
ನವದೆಹಲಿ, ಅಕ್ಟೋಬರ್ 6: 2025ರ ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Polls) ದಿನಾಂಕಗಳನ್ನು ಘೋಷಿಸಲಾಗಿದೆ. ರಾಜ್ಯದ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವು ನವೆಂಬರ್ 6ರಂದು ಮತ್ತು ಎರಡನೇ ಹಂತವು ನವೆಂಬರ್ 11ರಂದು ನಡೆಯಲಿದೆ. ಫಲಿತಾಂಶಗಳನ್ನು ನವೆಂಬರ್ 14ರಂದು ಘೋಷಿಸಲಾಗುವುದು. ಈಗ, ಬಿಹಾರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಕೆಲವು ಸಮೀಕ್ಷೆಗಳನ್ನು ನಡೆಸಲಾಗಿದೆ.
ಯಾರಿಗೆ ಎಷ್ಟು ಸೀಟುಗಳು?:
ಎನ್ಡಿಎ- 150-160
ಮಹಾ ಮೈತ್ರಿಕೂಟ- 70-85
ಇತರೆ- 9-12
ಇದನ್ನೂ ಓದಿ: Bihar Election 2025 Schedule: ಬಿಹಾರದಲ್ಲಿ ನವೆಂಬರ್ 6, 11ರಂದು 2 ಹಂತದಲ್ಲಿ ವಿಧಾನಸಭಾ ಚುನಾವಣೆ
ಅಭಿಪ್ರಾಯ ಸಮೀಕ್ಷೆಯ ಮಾಹಿತಿಯ ಪ್ರಕಾರ, NDA ಪ್ರಸ್ತುತ ಮುನ್ನಡೆಯಲ್ಲಿದೆ. ಆದರೆ ವಿರೋಧ ಪಕ್ಷಗಳ ಮಹಾಮೈತ್ರಿಕೂಟವು ಹಿಂದುಳಿದಿರುವಂತೆ ಕಂಡುಬರುತ್ತಿದೆ. ಒಟ್ಟಾರೆಯಾಗಿ, ಅಭಿಪ್ರಾಯ ಸಂಗ್ರಹದ ಮಾಹಿತಿಯು ಇದೀಗ ಅಧಿಕಾರದಲ್ಲಿರುವ ಎನ್ಡಿಎ ಪರವಾಗಿ ಕಂಡುಬರುತ್ತಿದೆ.
ಪಕ್ಷವಾರು ಅಭಿಪ್ರಾಯ ಸಂಗ್ರಹಗಳು:
ಬಿಜೆಪಿ- 80-85
ಜೆಡಿಯು- 60-65
ಆರ್‌ಜೆಡಿ- 60-65
ಹ್ಯಾಮ್- 3-6
ಎಲ್‌ಜೆಪಿ-ಆರ್- 4-6
ಆರ್‌ಎಲ್‌ಎಂ- 1-2
ಕಾಂಗ್ರೆಸ್ – 7-10
ಸಿಪಿಐ-ಎಂಎಲ್- 6-9
ಸಿಪಿಐ- 0-1
ಸಿಪಿಐಎಂ- 0-1
ವಿಐಪಿ- 2-4
IANS–Matriz: Bihar Assembly Elections – Opinion Poll 2025, (By Alliance) pic.twitter.com/8JgRSygck4
— IANS (@ians_india) October 6, 2025
ಮ್ಯಾಟ್ರಿಜ್-ಐಎಎನ್‌ಎಸ್ ಸಮೀಕ್ಷೆ:
MATRIZE-IANS ಅಭಿಪ್ರಾಯ ಸಮೀಕ್ಷೆಯ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಬಿಜೆಪಿ 80ರಿಂದ 85 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಯು 60ರಿಂದ 65 ಸ್ಥಾನಗಳನ್ನು ಗೆಲ್ಲಬಹುದು. ಜಿತನ್ ರಾಮ್ ಮಾಂಝಿ ಅವರ ಪಕ್ಷ 3ರಿಂದ 6 ಸ್ಥಾನಗಳನ್ನು ಗೆಲ್ಲಬಹುದು. ಚಿರಾಗ್ ಪಾಸ್ವಾನ್ ಅವರ ಪಕ್ಷ 4ರಿಂದ 6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎನ್ಡಿಎಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಬಿಸಾಡಲೆತ್ನಿಸಿದ ವಕೀಲ
ವಿರೋಧ ಪಕ್ಷಗಳಲ್ಲಿ, ಆರ್‌ಜೆಡಿ 60ರಿಂದ 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ 7ರಿಂದ 10 ಸ್ಥಾನಗಳನ್ನು ಗೆಲ್ಲಬಹುದು. ಸಿಪಿಐ-ಎಂಎಲ್ 6ರಿಂದ 9 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಮುಖೇಶ್ ಸಾಹ್ನಿ ಅವರ ಪಕ್ಷ 2ರಿಂದ 4 ಸ್ಥಾನಗಳನ್ನು ಗೆಲ್ಲಬಹುದು. ಮಹಾ ಮೈತ್ರಿಕೂಟದಲ್ಲಿ ಆರ್‌ಜೆಡಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ.
ಹೊಸ ಪಕ್ಷವಾದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನ ಸುರಾಜ್ ಪಕ್ಷವು ಶೇ. 7ರಷ್ಟು ಮತಗಳನ್ನು ಪಡೆದು 2ರಿಂದ 5 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ಇತರ ಪಕ್ಷಗಳು ಶೇ. 7ರಷ್ಟು ಮತಗಳನ್ನು ಪಡೆದು 7-10 ಸ್ಥಾನಗಳನ್ನು ಪಡೆಯಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ