ದೆಹಲಿ: ಆಗಸ್ಟ್ 27ರವರೆಗೆ ದೇಶಾದ್ಯಂತ ಅನೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಅದರಲ್ಲೂ ಪಶ್ಚಿಮ ಬಂಗಾಳ, ಸಿಕ್ಕಿಂ, ಮೇಘಾಲಯ, ಅಸ್ಸಾಂ, ಬಿಹಾರ್, ಉತ್ತರಾಖಂಡ್, ಉತ್ತರಪ್ರದೇಶ, ಕೇರಳ, ತಮಿಳುನಾಡು ಪುದುಚೇರಿಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ನೀಡಿದೆ.
ಆಗಸ್ಟ್ 25ರಿಂದ ಮಾನ್ಸೂನ್ ಹಿಮಾಲಯದ ತಪ್ಪಲುಗಳಲ್ಲಿ ಸಂಚರಿಸಲಿದ್ದು, 26ರವರೆಗೂ ಮುಂದುವರಿಯುತ್ತದೆ. ಹಾಗಾಗಿ, ಪ್ರಬಲ ಆಗ್ನೇಯ ಮತ್ತು ನೈಋತ್ಯ ಮಾರುತಗಳು ಬಂಗಾಳಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಸಂಚಾರ ಮಾಡುತ್ತವೆ. ಈ ಕಾರಣದಿಂದ ಇಂದು ಮತ್ತು ನಾಳೆ (ಆಗಸ್ಟ್ 25) ಮೇಘಾಲಯ-ಅಸ್ಸಾಂಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಹಾಗೇ, ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳ, ಸಿಕ್ಕಿಂಗಳಲ್ಲಿ ಆಗಸ್ಟ್ 27ರವರೆಗೂ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.
ಪೂರ್ವ ಭಾರತದಲ್ಲೂ ಕೂಡ ಮುಂದಿನ ಮೂರು ದಿನಗಳ ಕಾಲ ಗುಡುಗು-ಮಿಂಚು ಸಹಿತ ಮಳೆಯಾಗಬಹುದು. ಮುಂದಿನ 5 ದಿನಗಳ ಕಾಲ ವಾಯುವ್ಯ, ಮಧ್ಯ ಭಾರತ ಹಾಗೂ ಪಶ್ಚಿಮ ಕರಾವಳಿಯಲ್ಲಿ ಮಳೆ ಕಡಿಮೆಯಾಗಲಿದೆ ಎಂದೂ ಐಎಂಡಿ ವರದಿ ಮಾಡಿದೆ.
ಇದನ್ನೂ ಓದಿ: ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಕಾಲೇಜಿನ ಬಳಿ 2 ದಿನದ ಹೆಣ್ಣು ಶಿಶು ಬಿಟ್ಟುಹೋಗಿರುವ ದುರುಳರು
Published On - 12:38 pm, Wed, 25 August 21