
ಕೊರೊನಾ ಸೋಂಕಿನ ವಿರುದ್ಧ ತುಸು ಪರಿಣಾಮಕಾರಿ ಅಸ್ತ್ರಗಳಾಗಿ HCQ ಮತ್ತು ರೆಮ್ಡಿಸಿವಿರ್ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ, HCQ (ಹೈಡ್ರಾಕ್ಸಿ ಕ್ಲೋರೋ ಕ್ವಿನ್) ಮತ್ತು ರೆಮ್ಡಿಸಿವಿರ್ ಔಷಧಿಗಳಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಎರಡೂ ಔಷಧಿಗಳ ಬಳಕೆ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಇವುಗಳನ್ನು ಬಳಸಬೇಕಾ, ಬೇಡವಾ ಎಂಬುದರ ಬಗ್ಗೆ ಮರುಪರಿಶೀಲನೆ ನಡೆಸಲಾಗುತ್ತಿದೆ.