AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮಾರಾಟವಾಗುತ್ತಿರುವ ನಕಲಿ ಲಿವರ್ ಔಷಧದ ಬಗ್ಗೆ WHO ಎಚ್ಚರಿಕೆ

ಇದೇ ಔಷಧಿಯನ್ನು ಅರ್ಜೆಂಟೀನಾ, ಆಸ್ಟ್ರೇಲಿಯಾ, ಲಾಟ್ವಿಯಾ, ಮಲೇಷಿಯಾ ಮತ್ತು ಸೌದಿ ಅರೇಬಿಯಾದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಾಗ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ 2020ರ ಮೇನಲ್ಲಿ ಎಚ್ಚರಿಕೆಯನ್ನು ನೀಡಿತ್ತು.

ಭಾರತದಲ್ಲಿ ಮಾರಾಟವಾಗುತ್ತಿರುವ ನಕಲಿ ಲಿವರ್ ಔಷಧದ ಬಗ್ಗೆ WHO ಎಚ್ಚರಿಕೆ
ಸಾಂದರ್ಭಿಕ ಚಿತ್ರImage Credit source: Reuters
Follow us
ಸುಷ್ಮಾ ಚಕ್ರೆ
|

Updated on:Sep 05, 2023 | 11:31 AM

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಮತ್ತು ಟರ್ಕಿಯಲ್ಲಿ DEFITELIO ಎಂಬ ಹೆಸರಿನ ನಕಲಿ ಲಿವರ್ ಔಷಧಿ ಮಾರಾಟವಾಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದೆ. ಭಾರತದಲ್ಲಿ 2023ರ ಏಪ್ರಿಲ್​ನಲ್ಲಿ ಮತ್ತು ಟರ್ಕಿಯಲ್ಲಿ 2023ರ ಜುಲೈನಲ್ಲಿ ಪತ್ತೆಯಾದ ಔಷಧದ ನಕಲಿ ಬ್ಯಾಚ್ ಅನ್ನು ಉಲ್ಲೇಖಿಸಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

DEFITELIO ಅನ್ನು ವಯಸ್ಕರು, ಹದಿಹರೆಯದವರು, ಮಕ್ಕಳು ಮತ್ತು 1 ತಿಂಗಳ ನಂತರದ ಶಿಶುಗಳಿಗೆ ಹೆಮಟೊಪಯಟಿಕ್ ಸ್ಟೆಮ್-ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಔಷಧಿಯ ನಿಜವಾದ ತಯಾರಕರು ಈ ನಕಲಿ ಔಷಧಿಯನ್ನು ಗುರುತಿಸಿದ್ದಾರೆ. ಹಾಗೇ DEFITELIO ಭಾರತ ಮತ್ತು ಟರ್ಕಿಯಲ್ಲಿ ಮಾರ್ಕೆಟಿಂಗ್ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಈ ನಕಲಿ ಔಷಧವನ್ನು ಗುರುತಿಸುವುದು ಹೇಗೆ ಎಂಬ ಮಾರ್ಗಸೂಚಿಯನ್ನೂ ನೀಡಲಾಗಿದೆ.

ಇದನ್ನೂ ಓದಿ: Cough Syrups: ಕೆಮ್ಮಿನ ಸಿರಪ್​ನಿಂದ ಸಾವು; ಭಾರತದ 7, ಇಂಡೋನೇಷ್ಯಾದ 13 ಔಷಧಗಳತ್ತ ಡಬ್ಲ್ಯೂಎಚ್​ಒ ಬೊಟ್ಟು

ಲೋಟ್ 20G20A ಲೋಗೋ ಇರುವ ನಿಜವಾದ DEFITELIO ಅನ್ನು ಜರ್ಮನ್ ಅಥವಾ ಆಸ್ಟ್ರಿಯನ್ ಪ್ಯಾಕೇಜಿಂಗ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಈ ಔಷಧದ ನಕಲಿ ಉತ್ಪನ್ನಗಳು ಯುಕೆ ಅಥವಾ ಐರ್ಲೆಂಡ್ ಪ್ಯಾಕೇಜಿಂಗ್‌ನಲ್ಲಿವೆ. ಇದರ ಸೀರೀಸ್ ನಂಬರ್ ಬ್ಯಾಚ್ 20G20Aನೊಂದಿಗೆ ಸಂಬಂಧ ಹೊಂದಿಲ್ಲ ಎಂದು ಈ ಔಷಧದ ಅಸಲಿ ತಯಾರಕ ಸಂಸ್ಥೆ ದೃಢಪಡಿಸಿದೆ.

ಇದೇ ಔಷಧಿಯನ್ನು ಅರ್ಜೆಂಟೀನಾ, ಆಸ್ಟ್ರೇಲಿಯಾ, ಲಾಟ್ವಿಯಾ, ಮಲೇಷಿಯಾ ಮತ್ತು ಸೌದಿ ಅರೇಬಿಯಾದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಾಗ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ 2020ರ ಮೇನಲ್ಲಿ ಎಚ್ಚರಿಕೆಯನ್ನು ನೀಡಿತ್ತು.

ಇದನ್ನೂ ಓದಿ: ಇರಾಕ್‌ನಲ್ಲಿ ಮಾರಾಟವಾದ ಭಾರತದ ಕಂಪನಿಯ ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಈ ನಕಲಿ ಔಷಧಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಇದರಿಂದ ಜೀವಕ್ಕೂ ಅಪಾಯವಾಗಬಹುದು. WHO ಈ ನಕಲಿ ಔಷಧವನ್ನು ಬಳಸದಂತೆ ಸಲಹೆ ನೀಡಿದೆ. ಈ ಉತ್ಪನ್ನವನ್ನು ಬಳಸಿದ ಅಥವಾ ಇದನ್ನು ಉಪಯೋಗಿಸಿ ತೊಂದರೆ ಅನುಭವಿಸಿದವರು ಯಾರಾದರೂ ಇದ್ದರೆ ಅವರು ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Tue, 5 September 23

ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್