚನೆಯು ಹೇಳಿದೆ. ಅಗತ್ಯವಿದ್ದರೆ ವೃತ್ತಿಪರ ಏಜೆನ್ಸಿಯ ಸಹಾಯವನ್ನು ತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ.

ಸಂಬಂಧಿತ ಬ್ಯಾಂಕ್‌ಗಳನ್ನು ಒಳಗೊಂಡಿರುವ SWIFT (ಜಾಗತಿಕ ಹಣಕಾಸು ಸಂಸ್ಥೆಗಳು ಬಳಸುವ ಉನ್ನತ ಮಟ್ಟದ ಸಂದೇಶ ಕಳುಹಿಸುವ ವ್ಯವಸ್ಥೆ) ವಹಿವಾಟಿನ ಜೊತೆಗೆ ಎಲ್​​ಸಿಯ ವಿತರಣೆಯ ದಿನಾಂಕವನ್ನು ಹೋಲಿಸಲು ಪ್ರಾದೇಶಿಕ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಎಲ್​​ಸಿ ದಿನಾಂಕವು 13.05.2022 ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಆಗಿದ್ದು ಭಾರತೀಯ ಮತ್ತು ವಿದೇಶಿ ಬ್ಯಾಂಕ್ ನಡುವಿನ SWIFT ಸಂದೇಶ/ಸಂದೇಶ ವಿನಿಮಯ ದಿನಾಂಕವು 13.05.2022 ನಂತರದ್ದು ಆಗಿರುವ ಸಂದರ್ಭಗಳಲ್ಲಿ ಪ್ರಾದೇಶಿಕ ಅಧಿಕಾರಿಗಳು ಸಂಪೂರ್ಣ ತನಿಖೆಯನ್ನು ನಡೆಸಬಹುದು. ಅಗತ್ಯವಿದ್ದರೆ ಬಾಹ್ಯ ಏಜೆನ್ಸಿಗಳ ಸಹಾಯವನ್ನು ಪಡೆಯಬಹುದು. ಇವುಗಳು ಹಿಂದಿನ ದಿನಾಂಕವೆಂದು ಕಂಡು ಬಂದರೆ ರಫ್ತುದಾರರ ವಿರುದ್ಧ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಭಾರತಕ್ಕೆ ಒತ್ತಾಯಿಸಿದ ಐಎಂಎಫ್ ಮುಖ್ಯಸ್ಥೆ
Wheat: ಉಕ್ರೇನ್ ಯುದ್ಧದ ನಂತರ ಜಗತ್ತಿನಲ್ಲಿ ಉಳಿದಿರುವುದು ಕೇವಲ 10 ವಾರಕ್ಕಾಗುವಷ್ಟು ಗೋಧಿ ಮಾತ್ರ: ವರದಿ
ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ
ಭಾರತ ರಫ್ತು ನಿಷೇಧಿಸಿದ ನಂತರ ದಾಖಲೆಯ ಏರಿಕೆ ಕಂಡ ಗೋಧಿ ಬೆಲೆ: ವರದಿ

ಖಾಸಗಿ ರಫ್ತುದಾರರು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆಂದು ಕಂಡುಬಂದರೆ, ಆರ್ಥಿಕ ಅಪರಾಧಗಳ ವಿಭಾಗ / ಕೇಂದ್ರೀಯ ತನಿಖಾ ದಳದಿಂದ ತನಿಖೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ದಿನಾಂಕಗಳಲ್ಲಿ ಮಾರ್ಪಾಡು ಮಾಡಿದ್ದರೆ ಕಾನೂನಿನ ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ