ಮದ್ಯವ್ಯಸನಿಯಾಗಿದ್ದ ನನ್ನ ಮಗನನ್ನು ಕಾಪಾಡಲು ನನ್ನಿಂದಾಗಲಿಲ್ಲ, ಕುಡಿತದ ಚಟ ಬೇಡ ಎಂದು ಭಾವುಕರಾಗಿ ಜನರಿಗೆ ಮನವಿ ಮಾಡಿದ ಕೇಂದ್ರ ಸಚಿವ

| Updated By: ರಶ್ಮಿ ಕಲ್ಲಕಟ್ಟ

Updated on: Dec 25, 2022 | 2:58 PM

ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ, ಇದರಿಂದ ಅವನ ಹೆಂಡತಿ ವಿಧವೆಯಾದಳು. ಹಾಗಾಗಿ ಕುಡುಕರಿಂದ ನಿಮ್ಮ ಹೆಣ್ಣು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು ಎಂದು ಹೇಳಿದರು.

ಮದ್ಯವ್ಯಸನಿಯಾಗಿದ್ದ ನನ್ನ ಮಗನನ್ನು ಕಾಪಾಡಲು ನನ್ನಿಂದಾಗಲಿಲ್ಲ, ಕುಡಿತದ ಚಟ ಬೇಡ ಎಂದು ಭಾವುಕರಾಗಿ ಜನರಿಗೆ ಮನವಿ ಮಾಡಿದ ಕೇಂದ್ರ ಸಚಿವ
ಕೌಶಲ್ ಕಿಶೋರ್
Follow us on

ಸುಲ್ತಾನಪುರ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ ಎಂದು ಸಾಬೀತುಪಡಿಸುತ್ತಾರೆ. ನಿಮ್ಮನೆಯ ಹೆಣ್ಣು ಮಕ್ಕಳನ್ನು, ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಬೇಡಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್(Kaushal Kishore )ಜನರಲ್ಲಿ ಮನವಿ ಮಾಡಿದ್ದಾರೆ. ಶನಿವಾರ ಇಲ್ಲಿನ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ಡಿ-ಅಡಿಕ್ಷನ್ ಕುರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್, “ಮದ್ಯವ್ಯಸನಿಗಳ (Alcoholic) ಜೀವಿತಾವಧಿ ತುಂಬಾ ಕಡಿಮೆ” ಎಂದಿದ್ದಾರೆ.ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸಿದ ಅವರು, ‘ನಾನು ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದೇ ಇರುವಾಗ ಸಾಮಾನ್ಯ ಜನರು ಇದನ್ನು ಹೇಗೆ ಮಾಡುತ್ತಾರೆ’ ಎಂದು ಕೇಳಿದ್ದಾರೆ. “ನನ್ನ ಮಗ (ಆಕಾಶ್ ಕಿಶೋರ್) ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದನು. ಅವನನ್ನು ಡಿ-ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಯಿತು, ಅವನು ಕೆಟ್ಟ ಚಟವನ್ನು ಬಿಡುತ್ತಾನೆ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆ ಮಾಡಿಸಿದೆವು. ಆದರೆ ಅವನು ಮತ್ತೆ ಕುಡಿಯಲು ಪ್ರಾರಂಭಿಸಿದನು. ಅವನ ಮದುವೆಯ ನಂತರವೂ ಕುಡಿದ.ಕುಡಿತವೇ ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ, ಅಕ್ಟೋಬರ್ 19 ರಂದು, ಆಕಾಶ್ ನಿಧನರಾದಾಗ ಅವರ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎಂದಿದ್ದಾರೆ ಸಚಿವರು.

ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ, ಇದರಿಂದ ಅವನ ಹೆಂಡತಿ ವಿಧವೆಯಾದಳು. ಹಾಗಾಗಿ ಕುಡುಕರಿಂದ ನಿಮ್ಮ ಹೆಣ್ಣು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು ಎಂದು ಹೇಳಿದರು. “ಸ್ವಾತಂತ್ರ್ಯ ಚಳವಳಿಯಲ್ಲಿ, 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು, ಆದರೆ ಮದ್ಯ ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಾರೆ” ಎಂದು  ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಪಕ್ಷ ಸ್ಥಾಪನೆ ಜತೆಗೆ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನೂ ಘೋಷಿಸಿದ ಜನಾರ್ದನ ರೆಡ್ಡಿ

ಉತ್ತರ ಪ್ರದೇಶದ ಮೋಹನ್‌ಲಾಲ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದರು ಸುಮಾರು 80 ಪ್ರತಿಶತದಷ್ಟು ಕ್ಯಾನ್ಸರ್ ಸಾವುಗಳು ತಂಬಾಕು, ಸಿಗರೇಟ್ ಮತ್ತು ‘ಬೀಡಿ’ ವ್ಯಸನದಿಂದ ಉಂಟಾಗುತ್ತವೆ ಎಂದು ಹೇಳಿದರು. ವ್ಯಸನಮುಕ್ತಗೊಳಿಸುವ ಕಾರ್ಯಕ್ರಮದ ಭಾಗವಾಗಿ ಜನರು ಮತ್ತು ಇತರ ಸಂಘ ಸಂಸ್ಥೆಗಳು ತಮ್ಮ ಕುಟುಂಬವನ್ನು ಉಳಿಸಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲೆಯನ್ನು ವ್ಯಸನಮುಕ್ತವನ್ನಾಗಿ ಮಾಡಲು ಎಲ್ಲಾ ಶಾಲೆಗಳಿಗೆ ವ್ಯಸನಮುಕ್ತ ಅಭಿಯಾನವನ್ನು ಕೊಂಡೊಯ್ಯಬೇಕು. ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದು ಸಚಿವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ