ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಭಾರತಕ್ಕೆ ಒತ್ತಾಯಿಸಿದ ಐಎಂಎಫ್ ಮುಖ್ಯಸ್ಥೆ

Wheat exports Ban ಭಾರತವು ತನ್ನ ನಿಷೇಧವನ್ನು ತೆಗೆದುಹಾಕಿದರೆ ಅದು ಎಷ್ಟು ಸಹಾಯಕವಾಗುತ್ತದೆ ಎಂದು ಕೇಳಿದಾಗ, ಉಕ್ರೇನ್ ಮತ್ತು ರಷ್ಯಾವು ಯುದ್ಧದಿಂದ ಪ್ರಭಾವಿತವಾಗಿರುವ ಪ್ರದೇಶಗಳಲ್ಲಿ ಗೋಧಿ ಪ್ರಮುಖವಾಗಿದೆ. ಆದ್ದರಿಂದ ಭಾರತ ಎಷ್ಟು ರಫ್ತು ಮಾಡಬಹುದು ಮತ್ತು...

ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಭಾರತಕ್ಕೆ ಒತ್ತಾಯಿಸಿದ ಐಎಂಎಫ್ ಮುಖ್ಯಸ್ಥೆ
ಕ್ರಿಸ್ಟಲಿನಾ ಜಾರ್ಜಿವಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 24, 2022 | 10:51 PM

ದಾವೋಸ್: ಗೋಧಿ ರಫ್ತಿನ ಮೇಲಿನ ನಿಷೇಧವನ್ನು(Wheat exports Ban) ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ (Kristalina Georgieva)ಮಂಗಳವಾರ ಭಾರತಕ್ಕೆ ಮನವಿ ಮಾಡಿದ್ದಾರೆ. ಭಾರತವು ಅಂತಾರಾಷ್ಟ್ರೀಯ ಆಹಾರ ಭದ್ರತೆ ಮತ್ತು ಜಾಗತಿಕ ಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. “ಭಾರತವು ಸುಮಾರು 1.35 ಶತಕೋಟಿ ಜನರಿಗೆ ಆಹಾರವನ್ನು ನೀಡಬೇಕಾಗಿದೆ ಎಂಬ ಸಂಗತಿಯನ್ನು ನಾನು ಮೆಚ್ಚುತ್ತೇನೆ. ಕೃಷಿ ಉತ್ಪಾದಕತೆಯನ್ನು ಕಡಿಮೆ ಮಾಡಿದ ಬಿಸಿಗಾಳಿ ಬಗ್ಗೆ ಗೊತ್ತಿದೆ. ಆದರೆ ಹೆಚ್ಚಿನ ದೇಶಗಳು ರಫ್ತು ಬಯಸುವ ಕಾರಣ ಸಾಧ್ಯವಾದಷ್ಟು ಬೇಗ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಭಾರತವನ್ನು ಬೇಡಿಕೊಳ್ಳುತ್ತೇನೆ. ಯಾಕೆಂದರೆ ಈ ರೀತಿಯ ನಿರ್ಬಂಧಗಳು ಇತರರೂ ಮಾಡುವಂತೆ ಪ್ರೇರೇಪಿಸುತ್ತವೆ. ಹೀಗಾದರೆ ನಾವು ಬಿಕ್ಕಟ್ಟನ್ನು ಎದುರಿಸಲು ಕಡಿಮೆ ಸಜ್ಜುಗೊಂಡ ಜಾಗತಿಕ ಸಮುದಾಯವಾಗಿ ಬಿಡುತ್ತೇವೆ ಎಂದು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಎನ್​​ಡಿಟಿವಿ ಜತೆ ಮಾತನಾಡಿದ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. ಭಾರತವು ತನ್ನ ನಿಷೇಧವನ್ನು ತೆಗೆದುಹಾಕಿದರೆ ಅದು ಎಷ್ಟು ಸಹಾಯಕವಾಗುತ್ತದೆ ಎಂದು ಕೇಳಿದಾಗ, ಉಕ್ರೇನ್ ಮತ್ತು ರಷ್ಯಾವು ಯುದ್ಧದಿಂದ ಪ್ರಭಾವಿತವಾಗಿರುವ ಪ್ರದೇಶಗಳಲ್ಲಿ ಗೋಧಿ ಪ್ರಮುಖವಾಗಿದೆ. ಆದ್ದರಿಂದ ಭಾರತ ಎಷ್ಟು ರಫ್ತು ಮಾಡಬಹುದು ಮತ್ತು ಅದು ತನ್ನ ರಫ್ತುಗಳನ್ನು ಎಲ್ಲಿ ನಿರ್ದೇಶಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ವಿಶೇಷವಾಗಿ ರಫ್ತುಗಳು ಈಜಿಪ್ಟ್ ಅಥವಾ ಲೆಬನಾನ್‌ನಂತಹ ತೀವ್ರವಾಗಿ ಪ್ರಭಾವಿತವಾಗಿರುವ ದೇಶಗಳಿಗೆ ಹೋದರೆ ಗಮನಾರ್ಹ ಪರಿಣಾಮ ಬೀರಬಹುದು, ಅಲ್ಲಿ ನಾವು ನೋಡುವುದು ಹಸಿವಿನ ಅಪಾಯ ಮಾತ್ರವಲ್ಲ. ಸಾಮಾಜಿಕ ಅಶಾಂತಿಯ ಅಪಾಯವೂ ಅಲ್ಲಿದೆ. ಅದು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತವು ಈ ತಿಂಗಳ ಆರಂಭದಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿತು. ಇದರಿಂದಾಗಿ ದೇಶೀಯ ಬೆಲೆಗಳು ದಾಖಲೆಯ ಮಟ್ಟ ತಲುಪಿದವು. ಆದಾಗ್ಯೂ, “ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು” ಸರಬರಾಜುಗಳನ್ನು ವಿನಂತಿಸುವ ದೇಶಗಳಿಗೆ ರಫ್ತು ಮಾಡಲು ಇನ್ನೂ ಅವಕಾಶ ನೀಡುವುದಾಗಿ ಭಾರತ ಹೇಳಿದೆ.

ಈ ವರ್ಷ ದಾಖಲೆಯ ಸಾಗಣೆಯನ್ನು ಗುರಿಪಡಿಸುವುದಾಗಿ ಸರ್ಕಾರ ಘೋಷಿಸಿದ ನಂತರ ರಫ್ತು ನಿಷೇಧವು ಭಾರಿ ಯು-ಟರ್ನ್ ಆಗಿತ್ತು. ಜಾಗತಿಕ ಗೋಧಿ ರಫ್ತಿನ ಸುಮಾರು 30 ಪ್ರತಿಶತದಷ್ಟು ಉಭಯ ದೇಶಗಳು ಜಂಟಿಯಾಗಿ ಪಾಲನ್ನು ಹೊಂದಿರುವ ಕಾರಣ, ಗೋಧಿಯ ಅಂತರರಾಷ್ಟ್ರೀಯ ಪೂರೈಕೆಯು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಪ್ರಭಾವಿತವಾಗಿದೆ.

ಇದನ್ನೂ ಓದಿ
Image
Wheat: ಉಕ್ರೇನ್ ಯುದ್ಧದ ನಂತರ ಜಗತ್ತಿನಲ್ಲಿ ಉಳಿದಿರುವುದು ಕೇವಲ 10 ವಾರಕ್ಕಾಗುವಷ್ಟು ಗೋಧಿ ಮಾತ್ರ: ವರದಿ
Image
ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ
Image
ಭಾರತ ರಫ್ತು ನಿಷೇಧಿಸಿದ ನಂತರ ದಾಖಲೆಯ ಏರಿಕೆ ಕಂಡ ಗೋಧಿ ಬೆಲೆ: ವರದಿ
Image
ಗೋಧಿ ಮತ್ತು ಮೋದಿ: ವಿಶ್ವದಲ್ಲೀಗ ಗೋಧಿ ಬಿಕ್ಕಟ್ಟಿನ ಆತಂಕ, ಸಹಾಯ ಮಾಡುವ ಸ್ಥಿತಿಯಲ್ಲಿದೆಯೇ ಭಾರತ

ಯುದ್ಧದಿಂದಾಗಿ ಬಂದರುಗಳನ್ನು ಮುಚ್ಚಿರುವುದರಿಂದ ಉಕ್ರೇನ್‌ನ ರಫ್ತುಗಳಿಗೆ ತೀವ್ರವಾಗಿ ಅಡಚಣೆಯುಂಟಾಗಿದೆ. ಆದರೆ ಪಾಶ್ಚಿಮಾತ್ಯ ನಿರ್ಬಂಧಗಳಿಂದ ರಷ್ಯಾದ ರಫ್ತುಗಳ ಮೇಲೆ ಹೊಡೆತ ಬಿದ್ದಿದೆ. ಇತರ ರಫ್ತು ಶಕ್ತಿ ಕೇಂದ್ರಗಳಾದ ಕೆನಡಾ ಮತ್ತು ಆಸ್ಟ್ರೇಲಿಯಾ ಸಹ ಇಂಥದ್ದೇ ಸಮಸ್ಯೆಗಳನ್ನು ವರದಿ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 10:10 pm, Tue, 24 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ